ಆಲಿಯಾ ಭಟ್‌ ಹಾಡಿಗಾಗಿ ಬಹುದೊಡ್ಡ ಮೊತ್ತ ಖರ್ಚು ಮಾಡಿದ ರಾಜಮೌಳಿ

ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್ ಆರ್ ಆರ್ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಸೀತೆ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿರುವ ಆಲಿಯಾ ಭಟ್ ಅದಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ.

ಟಾಕಿ ಪೋಷನ್ ಸಂಪೂರ್ಣವಾಗಿ ಮುಗಿಸಿರುವ ಆರ್‌ಆರ್‌ಆರ್ ಚಿತ್ರತಂಡ ಕೇವಲ ಎರಡು ಹಾಡುಗಳನ್ನು ಬಾಕಿ ಉಳಿಸಿಕೊಂಡಿದೆಯಂತೆ. ಇದರಲ್ಲಿ ಆಲಿಯಾ ಭಟ್ ಅವರ ಹಾಡೊಂದು ಇದ್ದು, ಬಹಳ ವಿಶೇಷವಾಗಿ ಮೂಡಿ ಬರಲಿದೆಯಂತೆ.

ಈ ಹಾಡಿನ ಶೂಟಿಂಗ್ ಮುಗಿಯುತ್ತಿದ್ದಂತೆ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಹೇಳಿದಂತೆ ಅಕ್ಟೋಬರ್ 13ಕ್ಕೆ ಆರ್‌ಆರ್‌ಆರ್‌ ಸಿನಿಮಾ ರಿಲೀಸ್ ಆಗಬೇಕಿತ್ತು. ಕೋವಿಡ್ ಪರಿಸ್ಥಿತಿಯ ಪರಿಣಾಮ ಅದು ಸಾಧ್ಯವಾಗಲಿಲ್ಲ. ಈಗ ಹೊಸ ದಿನಾಂಕ ಪ್ರಕಟಿಸಬೇಕಿದೆ.

Alia Bhatts Song In RRR To Cost Rs 6 Crore

ಈ ಹಿಂದೆ ವರದಿ ಮಾಡಿದಂತೆ ಆಲಿಯಾ ಭಟ್ ನಟನೆಯಲ್ಲಿ ಮೂಡಿ ಬರಲಿರುವ ಹಾಡಿಗಾಗಿ ಬಹುದೊಡ್ಡ ಮೊತ್ತ ಖರ್ಚು ಮಾಡಲು ನಿರ್ಮಾಪಕರು ನಿರ್ಧರಿಸಿದ್ದರು. ಈಗ ಹಣದ ಬಗ್ಗೆ ಮಾಹಿತಿ ಸಿಕ್ಕಿದೆ. ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ ಆಲಿಯಾ ಭಟ್ ಹಾಡಿಗೆ ಬರೋಬ್ಬರಿ 6 ಕೋಟಿ ವೆಚ್ಚ ಭರಿಸುತ್ತಿದ್ದಾರಂತೆ.

ಈ ಹಾಡಿನಲ್ಲಿ ಆಲಿಯಾ ಭಟ್ ಜೊತೆ ನಟ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ಸಹ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಈ ಹಾಡಿಗಾಗಿ ನಟರಿಬ್ಬರು ಅಭ್ಯಾಸ ಶುರು ಮಾಡಿದ್ದಾರಂತೆ. ''ರಾಮ್ ಚರಣ್ ಮತ್ತು ಎನ್‌ಟಿಆರ್ ಇಬ್ಬರು ಒಂದು ವಾರದಿಂದ ಹಾಡಿಗಾಗಿ ಅಭ್ಯಾಸ ಮಾಡಿದ್ದು, ಈ ಇಬ್ಬರು ಅಭಿಮಾನಿಗಳಿಗೆ ಈ ಹಾಡು ಭರ್ಜರಿ ಉಡುಗೊರೆಯಾಗಲಿದೆ'' ಎಂದು ಮೂಲವೊಂದು ತಿಳಿಸಿದೆ.

Alia Bhatts Song In RRR To Cost Rs 6 Crore

ಆರ್‌ಆರ್‌ಆರ್ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಮ್ಮರನ್ ಭೀಮ್ ಮತ್ತು ಅಲ್ಲುರಿ ಸೀತಾರಾಮರಾಜು ಅವರ ಸುತ್ತ ಕಥೆ ಮಾಡಲಾಗಿದ್ದು, ಜೂ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ನಟಿಸಿದ್ದಾರೆ. ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾ ಪಾತ್ರದಲ್ಲಿ ಹಿಂದಿ ನಟಿ ಅಲಿಯಾ ಭಟ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಹಾಲಿವುಡ್ ಕಲಾವಿದರು ಚಿತ್ರದಲ್ಲಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸುಮಾರು 450 ಕೋಟಿಗೂ ಅಧಿಕ ಬಜೆಟ್ ಆಗಿದೆ ಎಂದು ಹೇಳಲಾಗಿದೆ.

ಇನ್ನು ಅಕ್ಟೋಬರ್‌ನಿಂದ ಮುಂದಕ್ಕೆ ಹೋದ ಆರ್‌ಆರ್‌ಆರ್ ಸಿನಿಮಾ ಮುಂದಿನ ವರ್ಷಕ್ಕೆ ತೆರೆಮೇಲೆ ನೋಡಬಹುದು ಎನ್ನಲಾಗಿದೆ. ಪೋಸ್ಟ್‌ಪೋನ್ ಸುದ್ದಿ ವರದಿಯಾಗುತ್ತಿದ್ದಂತೆ ಹೊಸ ದಿನಾಂಕದ ಬಗ್ಗೆ ಚರ್ಚೆ ಜೋರಾಗಿದೆ. ಈಗಾಗಲೇ ಹಲವು ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆರ್‌ಆರ್‌ಆರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಅಧಿಕೃತ ಘೋಷಣೆ ಮಾಡಬೇಕಿದೆ.

More from Filmibeat

English summary
Bollywood Actress Alia Bhatt's song in SS Rajamouli's RRR to cost rs 6 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X