ವಿಡಿಯೋ : 'ಅಮರ್' ಸಿನಿಮಾದ ಮೊದಲ ಹಾಡು ಕೇಳಿ
ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ 'ಅಮರ್' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಯುಗಾದಿ ಹಬ್ಬದ ವಿಶೇಷವಾಗಿ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ.
''ಮರೆತು ಹೋಯಿತೆ ನನ್ನೆಯ ಹಾಜರಿ.. ಬರೆದು ಎದೆಯಲಿ ನೋವಿನ ಶಾಹಿರಿ..'' ಎಂಬ ಈ ಹಾಡು ಕೇಳಲು ತುಂಬ ಇಂಪಾಗಿದೆ. ಕವಿರಾಜ್ ಪದಗಳಿಗೆ ಅರ್ಜುನ್ ಜನ್ಯ ಮ್ಯೂಸಿಕ್ ಸೇರಿ ಹಾಡು ಮತ್ತಷ್ಟು ಸಿಹಿಯಾಗಿದೆ.
ಈ ಹಾಡನ್ನು ಸಂಚಿತ್ ಹೆಗ್ಡೆ ಹಾಡಿದ್ದಾರೆ. ಸಿನಿಮಾದ ಮೊದಲ ಹಾಡೇ ಹಿಟ್ ಆಗುವ ಎಲ್ಲ ಸಾಧ್ಯತೆಗಳು ಕಾಣುತ್ತಿದೆ. 'ಅಮರ್' ಸಿನಿಮಾದ ಭಾವನಾತ್ಮಕ ಹಾಡು ಇದಾಗಿದೆ. ಹಾಡಿಗೆ ಯೂಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

ಸಂದೇಶ್ ನಾಗರಾಜ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ತಾನ್ಯ ಹೂಪ್ ಸಿನಿಮಾದ ನಾಯಕಿಯಾಗಿದ್ದಾರೆ. ಚಿತ್ರ ಬೈಕ್ ರೇಸ್ ಜೊತೆಗೆ ನಡೆಯುವ ಲವ್ ಸ್ಟೋರಿ ಚಿತ್ರದಲ್ಲಿದೆ.
ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡಿದ್ದರು, ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
English summary
Actor Abhishek Ambareesh's 'Amar' kannada moive 1st song released on the occasion of ugadi.


Click it and Unblock the Notifications