For Quick Alerts
  ALLOW NOTIFICATIONS  
  For Daily Alerts

  ದೇಶದ ಅತ್ಯುನ್ನತ ವ್ಯಕ್ತಿಗಳ ತಾಯಂದಿರನ್ನ ಗೌರವಿಸಿದ 'ಅಮ್ಮ' ಹಾಡು

  By Bharath Kumar
  |

  ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ವ್ ಯೂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ತಿಂಗಳು ತೆರೆಕಾಣಲಿದೆ. ಹೆಸರಿನಲ್ಲೇ ಅಮ್ಮ ಹೊಂದಿರುವ ಈ ಸಿನಿಮಾ ಜಗತ್ತಿನಲ್ಲಿರುವ ಎಲ್ಲ ತಾಯಂದಿರಿಗೂ ಅರ್ಪಿಸಲಾಗಿದೆ.

  ಈಗಾಗಲೇ ಅಮ್ಮಂದಿರ ದಿನಕ್ಕೆ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಆಡಿಯೋ ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಗುರುಕಿರಣ್ ಸಂಗೀತ ನಿರ್ದೇಶನ ಮಾಡಿರುವ ಹಾಡುಗಳು ರಿಲೀಸ್ ಆಗಿದ್ದು, ಸದ್ಯ 'ಅಮ್ಮ' ಚಿತ್ರದ ಟೈಟಲ್ ಟ್ರ್ಯಾಕ್ ನ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

  ಈ ಹಾಡಿನಲ್ಲಿ ದೇಶ ಕಂಡ ಅತ್ಯುನ್ನತ ವ್ಯಕ್ತಿಗಳ ತಾಯಂದಿರ ಫೋಟೋಗಳನ್ನ ಹಾಕುವ ಮೂಲಕ ಎಲ್ಲ ಅಮ್ಮಂದಿರಿಗೆ ಕೃತಜ್ಞತೆಗಳನ್ನ ತಿಳಿಸಿದೆ. ವಿ ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಸುನೀಲ್ ಕಶ್ಯಪ್ ಹಾಡಿದ್ದಾರೆ.

  ತೆರೆಗೆ ಬರಲು ಸಿದ್ದವಾಯ್ತು ಅಮ್ಮ ಐ ಲವ್ ಯು ತೆರೆಗೆ ಬರಲು ಸಿದ್ದವಾಯ್ತು ಅಮ್ಮ ಐ ಲವ್ ಯು

  ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಅಮಿತಾಬ್ ಬಚ್ಚನ್, ರಜನಿಕಾಂತ್, ಚಿರಂಜೀವಿ, ಮೋಹನ್ ಲಾಲ್, ವಿನೋದ್ ರಾಜ್, ದರ್ಶನ್, ಸುದೀಪ್, ಉಪೇಂದ್ರ, ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್, ಸೈನಾ ನೆಹ್ವಾಲ್, ಸಲ್ಮಾನ್ ಖಾನ್, ಅಂಬಾನಿ ಸಹೋದರರು, ಎಸ್.ಪಿ ಬಾಲಸುಬ್ರಮಣ್ಯಂ, ಎ.ಆರ್ ರೆಹಮಾನ್, ರಾಹುಲ್ ಗಾಂಧಿ, ಯುವರಾಜ್ ಸಿಂಗ್, ಐಶ್ವರ್ಯ ರೈ, ಎಂ.ಎಸ್.ಧೋನಿ, ಯಶ್, ಲತಾ ಮಂಗೇಶ್ಕರ್, ಅಮೀರ್ ಖಾನ್, ಮೇರಿ ಕಾಮ್, ಕಪಿಲ್ ದೇವ್, ಪಿ.ಟಿ ಉಷಾ, ವಿರಾಟ್ ಕೊಹ್ಲಿ, ಸೋನು ನಿಗಮ್, ಶ್ರೇಯಾ ಘೋಷಲ್, ಪ್ರಭುದೇವ, ಅರ್ಜುನ್ ಸರ್ಜಾ, ದ್ವಾರಕೀಶ್ ಸೇರಿದಂತೆ ಹಲವು ತಾರೆಯರು ಅವರ ಅಮ್ಮಂದಿರ ಜೊತೆಯಲ್ಲಿರುವ ಫೋಟೋ ಹಾಕಿ ಕ್ರೆಡಿಟ್ ನೀಡಲಾಗಿದೆ.

  ಅಮ್ಮಂದಿರಿಗಾಗಿ ಸಿನಿಮಾ ಅರ್ಪಿಸಿದ ಚಿರಂಜೀವಿ ಸರ್ಜಾ ಅಮ್ಮಂದಿರಿಗಾಗಿ ಸಿನಿಮಾ ಅರ್ಪಿಸಿದ ಚಿರಂಜೀವಿ ಸರ್ಜಾ

  ತಮಿಳಿನ 'ಪಿಚ್ಚಕಾರನ್' ರೀಮೇಕ್ ಆಗಿರುವ ಈ ಚಿತ್ರದಲ್ಲಿ ಸಿತಾರ ತಾಯಿ ಪಾತ್ರವನ್ನ ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಚಿರಂಜೀವಿ ಸರ್ಜಾ ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. ಕೆ.ಎಂ ಚೈತನ್ಯ ನಿರ್ದೇಶನ ಮಾಡಿರುವ ಈ ಚಿತ್ರವನ್ನ ದ್ವಾರಕೀಶ್ ನಿರ್ಮಾಣ ಸಂಸ್ಥೆ ನಿರ್ಮಿಸಿದೆ.

  ಸದ್ಯ, ಸೆನ್ಸಾರ್ ಮುಗಿಸಿರುವ ಅಮ್ಮ ಐ ಲವ್ ಯೂ ಸಿನಿಮಾ ಯು/ಎ ಪ್ರಮಾಣಪತ್ರ ಪಡೆದುಕೊಂಡಿದ್ದು, ಜೂನ್ 15 ರಂದು ಚಿತ್ರಮಂದಿರಕ್ಕೆ ಕಾಲಿಡುತ್ತಿದೆ.

  English summary
  The Official Lyric Video of "Amma" song from "Amma I Love You" An Upcoming Kannada Film, starring Yuvasamrat Chiranjeevi Sarja, Nishvikaa Naidu & Sitara. Directed by K.M.Chaitanya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X