For Quick Alerts
  ALLOW NOTIFICATIONS  
  For Daily Alerts

  'ಲಕ್ಷೀ ಬಾಂಬ್' ಸಿನಿಮಾದ 'ಬುರ್ಜ್ ಖಲೀಫಾ' ಸಾಂಗ್: ಅಕ್ಷಯ್-ಕಿಯಾರಾ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಲಕ್ಷೀ ಬಾಂಬ್ ಸಿನಿಮಾ ಒಂದಲ್ಲೊಂದು ವಿಚಾರದ ಮೂಲಕ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ವಿವಾದದ ಮೂಲಕ ಸುದ್ದಿ ಮಾಡುತ್ತಿದ್ದ ಲಕ್ಷೀ ಬಾಂಬ್ ಈಗ ಹಾಡಿನ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದೆ.

  ಇತ್ತೀಚಿಗಷ್ಟೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಭಿಮಾನಿಗಳ ಜೊತೆ ಚಿತ್ರರಂಗದ ಗಣ್ಯರು ಸಹ ಟ್ರೈಲರ್ ಮತ್ತು ಅಕ್ಷಯ್ ಅಭಿನಯನ್ನು ಹಾಡಿ ಹೊಗಳಿದ್ದಾರೆ. ಇದರ ಬೆನ್ನಲ್ಲೇ ಈಗ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಚಿತ್ರದ ಬಹುಮುಖ್ಯ ಹಾಡು ಇದಾಗಿದ್ದು, ಅಕ್ಷಯ್ ಮತ್ತು ನಟಿ ಕಿಯಾರಾ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಅಕ್ಷಯ್ ಕುಮಾರ್ 'ಲಕ್ಷ್ಮೀ ಬಾಂಬ್' ಸಿನಿಮಾದ ವಿರುದ್ಧ ಲವ್ ಜಿಹಾದ್ ಆರೋಪ: #ShameonuAkshayKumar ಟ್ರೆಂಡ್

  ಬುರ್ಜ್ ಖಲೀಫಾ ಎನ್ನುವ ಹಾಡು ಇದಾಗಿದ್ದು, ಈ ಹಾಡಿನಲ್ಲಿ ಅಕ್ಷಯ್ ಮತ್ತು ಕಿಯಾರಾ ಇಬ್ಬರು ತರಹೇವಾರಿ ಕಾಸ್ಟ್ಯೂಮ್ ಧರಿಸಿ ಮಸ್ತ್ ಸ್ಟೆಪ್ ಹಾಕಿದ್ದಾರೆ. ಇಬ್ಬರ ಡ್ಯಾನ್ಸ್ ನೋಡಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಅಂದ್ಹಾಗೆ ಈ ಹಾಡನ್ನು ದುಬೈನಲ್ಲಿ ಚಿತ್ರೀಕರಣ ಮಾಡಲಾಗಿದೆ. ಬುರ್ಜ್ ಖಲೀಫಾ ಬಳಿಯೇ ಸೆರೆಹಿಡಿಯಲಾಗಿದ್ದು ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

  ಅಂದ್ಹಾಗೆ ಲಕ್ಷ್ಮೀ ಬಾಂಬ್ ಸಿನಿಮಾ ತಮಿಳಿನ ಕಾಂಚನಾ ಸಿನಿಮಾದ ರಿಮೇಕ್. ಮೂಲ ನಿರ್ದೇಶಕ ರಾಘವ್ ಲಾರೆನ್ಸ್ ಅವರೇ ಲಕ್ಷೀ ಬಾಂಬ್ ಸಿನಿಮಾಗೂ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಮೊನ್ನೆಮೊನ್ನೆಯಷ್ಟೆ ಈ ಸಿನಿಮಾ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಸಿನಿಮಾ ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದರು. ಈ ಸಿನಿಮಾದ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಸಿನಿಮಾತಂಡ ಹೆಚ್ಚು ತಲೆಡೆಸಿಕೊಳ್ಳದೆ ಸಿನಿಮಾ ಪ್ರಮೋಷನ್ ಕಡೆ ಹೆಚ್ಚು ಗಮನ ನೀಡಿದೆ. ಅಂದ್ಹಾಗೆ ಲಕ್ಷೀ ಬಾಂಬ್ ಸಿನಿಮಾ ನವೆಂಬರ್ 9ರಂದು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

  English summary
  Akshay Kumar starrer Laxmmi Bomb movie Burj Khalifa Song release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X