twitter
    For Quick Alerts
    ALLOW NOTIFICATIONS  
    For Daily Alerts

    ಯಾವ ಮೋಹನ ಮುರಳಿ ಕರೆಯಿತು ಟೆಕ್ಕಿ ರೀಮಿಕ್ಸ್

    By Mahesh
    |

    America America Kannada movie song lyrics remix
    ದಿವಂಗತ ಗೋಪಾಲಕೃಷ್ಣ ಅಡಿಗರು ಬರೆದ ಯಾವ ಮೋಹನ ಮುರಳಿ ಕರೆಯಿತು.. ಎಂಬ ಭಾವಗೀತೆಯನ್ನು ಅರ್ಥಪೂರ್ಣವಾಗಿ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ 'ಅಮೆರಿಕಾ ಅಮೆರಿಕಾ' ಚಿತ್ರಕ್ಕೆ ಬಳಸಿಕೊಂಡರು.

    ಈಗಿನ ವೇಗದ ಬದುಕಿನಲ್ಲಿ ಸಾಫ್ಟ್ ವೇರ್ ಕಂಪನಿಗಳ ಮೋಹದಲ್ಲಿ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬರುವ ವಲಸಿಗ ಟೆಕ್ಕಿಗಳ ಮೇಲೆ ಈ ಹಾಡಿನ ಪ್ರಯೋಗ ಮಾಡಿದರೆ ಹೇಗೆ...ಮುಂದೆ ಓದಿ....

    ಯಾವ ಸಾಫ್ಟ್ ವೇರ್ ಕಂಪನಿ ಕರೆಯಿತು... ಬೆಂಗಳೂರಿಗೆ ನಿನ್ನನು
    ಯಾವ ಸಂಬಳದಾಸೆ ಕುಕ್ಕಿತು... ನಿನ್ನ ಆಸೆಯ ಕಣ್ಣನು
    ಯಾವ ಸಾಫ್ಟ್‌ವೇರ್ ಕಂಪನಿ ಕರೆಯಿತು... ಬೆಂಗಳೂರಿಗೆ ನಿನ್ನನು
    ಯಾವ ಸಂಬಳದಾಸೆ ಕುಕ್ಕಿತು... ನಿನ್ನ ಆಸೆಯ ಕಣ್ಣನು

    ಫೋಮು ಹಾಸಿಗೆ ಟೀವಿ ಫ್ರಿಜ್ಜಿದೆ...
    ಏ.ಸಿ, ತಂಪಿನ ರೂಮಿದೆ
    ಫೋಮು ಹಾಸಿಗೆ ಟೀವಿ ಫ್ರಿಜ್ಜಿದೆ...
    ಏ.ಸಿ, ತಂಪಿನ ರೂಮಿದೆ

    ಬರಿದೆ ತುಂಬಿಹೆ ಮನೆಯ ಒಳಗೆ
    ಆಫೀಸು ಅಲ್ಲವೆ ನಿಮ್ಮನೆ

    ಯಾವ ಸಾಫ್ಟ್‌ವೇರ್ ಕಂಪನಿ ಕರೆಯಿತು... ಬೆಂಗಳೂರಿಗೆ ನಿನ್ನನು
    ಯಾವ ಸಂಬಳದಾಸೆ ಕುಕ್ಕಿತು... ನಿನ್ನ ಆಸೆಯ ಕಣ್ಣನು

    ಹೊಸೂರ್ ರೋಡಿನ ಆಚೆ ಎಲ್ಲೋ...
    ನಿನ್ನ ಕಂಪನಿ ಬೇಸಿದೆ
    ಟ್ರಾಫಿಕ್ ಜಾಮಿನಲಿ ಸಿಲುಕಿಕೊಂಡಿಹ...
    ನಿನ್ನ ಬರುವಿಕೆ ಕಾದಿದೆ

    ಯಾವ ಸಾಫ್ಟ್‌ವೇರ್ ಕಂಪನಿ ಕರೆಯಿತು... ಬೆಂಗಳೂರಿಗೆ ನಿನ್ನನು
    ಯಾವ ಸಂಬಳದಾಸೆ ಕುಕ್ಕಿತು... ನಿನ್ನ ಆಸೆಯ ಕಣ್ಣನು

    ವಿವಶನಾದನು ಜಾಣ... ಹ್ಮಾ...
    ವಿವಶನಾದನು ಜಾಣ...
    ಪರದೇಶಿಯ ಜೀತ ಜೀವನ...
    ವಿವಶನಾದನು ಜಾಣ...
    ಪರದೇಶಿಯ ಜೀತ ಜೀವನ...
    ಸೃಜನಶೀಲತೆಯ ಬಿಟ್ಟು ಕೆರಿಯರ-ಏಳಿಗೆ
    ದುಡಿಮೆಯೇ ಜೀವನಾ

    ಯಾವ ಸಾಫ್ಟ್‌ವೇರ್ ಕಂಪನಿ ಕರೆಯಿತು... ಬೆಂಗಳೂರಿಗೆ ನಿನ್ನನು
    ಯಾವ ಸಂಬಳದಾಸೆ ಕುಕ್ಕಿತು... ನಿನ್ನ ಆಸೆಯ ಕಣ್ಣನು

    (ಗೋಪಾಲಕೃಷ್ಣ ಅಡಿಗರ ಕ್ಷಮೆ ಕೋರಿ)

    ---------------------------
    ಮೂಲ ಹಾಡು : 'ಅಮೇರಿಕಾ ಅಮೇರಿಕಾ' ಚಿತ್ರದ 'ಯಾವ ಮೋಹನ ಮುರಳಿ ಕರೆಯಿತು...'
    ಸಾಹಿತ್ಯ: ಗೋಪಾಲ ಕೃಷ್ಣ ಆಡಿಗ

    ಯಾವ ಮೋಹನ ಮುರಳಿ ಕರೆಯಿತು... ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು... ನಿನ್ನ ಮಣ್ಣಿನ ಕಣ್ಣನು

    ಯಾವ ಮೋಹನ ಮುರಳಿ ಕರೆಯಿತು... ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು... ನಿನ್ನ ಮಣ್ಣಿನ ಕಣ್ಣನು

    ಹೂವು ಹಾಸಿಗೆ ಚಂದ್ರ ಚಂದನ...
    ಬಾಹು ಬಂಧನ ಚುಂಬನ
    ಹೂವು ಹಾಸಿಗೆ ಚಂದ್ರ ಚಂದನ...
    ಬಾಹು ಬಂಧನ ಚುಂಬನ
    ಬಯಕೆ ತೋಟದ ಬೇಲಿಯೊಳಗೆ...
    ಕರಣ ಗಣದೀ ರಿಂಗಣ

    ಯಾವ ಮೋಹನ ಮುರಳಿ ಕರೆಯಿತು... ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು... ನಿನ್ನ ಮಣ್ಣಿನ ಕಣ್ಣನು

    ಸಪ್ತ ಸಾಗರದಾಚೆ ಎಲ್ಲೊ...
    ಸುಪ್ತ ಸಾಗರ ಕಾದಿದೆ
    ಮೊಳೆಯದಲೆಗಲ ಮೂಕ ಮರ್ಮರ...
    ಇಂದು ಇಲ್ಲಿಗೂ ಹಾಯಿತೇ

    ಯಾವ ಮೋಹನ ಮುರಳಿ ಕರೆಯಿತು...ದೂರ ತೀರಕೆ ನಿನ್ನನು
    ಯಾವ ಬೃಂದಾವನವು ಸೆಳೆಯಿತು...ನಿನ್ನ ಮಣ್ಣಿನ ಕಣ್ಣನು

    ವಿವಶವಾಯಿತು ಪ್ರಾಣ... ಹ್ಮಾ...
    ವಿವಶವಾಯಿತು ಪ್ರಾಣ...
    ಪರವಶವು ನಿನ್ನೀ ಚೇತನ

    English summary
    America America Kannada movie song 'Yava Mohana Murali kareyitu..'lyrics modified by Vijayaraj Kannatha. Lyrics applying to Software techies who leave their native and go to foriegn in search of jobs. Original song penned by Writer Gopala Krishna Adiga
    Wednesday, May 1, 2013, 14:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X