'ಅಮರ್' ಚಿತ್ರದ ಪ್ರಮುಖ ವಿಡಿಯೋ ಸಾಂಗ್ ರಿಲೀಸ್ : ನಾಗಶೇಖರ್ ಹೊಸ ಪ್ಲಾನ್

ನಟ ಅಭಿಷೇಕ್ ಅಂಬರೀಶ್ ಅಭಿನಯದ 'ಅಮರ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಆದರೆ, ಸಿನಿಮಾ ಒಂದು ವಾರ ಪೂರ್ಣ ಮಾಡುವುದರ ಒಳಗೆ ಚಿತ್ರದ ಪ್ರಮುಖ ವಿಡಿಯೋ ಹಾಡು ಬಿಡುಗಡೆ ಮಾಡಲಾಗಿದೆ.

ಚಿತ್ರದ ಬಿಡುಗಡೆಗೆ ಮೊದಲು, ಬಿಡುಗಡೆ ಬಳಿಕ ವಿಡಿಯೋ ಹಾಡನ್ನು ರಿಲೀಸ್ ಮಾಡುವುದು ಸಾಮಾನ್ಯದ ವಿಷಯವೇ. ಆದರೆ, ಯಾವ ನಿರ್ದೇಶಕನೂ ಸಿನಿಮಾದ ಪ್ರಮುಖ ಘಟ್ಟದ ವಿಡಿಯೋವನ್ನು ಇಷ್ಟು ಬೇಗ ಪ್ರೇಕ್ಷಕರ ಮುಂದೆ ಇಡಲು ಬಯಸುವುದು ತೀರಾ ಕಡಿಮೆ.

ಸಿನಿಮಾಗೆ ಕೆಲವು ನೆಗೆಟಿವ್ ರಿವ್ಯೂ ಬಂದಿದ್ದು, ಚಿತ್ರದ ಮೇಲೆ ಪರಿಣಾಮ ಬೀರುತ್ತಿರಬಹುದು. ಇದರಿಂದ ಚಿತ್ರದ ವಿಡಿಯೋ ಹಾಡಿನ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿರಬಹುದು.

amar kannada movie marethuhoyithe video song released.

'ಮರೆತು ಹೋಯಿತೆ ನನ್ನೆಯ ಹಾಜರಿ..' ಹಾಡನ್ನು ಸಂಚಿತ್ ಹೆಗ್ಡೆ ಹಾಡಿದ್ದು, ಸೂಪರ್ ಹಿಟ್ ಆಗಿತ್ತು. ಈ ಹಾಡು ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಬರುತ್ತಿದೆ. ಈ ಹಾಡಿನ ಜನಪ್ರಿಯತೆ ಮೂಲಕ ಪ್ರೇಕ್ಷಕರ ವರ್ಗವನ್ನು ಹೆಚ್ಚು ಮಾಡುವ ಪ್ಲಾನ್ ಅನ್ನು ನಾಗಶೇಖರ್ ಮಾಡಿರಬಹುದು.

ಅಂದಹಾಗೆ, ಅರ್ಜುನ್ ಜನ್ಯ ಸಂಗೀತದ ಹಾಡುಗಳು ಹಿಟ್ ಆಗಿದೆ. ಸಿನಿಮಾದ ಕಥೆ, ನಿರೂಪಣೆ, ನಟನೆ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು, ಹಾಡುಗಳ ಬಗ್ಗೆ ಯಾರು ಕೆಟ್ಟ ಮಾತನ್ನು ಆಡಿಲ್ಲ.

More from Filmibeat

English summary
Actor Abhishek Ambareesh's 'Amar' Kannada movie Marethuhoyithe video song released. The movie is directed by Nagashekar. Tanya Hope is the heroine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X