twitter
    For Quick Alerts
    ALLOW NOTIFICATIONS  
    For Daily Alerts

    ಸಮಂತಾ ಐಟಂ ಹಾಡು ವಿವಾದ: ಅಲ್ಲು ಅರ್ಜುನ್ ಪ್ರತಿಕ್ರಿಯೆ

    |

    'ಪುಷ್ಪ' ಸಿನಿಮಾ ಹಲವು ಕಾರಣಕ್ಕೆ ಈಗಾಗಲೇ ಭಾರಿ ನಿರೀಕ್ಷೆ ಗರಿಗೆದರಿಸಿದೆ. ಸಿನಿಮಾವನ್ನು ವೀಕ್ಷಿಸಲು ಹಲವು ಪ್ರಮುಖ ಕಾರಣಗಳಿವೆ. ಅಲ್ಲು ಅರ್ಜುನ್-ಸುಕುಮಾರ್ ಹಿಟ್ ಜೋಡಿಯ ಮೂರನೇ ಸಿನಿಮಾ ಇದು. ಮಲಯಾಳಂ ಸೂಪರ್ ಸ್ಟಾರ್ ಫಹಾದ್ ಫಾಸಿಲ್ ವಿಲನ್ ಆಗಿ ನಟಿಸಿದ್ದಾರೆ. ಕನ್ನಡತಿ ರಶ್ಮಿಕಾ ಮಂದಣ್ಣ ಈ ಸಿನಿಮಾದ ನಾಯಕಿ. ಕನ್ನಡಿಗ ಡಾಲಿ ಧನಂಜಯ್ ಸಹ ಸಿನಿಮಾದಲ್ಲಿದ್ದಾರೆ. ಈ ಎಲ್ಲ ಕಾರಣಗಳ ಜೊತೆಗೆ ಸಮಂತಾ ಮೊದಲ ಬಾರಿಗೆ 'ಪುಷ್ಪ' ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ ಎಂಬುದು ಸಹ ಪ್ರಮುಖ ಕಾರಣವೇ.

    ನಟಿ ಸಮಂತಾ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ 'ಪುಷ್ಪ' ಸಿನಿಮಾದಲ್ಲಿ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. 'ಊ ಅಂಟಾವಾ ಮಾವ ಊ ಹು ಅಂಟಾವ' ಎಂಬ ಮಾದಕ ಹಾಡಿಗೆ ಸಮಂತಾ ಕುಣಿದಿದ್ದು, ಈ ಹಾಡು ಈಗಾಗಲೇ ಸಾಕಷ್ಟು ವೈರಲ್ ಆಗಿದೆ. ಜೊತೆಗೆ ವಿವಾದವನ್ನೂ ಹುಟ್ಟುಹಾಕಿದೆ.

    ಮಹೇಶ್ ಬಾಬು ಮಾಡಿದರೆ ತಪ್ಪಾ? ನೀನು ಮಾಡಿದರೆ ಸರೀನಾ? ಸಮಂತಾಳನ್ನು ಟ್ರೋಲ್ಮಹೇಶ್ ಬಾಬು ಮಾಡಿದರೆ ತಪ್ಪಾ? ನೀನು ಮಾಡಿದರೆ ಸರೀನಾ? ಸಮಂತಾಳನ್ನು ಟ್ರೋಲ್

    ಸಮಂತಾ ನರ್ತಿಸಿರುವ 'ಊ ಅಂಟಾವ ಮಾವ ಊ ಹು ಅಂಟಾವ' ಹಾಡು ಪುರುಷ ಸಮುದಾಯಕ್ಕೆ ಅಪಮಾನ ಉಂಟು ಮಾಡುತ್ತಿದೆ. ಪುರುಷರ ಕಾಮಾಸಕ್ತರು ಎಂದು ಮಹಿಳೆಯ ಸೌಂದರ್ಯಕ್ಕೆ ದಾಸರು ಎಂದು ಹೇಳಲಾಗಿದೆ ಎಂದು ಪುರುಷರ ಸಂಘ ಈಗಾಗಲೇ ದೂರು ನೀಡಿದೆ. ಪುರುಷರ ಸಂಘ ಮಾತ್ರವೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಹಾಡಿನ ಬಗ್ಗೆ ಜೋರಾಗಿ ಚರ್ಚೆ ನಡೆದಿದೆ.

    Allu Arjun Reaction About Samanthas Item Song Controversy Of Pushpa Movie

    ಸಿನಿಮಾವು ಡಿಸೆಂಬರ್ 17 ರಂದು ಬಿಡುಗಡೆ ಆಗುತ್ತಿದೆಯಾದ್ದರಿಂದ ಚಿತ್ರತಂಡ ಜೋರಾಗಿ ಪ್ರಚಾರ ಮಾಡುತ್ತಿದ್ದು, ಹೈದರಾಬಾದ್, ಬೆಂಗಳೂರು, ತಿರುವನಂತಪುರಂ, ಮುಂಬೈ, ಚೆನ್ನೈ ಇನ್ನೂ ಕೆಲವೆಡೆ ಪ್ರಚಾರ ಸುದ್ದಿಗೋಷ್ಠಿಗಳನ್ನು ನಡೆಸಿದೆ. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್‌ಗೆ 'ಊ ಅಂಟಾವ ಮಾವ' ಹಾಡು ಎಬ್ಬಿಸಿರುವ ವಿವಾದದ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿರುವ ಅಲ್ಲು ಅರ್ಜುನ್, ''ಹಾಡಿನಲ್ಲಿ ಹೇಳಲಾಗಿರುವ ಎಲ್ಲ ವಿಷಯಗಳೂ ಸತ್ಯವೇ'' ಎಂದಿದ್ದಾರೆ. ಆ ಮೂಲಕ ಅಲ್ಲು ಅರ್ಜುನ್ ಸಹ ಹಾಡಿನ ಸಾಹಿತ್ಯದ ಪರವಾಗಿ ನಿಂತಿದ್ದಾರೆ.

    ತೆಲುಗಿನ ನಟಿ ಮತ್ತು ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳಿಂದ ಮಾಧ್ಯಮಗಳ ಗಮನ ಸೆಳೆವ ಮಾಧವಿ ಲತಾ ಸಹ ಸಮಂತಾರ ಹಾಡಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ''ಈವರೆಗೆ ನೂರಾರು-ಸಾವಿರಾರು ಐಟಂ ಹಾಡುಗಳಲ್ಲಿ ಮಹಿಳೆಯರ ಬಗ್ಗೆ ಹೇಗೇಗೋ ವ್ಯಾಖ್ಯಾನಿಸಲಾಗಿದೆ. ಆಗ ಒಬ್ಬರೂ ಸಹ ಮಾತನಾಡಿಲ್ಲ ಈಗ ಒಂದು ಹಾಡಿನಲ್ಲಿ ಪುರುಷರ ವಕ್ರಬುದ್ಧಿ ಬಗ್ಗೆ ಮಾತನಾಡಿದ್ದಕ್ಕೆ ದೂರು ನೀಡಲಾಗಿದೆ'' ಎಂದು ಆಕ್ರೋಶ ಹೊರಹಾಕಿದ್ದಾರೆ. ''ಸಮಂತಾರ ಐಟಂ ಹಾಡಿನ ವಿರುದ್ಧ ಯಾರು ದೂರು ನೀಡುತ್ತಾರೋ ಅವರ ವಿರುದ್ಧ ನಾನು ದೂರು ನೀಡುತ್ತೇನೆ'' ಎಂದು ಮಾಧವಿ ಲತಾ ಹೇಳಿದ್ದಾರೆ.

    ''ಸೀರೆ ಉಟ್ಟುಕೊಂಡರೆ ಕಣ್ಣು ಕಣ್ಣು ಬಿಡುತ್ತೀರ, ತುಂಡು ಲಂಗ ಹಾಕಿಕೊಂಡು ಬಂದರೆ ಹಿಂದೇನೆ ಬರ್ತೀರ. ಬಟ್ಟೆಯಲ್ಲೇನಿದೆ ಎಲ್ಲ ಇರುವುದು ನಿಮ್ಮ ಕಣ್ಣುಗಳಲ್ಲೇ, ಗಂಡಸರ ಬುದ್ಧಿ ಶುದ್ಧಿ ಇಲ್ಲ. ಹೂ ಅಂತೀಯಾ ಮಾಮ, ಊ ಹು ಅಂತೀಯಾ' ಎಂದು ಹಾಡಿನ ಪಲ್ಲವಿ ಇದೆ. ಹಾಡಿನಲ್ಲಿ ಇನ್ನೂ ಹಲವು ಕಡೆಗಳಲ್ಲಿ ಗಂಡು ಮಕ್ಕಳನ್ನು ಕಾಮಾಸಕ್ತರೆಂದು, ಯುವತಿಯರ ಸೌಂದರ್ಯದ ಹಿಂದೆ ಓಡುವವರೆಂದು ಅರ್ಥ ನೀಡುವ ಸಾಲುಗಳಿವೆ. ಈ ಸಾಲುಗಳ ಬಗ್ಗೆ ಪುರುಷರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಹಾಡನ್ನು ತಡೆ ಹಿಡಿಯಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಹೂಡಿದೆ.

    'ಪುಷ್ಪ' ಸಿನಿಮಾದಲ್ಲಿ ಸಮಂತಾ ಮೊದಲ ಬಾರಿಗೆ ಐಟಂ ಹಾಡಿನಲ್ಲಿ ಕುಣಿದಿದ್ದಾರೆ ಹಾಗಾಗಿ ಈ ಹಾಡಿನ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲ ಇದೆ. ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಕನ್ನಡದಲ್ಲಿ ಹಾಡಿಗೆ ಸಾಹಿತ್ಯವನ್ನು ವರದರಾಜು ಚಿಕ್ಕಬಳ್ಳಾಪುರ ಅವರು ಬರೆದಿದ್ದು, ಗಾಯಕಿ ಮಂಗ್ಲಿ ಹಾಡಿದ್ದಾರೆ. ಸಂಗೀತ ನೀಡಿರುವುದು ದೇವಿಶ್ರೀ ಪ್ರಸಾದ್. ತೆಲುಗಿನಲ್ಲಿ ಹಾಡನ್ನು ಇಂದ್ರವತಿ ಚೌಹಾಣ್ ಹಾಡಿದ್ದಾರೆ. ಹಾಡು ಬರೆದಿರುವುದು ಚಂದ್ರಬೋಸ್. 'ಪುಷ್ಪ' ಸಿನಿಮಾವು ಇದೇ ಡಿಸೆಂಬರ್ 17 ಕ್ಕೆ ಚಿತ್ರಮಂದಿರಗಳಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

    English summary
    Allu Arjun reaction about Samantha's item song controversy of Pushpa movie. He said lines of the item song is absolutely true.
    Friday, December 17, 2021, 9:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X