twitter
    For Quick Alerts
    ALLOW NOTIFICATIONS  
    For Daily Alerts

    ಪುಷ್ಪ ಸಿನಿಮಾದಿಂದ ರಿಲೀಸ್ ಆಯ್ತು ಮತ್ತೊಂದು ಹಾಡು. ಹಾಡಿನ ಹೈಲೈಟ್ಸ್ ಏನು?

    |

    ತೆಲುಗಿನ ಪುಷ್ಪ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸುದ್ದಿಯಲ್ಲಿದೆ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿ ಅಭಿನಯಿಸುತ್ತಿರೋದಕ್ಕೆ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ. ಚಿತ್ರದ ಪೋಸ್ಟರ್, ಟ್ರೈಲರ್ ನೋಡಿದ ಸಿನಿಪ್ರಿಯರು, ಸಿನಿಮಾವನ್ನು ಕಣ್ತುಂಬಿಕೊಳ್ಲಲು ಕಾತುರರಾಗಿದ್ದಾರೆ. ಪುಷ್ಪ ಸಿನಿಮಾದ ರಿಲೀಸ್ ದಿನಾಂಕ ಕೂಡ ನಿಗದಿ ಆಗಿದ್ದು, ಅದರ ಬೆನ್ನಲ್ಲೆ ಚಿತ್ರದ ಒಂದೊಂದೆ ಹಾಡುಗಳು ಇದೀಗ ರಿಲೀಸ್ ಮಾಡುತ್ತಿದೆ ಚಿತ್ರತಂಡ.

    ಪುಷ್ಟ ಸಿನಿಮಾ ದಿಂದ ಈ ಹಿಂದೆ ಡಾಕ್ಕೋ ಡಾಕ್ಕೋ ಮೇಕಾ ಹಾಡು ಹಾಗೂ ಸಾಮಿ ಸಾಮಿ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಈ ಎರೆಡೂ ಹಾಡುಗಳು ಲಕ್ಷ ಲಕ್ಷ ವೀವ್ಸ್ ಪಡೆದು ಕೊಂಡಿದೆ. ಸ್ವಾಮಿ ಸ್ವಾಮಿ ಎಂದು ರಶ್ಮಿಕಾ ತನ್ನ ಪ್ರೀತಿಯನ್ನು ಅಲ್ಲು ಅರ್ಜುನ್‌ಗೆ ಹೇಳುವ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ. ಚಿತ್ರದಲ್ಲಿ ಡಿಗ್ಲಾಮ್ ಲುಕ್‌ನಲ್ಲಿ ರಶ್ಮಿಕ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಕಾಣಿಸಿಕೊಂಡಿರೋ ರಶ್ಮಿಕಾ, ಈ ಹಾಡಿನಲ್ಲಿಯೂ ಸೀರೆ ಉಟ್ಟು ಪಕ್ಕಾ ಹಳ್ಳಿ ಹುಡುಗೆ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಹಾಗೇ ದಾಕ್ಕೋ ದಾಕ್ಕೋ ಮೇಕಾ ಹಾಡಿನಲ್ಲಿ ಅಲ್ಲೂ ಅರ್ಜುನ್ ಆರ್ಭಟ ಜೋರಾಗಿತ್ತು, ಇದೀಗ ಮತ್ತೊಂದು ಜಬರ್ಧಸ್ತ್ ಹಾಡು ಪುಷ್ಪ ಸಿನಿಮಾದಿಂದ ರಿಲೀಸ್ ಆಗಿದೆ.

    ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಗೆಟಪ್‌ ತುಂಬಾ ವಿಭಿನ್ನವಾಗಿದೆ. ಹಿಂದೆಂದೂ ಕಾಣಿಸಿಕೊಂಡಿರದ ಅವತಾರದಲ್ಲಿ ಅಲ್ಲು ಅರ್ಜುನ್ ಗೆಟಪ್ ಚೇಂಜ್ ಮಾಡಿದ್ದಾರೆ. ಈಗ ರಿಲೀಸ್ ಆಗಿರೋ 'ಅರೇ ಎ ಬಿಡ್ಡ ಇದಿ ನಾ ಅಡ್ಡ' ಹಾಡಿನಲ್ಲೂ ಅಲ್ಲೂ ಅರ್ಜುನ್ ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ಅರೇ ಎ ಬಿಡ್ಡ ಇದಿ ನಾ ಅಡ್ಡ' ಹಾಡನ್ನು ಚಂದ್ರಬೋಸ್ ಬರೆದಿದ್ದಾರೆ. ಸಕಾಶ್ ಅಸೀಸ್ ಹಾಡಿಗೆ ಧ್ವನಿಯಾಗಿದ್ದಾರೆ. ಶೇಖರ್ ವಿ.ಜೆ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಾಡು ಕೇಳುಗನಿಗೆ ತುಂಬ ಹಿಡಿಸಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ವೀವ್ಸ್ ಆಗಿದೆ.

    Allu Arjun Starrer Pushpa Movie 4th Single Eyy Bidda idhi naa adda Song Released

    ಈ 'ಅರೇ ಎ ಬಿಡ್ಡ ಇದಿ ನಾ ಅಡ್ಡ' ಹಾಡು ತೆಲುಗು ಸೇರಿ ಕನ್ನಡ ಮಲಯಾಳಂ, ತಮಿಳಿನಲ್ಲೂ ರಿಲೀಸ್ ಆಗಿದೆ. ಎಲ್ಲಾ ಭಾಷೆಯ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ತೆಲುಗಿನ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಥಾನ ಪಡೆದುಕೊಂಡಿದೆ. ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನ ಮಾಡಿದ್ದು, ಕನ್ನಡದ ಹಾಡನ್ನ ವಿಜಯ್ ಪ್ರಕಾಶ್ ಹಾಡಿದ್ದಾರೆ. ಹಾಗೂ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ನೀಡಿದ್ದಾರೆ.

    ಅಲ್ಲು ಅರ್ಜುನ್ ಸಿನಿಮಾದಲ್ಲಿ ಪುಷ್ಪ ರಾಜ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪುಷ್ಪ ಸಿನಿಮಾ ಎರಡು ಭಾಗಗಳಾಗಿ ರಿಲೀಸ್ ಆಗಲಿದೆ. ಪುಷ್ಪ ಸಿನಿಮಾದ ಮೊದಲ ಭಾಗವು 2021 ಡಿಸೆಂಬರ್ 17ಕ್ಕೆ ತೆರೆಕಂಡರೆ, ಎರಡನೇ ಭಾಗ ಬಿಡುಗಡೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಪುಷ್ಪಾ ಸಿನಿಮಾದಿಂದ ಈಗಾಗಲೇ ಟ್ರೈಲರ್, ಟೀಸರ್, ಹಾಡುಗಳು ರಿಲೀಸ್ ಆಗಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಹಾಗೇ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಇದೇ ಮೊದಲ ಬಾರಿಗೆ ಒಂದಾಗುತ್ತಿದ್ದು, ಇವರಿಬ್ಬರ ಕೆಮಿಸ್ಟ್ರಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

    ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಜೋಡಿ ಮೂರನೇ ಬಾರಿಗೆ ಒಂದಾಗುತ್ತಿದೆ. ಈ ಹಿಂದೆ ಬ್ಲಾಕ್ ಬಸ್ಟರ್ ಚಲನಚಿತ್ರಗಳಾದ ಆರ್ಯ, ಮತ್ತು ಆರ್ಯ 2, ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿ ಇಡೀ ಟಾಲಿವುಡ್‍ ನಲ್ಲಿ ಈ ಜೋಡಿ ಕಮಾಲ್ ಮಾಡಿತ್ತು.ಈಗ ಮತ್ತೆ ಪುಷ್ಪ ಸಿನಿಮಾದಿಂದ ಬಾಕ್ಸ್ ಆಫೀಸ್ ಶೇಕ್ ಮಾಡಲು ಸಿದ್ದವಾಗಿದ್ದಾರೆ. ಇನ್ನುಳಿದಂತೆ ಪುಷ್ಪ ಚಿತ್ರದಲ್ಲಿ ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಹದ್ ಫಾಸಿಲ್ ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಮ್ಸೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿವೆ.

    English summary
    Allu Arjun and Rashmika Mandanna starrer Pushpa Movie 4th Single Eyy Bidda idhi naa adda Song Released. The film is directed by Sukumar. Movie releasing in december.
    Monday, November 22, 2021, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X