For Quick Alerts
  ALLOW NOTIFICATIONS  
  For Daily Alerts

  ಒಂದೇ ದಿನದಲ್ಲಿ ಕಮಾಲ್ ಮಾಡಿದ ಪಾರ್ಟಿ ಸಾಂಗ್ 'ಮಾರಮ್ಮನ್ ಡಿಸ್ಕೋ'.!

  |

  2019 ಇನ್ನೇನು ಮುಗಿಯಲಿದೆ. 2020 ರನ್ನು ಬರಮಾಡಿಕೊಳ್ಳಲು ಕೆಲವೇ ಗಂಟೆಗಳು ಬಾಕಿ ಇವೆ. ಪಾರ್ಟಿ ಮಾಡಿ ಹೊಸ ವರ್ಷವನ್ನು ಬರಮಾಡಿಕೊಳ್ಳುವವರು ಪರಭಾಷೆಯ ಹಾಡುಗಳಿಗೆ ಮೊರೆ ಹೋಗಬೇಕಿಲ್ಲ. ಕನ್ನಡದಲ್ಲಿ ಈಗಾಗಲೇ ಹಲವು ಪಾರ್ಟಿ ಸಾಂಗ್ ಗಳು ಬಂದಿವೆ. ಅದೇ ಲಿಸ್ಟ್ ಗೆ ಇದೀಗ ಲೇಟೆಸ್ಟ್ ಎಂಟ್ರಿ ಕೊಟ್ಟಿರುವುದು 'ಮಾರಮ್ಮನ್ ಡಿಸ್ಕೋ'.

  'ನಾನ್ ಕನ್ನಡಿಗ', 'ಡೋಂಟ್ ವರಿ', 'ಯಾಕಿಂಗೆ' ಸೇರಿದಂತೆ ಕನ್ನಡದಲ್ಲಿ ಹಲವು ಹಿಟ್ ರಾಪ್ ಹಾಡುಗಳನ್ನು ನೀಡಿರುವ ಅಲೋಕ್ ಬಾಬು ಅಲಿಯಾಸ್ ಆಲ್ ಓಕೆ ಇದೀಗ 'ಮಾರಮ್ಮನ್ ಡಿಸ್ಕೋ' ಅಂತ ಹಾಡಿ ಕುಣಿಯುತ್ತಾ ನಿಮ್ಮ ಮುಂದೆ ಬಂದಿದ್ದಾರೆ.

  'ಮಾರಮ್ಮನ್ ಡಿಸ್ಕು' ಎಂದ ಕೂಡಲೆ ನಿಮಗೆ ಥಟ್ ಅಂತ ನೆನಪಾಗುವುದು ಹಾಸ್ಯ ನಟ ಟೆನ್ನಿಸ್ ಕೃಷ್ಣ ಅಲ್ವಾ.? ಹಲವು ಸಿನಿಮಾಗಳಲ್ಲಿ 'ಮಾರಮ್ಮನ್ ಡಿಸ್ಕು' ಅಂತ ಡೈಲಾಗ್ ಹೊಡೆದು ಎಲ್ಲರನ್ನೂ ನಕ್ಕು ನಲಿಸಿದ್ದ ಟೆನ್ನಿಸ್ ಕೃಷ್ಣ ಈ 'ಮಾರಮ್ಮನ್ ಡಿಸ್ಕೋ' ಹಾಡಲ್ಲೂ ಹೆಜ್ಜೆ ಹಾಕಿದ್ದಾರೆ.

  'ಮಾರಮ್ಮನ ಡಿಸ್ಕೋ' ಹಾಡಲ್ಲಿ ಟೆನ್ನಿಸ್ ಕೃಷ್ಣ ಜೊತೆ 'ಬಸಣ್ಣಿ' ತಾನ್ಯ 'ಮಾರಮ್ಮನ ಡಿಸ್ಕೋ' ಹಾಡಲ್ಲಿ ಟೆನ್ನಿಸ್ ಕೃಷ್ಣ ಜೊತೆ 'ಬಸಣ್ಣಿ' ತಾನ್ಯ

  ಔಟ್ ಅಂಡ್ ಔಟ್ ಪಾರ್ಟಿ ಸಾಂಗ್ ಆಗಿರುವ 'ಮಾರಮ್ಮನ್ ಡಿಸ್ಕೋ'ದಲ್ಲಿ ಅಲೋಕ್ ಬಾಬು ಜೊತೆಗೆ ಸೊಂಟ ಬಳುಕಿಸಿರುವವರು 'ಬಸಣ್ಣಿ ಬಾ' ಖ್ಯಾತಿಯ ತಾನ್ಯ ಹೋಪ್.

  ಮೊನ್ನೆಯಷ್ಟೇ ಬಿಡುಗಡೆ ಆಗಿರುವ 'ಮಾರಮ್ಮನ್ ಡಿಸ್ಕೋ' ಹಾಡು ವರ್ಷಾಂತ್ಯದ ಪಾರ್ಟಿ ಮೂಡ್ ಗೆ ಪರ್ಫೆಕ್ಟ್ ಆಗಿದ್ದು ಯೂಟ್ಯೂಬ್ ನಲ್ಲಿ ಕಮಾಲ್ ಮಾಡುತ್ತಿದೆ. ಒಂದೇ ದಿನದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ವ್ಯೂಸ್ ನ 'ಮಾರಮ್ಮನ್ ಡಿಸ್ಕೋ' ಬಾಚಿಕೊಂಡು ಟ್ರೆಂಡಿಂಗ್ ನಲ್ಲಿದೆ.

  English summary
  Alok Babu's Maramman Disco song is trending in YouTube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X