For Quick Alerts
  ALLOW NOTIFICATIONS  
  For Daily Alerts

  ಪಟಾಕಿ ಪೋರಿ ಕಿವಿಗೆ 'ಮಲ್ಲಿಗೆ ಹೂವ': ಆಲ್‌ಓಕೆ ಉಂಗುರ ಲಪಟಾಯಿಸಿ ಬೆಸ್ತುಬಿದ್ದ ಆಶಿಕಾ!

  |

  ಕನ್ನಡ ರ್ಯಾಪರ್ ಆಲ್‌ಓಕೆ 'ಮಲ್ಲಿಗೆ ಹೂವ' ಹಿಡಿದು ಮತ್ತೆ ಬಂದಿದ್ದಾರೆ. ಆಲ್‌ಓಕೆ ಹೊಸ ಆಲ್ಬಮ್‌ ಸಾಂಗ್ ರಿಲೀಸ್ ಆಗಿ ಸಖತ್ ಕಿಕ್ ಕೊಡ್ತಿದೆ. ಈ ಬಾರಿ ಆಲ್‌ಓಕೆ ಜೊತೆ ಪಟಾಕಿ ಪೋರಿ ಆಶಿಕಾ ರಂಗನಾಥ್ ಸಾಂಗ್‌ನಲ್ಲಿ ಕುಣಿದಿದ್ದಾರೆ. ಸಿಂಗಾಪುರ ಹಾಗೂ ಮಲೇಷಿಯಾ ಸಮುದ್ರದ ಮೇಲೆ ತೇಲುವ ದೊಡ್ಡ ಕ್ರೂಸ್‌ನಲ್ಲಿ ಬಹಳ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಲಾಗಿದೆ. ಇತ್ತೀಚೆಗೆ ಸಣ್ಣ ಟೀಸರ್ ಬಿಟ್ಟಿದ್ದ ಆಲ್‌ಓಕೆ ಈಗ ಕಂಪ್ಲೀಟ್ ಸಾಂಗ್ ರಿಲೀಸ್ ಮಾಡಿದ್ದಾರೆ.

  'ಹ್ಯಾಪಿ ಆಗಿದೆ', 'ರೈತ', 'ಯಾಕಿಂಗೆ' ಹೀಗೆ ಸಾಲು ಸಾಲು ರ್ಯಾಪ್ ಸಾಂಗ್‌ಗಳಿಂದ ಸದ್ದು ಮಾಡಿದ ಆಲ್‌ಓಕೆ ಹೊಸ ರ್ಯಾಪ್ ನಂಬರ್ 'ಮಲ್ಲಿಗೆ ಹೂವ'. ರ್ಯಾಪ್‌ ಸ್ಟೈಲ್‌ನಲ್ಲಿ ಮಲ್ಲಿನ ಹೂವಿನ ಪರಿಮಳದಂತೆ ಕನ್ನಡದ ಕಂಪನ್ನು ಎಲ್ಲಾ ಕಡೆ ಪಸರಿಸುವ ಕೆಲಸ ಮಾಡ್ತಿದ್ದಾರೆ. ಸ್ವತ: ಆಲ್‌ಓಕೆ ಕಂಪೋಸ್ ಮಾಡಿ, ಲಿರಿಕ್ಸ್ ಬರೆದು, ನಿರ್ಮಿಸಿ, ನಿರ್ದೇಶಿಸಿರುವ ರ್ಯಾಪ್ ಆಲ್ಬಮ್ ಸಾಂಗ್ ಇದು. ಒಂದು ಕಾನ್ಸೆಪ್ಟ್ ಮಾಡಿ ಸಾಂಗ್‌ ಡಿಸೈನ್ ಮಾಡಿದ್ದಾರೆ. ವೆರೈಟಿ ವೆರೈಟಿ ಕಾಸ್ಟ್ಯೂಮ್‌ನಲ್ಲಿ ಆಶಿಕಾ ಸಖತ್ ಬೋಲ್ಡ್ ಸ್ಟೆಪ್ಸ್ ಹಾಕಿದ್ದಾರೆ.

  Exclusive : ಒಂದಾದ್ರು ಆಲ್ ಓಕೆ & ಚಂದನ್ ಶೆಟ್ಟಿ, ಬರ್ತಿದೆ ಬಿಗ್ ಪ್ರಾಜೆಕ್ಟ್Exclusive : ಒಂದಾದ್ರು ಆಲ್ ಓಕೆ & ಚಂದನ್ ಶೆಟ್ಟಿ, ಬರ್ತಿದೆ ಬಿಗ್ ಪ್ರಾಜೆಕ್ಟ್

  ಕನ್ನಡ ಮತ್ತು ಹಿಂದಿಯಲ್ಲಿ 'ಮಲ್ಲಿಗೆ ಹೂವ' ರ್ಯಾಪ್ ಸಾಂಗ್ ನಿರ್ಮಾಣ ಆಗಿದೆ. ಒಂದು ಹುಡುಗಿನ ಪಟಾಯಿಸಿಕೊಳ್ಳೋಕೆ ಒಬ್ಬ ಹುಡುಗ ಏನೆಲ್ಲಾ ಸರ್ಕಸ್ ಮಾಡ್ತಾನೆ. ಮಲ್ಲಿಗೆ ಹೂವನ್ನು ಯಾರು ಯಾರ ತಲೆ ಇಟ್ಟರು ಅನ್ನುವುದು ಸಾಂಗ್ ಕಾನ್ಸೆಪ್ಟ್. ಸಮುದ್ರದ ಮೇಲೆ ಚಿತ್ರೀಕರಣ ಆಗಿರುವ ಚೊಚ್ಚಲ ಕನ್ನಡ ಆಲ್ಬಮ್ ಸಾಂಗ್ 'ಮಲ್ಲಿಗೆ ಹೂವ'.

   ಕಾಫಿ ನಾಡು ಚಂದು ಕೇಳಿದ್ದಕ್ಕೆ ಸಾಂಗ್

  ಕಾಫಿ ನಾಡು ಚಂದು ಕೇಳಿದ್ದಕ್ಕೆ ಸಾಂಗ್

  ವಿಭಿನ್ನವಾಗಿ ಬರ್ತ್‌ಡೇ ವಿಶ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಕಾಫಿ ನಾಡು ವಾಯ್ಸ್‌ನಲ್ಲಿ ಸಾಂಗ್‌ ಶುರುವಾಗುತ್ತದೆ. ಅತ್ತಿಗೆ ಕೈಗೆ ಯಾವಾಗ ಉಂಗುರ ಹಾಕ್ತೀರಾ ಅಲೋಕ ಅಣ್ಣ ಎಂದು ಚಂದು ಕೇಳುತ್ತಿದ್ದಂತೆ 'ಮಲ್ಲಿಗೆ ಹೂವಿ'ನಂಥ ಆಶಿಕಾ ರಂಗನಾಥ್ ಎಂಟ್ರಿ ಆಗುತ್ತೆ. ಅಲ್ಲಿಂಗ್ ಮುಂದೆ ಆಕೆಯನ್ನು ಪಟಾಯಿಸುವ ಕೆಲಸ ಶುರುವಾಗುತ್ತದೆ. ಬ್ಯೂಟಿ ಆಶಿಕಾ ಕೂಡ ಬಿಂದಾಸ್ ಆಗಿ ಕುಣಿದು ಸಖತ್ ಚಮಕ್ ಕೊಡುತ್ತಾರೆ.

  ಪ್ಯಾನ್ ಇಂಡಿಯಾಗೆ ತಲುಪುತ್ತಿದ್ದಾರೆ ಹಾಸ್ಯ ನಟ ಟೆನ್ನಿಸ್ ಕೃಷ್ಣಪ್ಯಾನ್ ಇಂಡಿಯಾಗೆ ತಲುಪುತ್ತಿದ್ದಾರೆ ಹಾಸ್ಯ ನಟ ಟೆನ್ನಿಸ್ ಕೃಷ್ಣ

   ಆಶಿಕಾ ರಂಗನಾಥ್ ಸ್ಟನ್ನಿಂಗ್ ಲುಕ್

  ಆಶಿಕಾ ರಂಗನಾಥ್ ಸ್ಟನ್ನಿಂಗ್ ಲುಕ್

  ಇದೇ ಮೊದಲ ಬಾರಿಗೆ ಆಶಿಕಾ ರಂಗನಾಥ್ ಆಲ್ಬಮ್‌ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸ್ಟನ್ನಿಂಗ್ ಲುಕ್‌ನಲ್ಲಿ ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚುತ್ತಾರೆ. ವಾರೆ ನೋಟದಲ್ಲಿ ಕೊಲ್ತಾರೆ. ಸಮುದ್ರದ ಮೇಲೆ ತೇಲುವ ಕ್ರೂಸ್‌ನಲ್ಲಿ ಹಾಕಿ ಕುಣಿದು ಮೋಡಿ ಮಾಡ್ತಾರೆ. ಕೊನೆಗೆ ಆಲ್‌ಓಕೆ ಕೈಬೆರಳಿನಲ್ಲಿದ್ದ ಚಿನ್ನದ ಉಂಗುರ ಲಪಟಾಯಿಸುತ್ತಾರೆ. ಕೊನೆಗೆ ಅದು ನಕಲಿ ಚಿನ್ನದ ಉಂಗುರ ಎಂದು ಗೊತ್ತಾಗಿ ಬೆಸ್ತು ಬೀಳುವುದನ್ನು ನೋಡಬಹುದು.

   ಸ್ಟೈಲಿಶ್ ಲುಕ್‌ನಲ್ಲಿ ಆಲ್‌ಓಕೆ ಕಮಾಲ್

  ಸ್ಟೈಲಿಶ್ ಲುಕ್‌ನಲ್ಲಿ ಆಲ್‌ಓಕೆ ಕಮಾಲ್

  ಕಲರ್‌ಫುಲ್ ಕಾಸ್ಟ್ಯೂಮ್, ಆಕ್ಸಸರೀಸ್‌ನಲ್ಲಿ ಕಂಪ್ಲೀಟ್ ಸಾಂಗ್ ಆಲ್‌ಓಕೆ ಮಿಂಚಿದ್ದಾರೆ. ರ್ಯಾಪ್ ಮಾಡಿ ಸಂಗೀತ ಪ್ರಿಯರನ್ನು ಕುಂತಲ್ಲೇ ಕುಣಿಸಿದ್ದಾರೆ. 'ನಾನೇ ನಿನ್ನ ಕೃಷ್ಣ, ನೀನೇ ನನ್ನ ನಿಧಿಮಾ' ಅನ್ನು ಲೈನ್ ಮಜಾ ಕೊಡುವಂತಿದೆ. ಬಡವ ಆದರೂ ನಿನ್ನನ್ನು ರಾಣಿ ತರ ನೋಡ್ಕೊತ್ತೀನಿ ಎಂದು ಹಾಡಿ ಹುಡುಗಿಯನ್ನು ಇಂಪ್ರೆಸ್ ಮಾಡಿದ್ದಾರೆ. ಕ್ರೂಸ್ ಮೇಲೆ, ಒಳಗೆ ಒಂದಷ್ಟು ಡ್ಯಾನ್ಸರ್‌ ಜೊತೆ ಡ್ಯಾನ್ಸ್ ಕಂಪೋಸ್ ಮಾಡಲಾಗಿದೆ.

  ಟ್ರೆಂಡ್ ಆಯ್ತು 'RCB' ಅಭಿಮಾನಿಗಳಿಗೆ ಜೋಶ್ ಕೊಟ್ಟ ಹಾಡುಟ್ರೆಂಡ್ ಆಯ್ತು 'RCB' ಅಭಿಮಾನಿಗಳಿಗೆ ಜೋಶ್ ಕೊಟ್ಟ ಹಾಡು

   ಸಿಕ್ಕಾಪಟ್ಟೆ ಅದ್ಧೂರಿಯಾಗಿದೆ 'ಮಲ್ಲಿಗೆ ಹೂವ'

  ಸಿಕ್ಕಾಪಟ್ಟೆ ಅದ್ಧೂರಿಯಾಗಿದೆ 'ಮಲ್ಲಿಗೆ ಹೂವ'

  'ಕಬ್ಜ' ಹಾಗೂ 'ಬಘೀರ' ಸಿನಿಮಾಗಳಿಗೆ ಕೆಲಸ ಮಾಡಿರುವ ಸಿನಿಮಾಟೋಗ್ರಫರ್ ಅರ್ಜುನ್ ಶೆಟ್ಟಿ 'ಮಲ್ಲಿಗೆ ಹೂವ' ಸಾಂಗ್‌ ಸೆರೆ ಹಿಡಿದಿದ್ದಾರೆ. 4 ದಿನಗಳ ಕಾಲ ಮಲೇಷಿಯಾದ ಅತಿದೊಡ್ಡ ಕ್ರೂಸ್‌ನಲ್ಲಿ ಸಾಂಗ್‌ ಶೂಟಿಂಗ್ ಮಾಡಲಾಗಿದೆ. ಡ್ರೋನ್ ಕ್ಯಾಮರಾ ಬಳಸಿ ಕ್ರೂಸ್‌ನ ವಿಹಂಗಮನ ನೋಟವನ್ನು ಕಟ್ಟಿಕೊಡಲಾಗಿದೆ. ಯಾವುದೇ ಇಂಟರ್‌ನ್ಯಾಷನಲ್ ಆಲ್ಬಮ್‌ ಸಾಂಗ್‌ಗಿಂತ ಕಮ್ಮಿ ಇಲ್ಲ ಎನ್ನುವಂತೆ 'ಮಲ್ಲಿಗೆ ಹೂವ' ಸಾಂಗ್ ಮೂಡಿ ಬಂದಿದೆ.

  English summary
  All Ok and Ashika Ranganath's Mallige Hoova Album Song Released. Know More.
  Thursday, September 8, 2022, 15:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X