ಕೊಡವರಿಗೆ ದರ್ಶನ್-ಅಭಿಷೇಕ್ ಕೊಟ್ಟ ಗಿಫ್ಟ್ ಇದು

ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾ ಹಾಡುಗಳಿಂದ ಸದ್ದು ಮಾಡ್ತಿದೆ. ಈಗಾಗಲೇ ಮೂರು ರೋಮ್ಯಾಂಟಿಕ್ ಹಾಡು ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿದ್ದ ಅಮರ್, ಈಗ ನಾಲ್ಕನೇ ಹಾಡು ರಿಲೀಸ್ ಮಾಡಿದೆ.

ಈ ಹಾಡು ರೆಗ್ಯುಲರ್ ಶೈಲಿ ಬಿಟ್ಟು ಕೊಡವರ ಶೈಲಿಯಲ್ಲಿರುವುದು ವಿಶೇಷ. ಒಂದು ರೀತಿ ಈ ಹಾಡು ಕೊಡವರಿಗೆ ಗಿಫ್ಟ್ ಅಂತಾನೇ ಹೇಳಬಹುದು. ಸಾಮಾನ್ಯವಾಗಿ ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ಕೊಡವ ಭಾಷೆ, ಸಂಸ್ಕೃತಿ, ವೇಷ-ಭೂಷಣವನ್ನ ತೋರಿಸಲಾಗುತ್ತೆ. ಆದ್ರೆ, ಪೂರ್ತಿ ಹಾಡನ್ನ ಕೊಡವ ಭಾಷೆಯಲ್ಲಿ ಪ್ರಸ್ತುತ ಪಡಿಸಿರೋದು ಅಪರೂಪ.

'ಜೋರು ಪಾಟ್ಟು....' ಪಾರ್ಟಿ ಹಾಡಾಗಿದ್ದು, ಕೊಡವ ಭಾಷೆ ಅರ್ಥವಾಗದೇ ಇರೋರಿಗೆ ಕೂಡ ಈ ಸಾಂಗ್ ಇಷ್ಟವಾಗುವಂತಿದೆ. ಅದಕ್ಕೆ ಕಾರಣ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಜೆಸ್ಸಿ ಗಿಫ್ಟ್ ಅವರು ಗಾಯನ ಹಾಗೂ ಕಿರಣ್ ಕಾವೇರಪ್ಪ ಬರೆದಿರುವ ಸಾಹಿತ್ಯ. ಹಾಗ್ನೋಡಿದ್ರೆ, ವಿಷ್ಣುವರ್ಧನ್ ಮತ್ತು ಸುಹಾಸಿನ ಅಭಿನಯಿಸಿದ್ದ 'ಮುತ್ತಿನಹಾರ' ಸಿನಿಮಾದ ಹಾಡಿನಲ್ಲೂ ಕೊಡವ ಸಾಹಿತ್ಯ ಬಳಸಲಾಗಿತ್ತು.

Amar movie joru paattu song released

ಈ ಹಾಡಿನ ಮತ್ತೊಂದು ಸರ್ಪ್ರೈಸ್ ಅಂದ್ರೆ ಅಭಿಷೇಕ್ ಹಾಗೂ ತಾನ್ಯ ಹೋಪ್ ಜೊತೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಡಿಂಪಲ್ ಕ್ವೀನ್ ರಚಿತಾ ರಾಮ್, ಹಿರಿಯ ನಟ ದೇವರಾಜ್, ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ, ಅರ್ಜುನ್ ಜನ್ಯ ಕೂಡ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

ಇನ್ನುಳಿದಂತೆ ಸಂದೇಶ್ ಕಂಬೈನ್ಸ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಮೈನಾ ಖ್ಯಾತಿಯ ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಅಭಿಷೇಕ್ ಗೆ ಜೋಡಿಯಾಗಿ ತಾನ್ಯ ಹೋಪ್ ನಟಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ ಈ ತಿಂಗಳ ಅಂತ್ಯಕ್ಕೆ ಅಮರ್ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
The fourth song of amar has released. this is the special song because darshan, rachita ram, devaraj, anup bhandari, arjun janya made guest appearance in this song. and more then its sounding in kodava style.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X