ಕಚ್ಚಾ ಬಾದಾಮ್ ಹಾಡಿಗೆ ಅಲ್ಲು ಅರ್ಜುನ್ ಪುತ್ರಿ ಮಸ್ತ್ ಡಾನ್ಸ್!
ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಲ್ಲಾ ಒಂದು ಹಾಡು, ಮ್ಯೂಸಿಕ್, ಟಾಪಿಕ್ ಟ್ರೆಂಡಿಂಗ್‌ನಲ್ಲಿ ಇರುತ್ತೆ. ಅಂತೆಯೇ ಇತ್ತೀಚೆಗೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳಲ್ಲಿ ಹೆಚ್ಚಾಗಿ ವೈರಲ್ ಆಗಿದ್ದು 'ಕಚ್ಚಾ ಬಾದಾಮ್' ಹಾಡು. ಈ ಬಹಳ ಟ್ರೆಂಡಿಂಗ್‌ನಲ್ಲಿದೆ. ಟಿವಿ ಸೆಲೆಬ್ರಿಟಿಗಳು, ಸಿನಿಮಾ ಸೆಲೆಬ್ರಿಟಿಗಳು ಸೇರಿ ಹಲವರು ಈ ಹಾಡಿಗೆ ಡ್ಯಾನ್ಸ್ ಮಾಡಿ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದಾರೆ.
ದೇಶಾದ್ಯಂತ ಟ್ರೆಂಡ್ ಹುಟ್ಟು ಹಾಕಿದ ಈ ಹಾಡು ವಿದೇಶಕ್ಕೂ ಲಗ್ಗೆ ಇಟ್ಟಿದೆ. ಅಲ್ಲಿನ ಜನ ಕೂಡ ಕಚ್ಚಾ ಬಾದಮ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ಮೂಲಕ ಹಳ್ಳಿ ಗಲ್ಲಿಯಲ್ಲಿ ಇದ್ದ ಕಡಲೇ ಕಾಯಿ ವ್ಯಾಪಾರಿ ಈಗ ವಿಶ್ವ ವಿಖ್ಯಾತಿ ಪಡೆದಿದ್ದಾರೆ.
ಈ ಹಾಡಿಗೆ ಚಿಕ್ಕವರು, ದೊಡ್ಡವರು, ಸಾಮಾನ್ಯರು, ಸೆಲೆಬ್ರಿಟಿಗಳು ಎಲ್ಲರೂ ಹೆಜ್ಜೆ ಹಾಕಿದ್ದಾರೆ. ಇನ್ನೂ ಕೂಡ ನಿತ್ಯವೂ ಒಬ್ಬೊಬ್ಬರೇ ಈ ಹಾಡಿಗೆ ಕುಣಿಯುತ್ತಿದ್ದಾರೆ. ಈಗ ಈ ಸಾಲಿಗೆ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಕುಟುಂಬ ಕೂಡ ಸೇರಿಕೊಂಡಿದೆ.
ಮುದ್ದಾಗಿ ಡಾನ್ಸ್ ಮಾಡಿದ ಅಲ್ಲು ಅರ್ಜುನ್ ಪುತ್ರಿ ಅರ್ಹಾ!
ಕಚ್ಚಾ ಬಾದಮ್ ಹಾಡು ಅಲ್ಲು ಅರ್ಜುನ್ ಮಗಳು ಅರ್ಹಾಗೆ ಬಹಳ ಇಷ್ಟ ಅಂತೆ. ಹಾಗಾಗಿ ಮಗಳ ಡಾನ್ಸ್ ವಿಡಿಯೋವನ್ನು ನಟ ಅಲ್ಲು ಅರ್ಜುನ್ ರೆಕಾರ್ಡ್ ಮಾಡಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅರ್ಹಾಳ ಈ ಡಾನ್ಸ್ ವಿಡಿಯೋ ಕೂಡ ವೈರಲ್ ಆಗಿದೆ. ಮಗಳ ವಿಡಿಯೋ ಹಂಚಿಕೊಂಡು "ನನ್ನ ಪುಟ್ಟ ಬಾದಾಮ್ ಅರ್ಹಾ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತ ಆಗಿದೆ.
ಕಚ್ಚಾ ಬಾದಾಮ್‌ಗೆ ಕನ್ನಡ ತಾರೆಯರೂ ಹೆಜ್ಜೆ!
ಈ ಕಚ್ಚಾ ಬಾದಮ್ ಹಾಡಿಗೆ ಅನೇಕ ಕನ್ನಡಿಗರೂ ಕೂಡ ರೀಲ್ಸ್ ಮಾಡಿದ್ದಾರೆ. ಸಿನಿಮಾ ಮತ್ತು ಸೀರಿಯಲ್ ತಾರೆಯರು ಕೂಡ ಈ ವೈರಲ್ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅದರಲ್ಲಿ ಇತ್ತೀಚೆಗೆ ನಟಿ ಕಾರುಣ್ಯ ರಾಮ್ ಮಾಡಿರುವ ಡಾನ್ಸ್ ಕೂಡ ವೈರಲ್ ಆಗಿದೆ. ಜೊತೆಗೆ ಹಲವು ಕಿರುತೆಯ ಕಲಾವಿದರು ಕೂಡ ಡಾನ್ಸ್ ಮಾಡಿದ್ದಾರೆ.
ಕಚ್ಚಾ ಬಾದಮ್ ಹಾಡಿ ಟ್ರೋಲ್ ಆಗಿದ್ದ ರಾನು ಮಂಡಲ್, ಉರ್ಫಿ!
ಇಷ್ಟು ದಿನ ಸುದ್ದಿಯೇ ಇಲ್ಲದ ರಾನು ಮಂಡಲ್ ಈಗ ಕಚ್ಚಾ ಬಾದಮ್ ಹಾಡು ಹಾಡಿ ಟ್ರೋಲ್ ಆಗಿದ್ದಾರೆ. ಈ ಹಾಡನ್ನು ಆಕೆ ತನ್ ಸ್ಟೈಲ್ ನಲ್ಲಿ ಮೆಲೋಡಿ ಆಗಿ ಹಾಡಿದ್ದಳು. ಹಾಗಾಗಿ ಟ್ರೋಲ್ ಮಾಡಲಾಗಿತ್ತು. ಇನ್ನೂ ಬಾಲಿವುಡ್ ತಾರೆ ಉರ್ಫಿ ಜಾವೆದ್ ಕೂಡ ಈ ಹಾಡಿಗೆ ಡಾನ್ಸ್ ಮಾಡಿದ್ದರು. ತುಂಡು ಬಟ್ಟೆ ತೊಟ್ಟು ಡಾನ್ಸ್ ಮಾಡಿ ಎಡವಟ್ಟು ಮಾಡಿಕೊಂಡು ಟ್ರೋಲ್ ಆಗಿದ್ದರು.
ಕಚ್ಚಾ ಬಾದಾಮ್ ಹಾಡಿನ ರೂವಾರಿ ಭುಬನ್ ಭಡ್ಯಾಕರ್!
ಬೀದಿ ಬದಿಯಲ್ಲಿ ಕಡಲೆಕಾಯಿ ಮಾರುವ ಪಶ್ಚಿಮ ಬಂಗಾಳದ ಭುಬನ್ ಭಡ್ಯಾಕರ್ ಕಡಲೆಕಾಯಿ ಮಾರಲು ಕಚ್ಚಾ ಬಾದಮ್ ಹಾಡು ಕಟ್ಟಿ ಹಾಡಿದ್ದರು. ಕಡಲೆ ಕಾಯಿ ಮಾರುತ್ತಾ ಹಾಡು ಹೇಳುತ್ತಿದ್ದ ಭುಬನ್ ಭಡ್ಯಾಕರ್ ವಿಡಿಯೋ ಮಾಡಿದ ಯಾರೋ ಅದನ್ನು ಯೂಟ್ಯೂಬ್‌ನಲ್ಲಿ ಹಾಕಿದ್ದೇ ತಡ ಹಾಡು ವೈರಲ್ ಆಗಿಬಿಟ್ಟಿತು. ಹಾಗಾಗಿ ಈಗ ಭುಬನ್ ಅವರ ಹೆಸರು ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದೆ.


Click it and Unblock the Notifications











