For Quick Alerts
  ALLOW NOTIFICATIONS  
  For Daily Alerts

  'ಇಂಡಿಯಾ ವರ್ಸಸ್ ಇಂಗ್ಲೆಂಡ್' ರಾಷ್ಟ್ರ ಪ್ರೇಮದ ಹಾಡನ್ನು ಬಿಡುಗಡೆ ಮಾಡಿದ ಅನಿಲ್ ಕುಂಬ್ಳೆ

  |

  'ಇಷ್ಟಕಾಮ್ಯ' ಚಿತ್ರದ ಬಳಿಕ 'ಮೇಷ್ಟ್ರು' ನಾಗತಿಹಳ್ಳಿ ಚಂದ್ರಶೇಖರ್ ಕೈಗೆತ್ತಿಕೊಂಡಿರುವ ಚಿತ್ರವೇ 'ಇಂಡಿಯಾ ವರ್ಸಸ್ ಇಂಗ್ಲೆಂಡ್'. ಶೀರ್ಷಿಕೆ ಕೇಳಿದ ಕೂಡಲೆ ಇದು ಕ್ರಿಕೆಟ್ ಗೆ ಸಂಬಂಧಿಸಿದ ಚಿತ್ರ ಎಂದು ಭಾವಿಸಬೇಕಿಲ್ಲ. ಅದಕ್ಕಂತಲೇ ಶೀರ್ಷಿಕೆ ಜೊತೆಗೆ 'ಅದ್ರೆ ಕ್ರಿಕೆಟ್ ಅಲ್ಲ' ಎಂಬ ಅಡಿಬರಹ ನೀಡಲಾಗಿದೆ.

  ಇಂಗ್ಲೆಂಡ್ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ವ್ಯತ್ಯಾಸವನ್ನು ಎತ್ತಿ ಹಿಡಿಯುವ 'ಇಂಡಿಯಾ ವರ್ಸಸ್ ಇಂಗ್ಲೆಂಡ್.. ಆದ್ರೆ ಕ್ರಿಕೆಟ್ ಅಲ್ಲ' ಚಿತ್ರದಲ್ಲಿರುವ ರಾಷ್ಟ್ರ ಪ್ರೇಮದ ಲಿರಿಕಲ್ ಹಾಡು ಇದೀಗ ಬಿಡುಗಡೆ ಆಗಿದೆ.

  ವಿಶ್ವದ ಗಮನ ಸೆಳೆದ ಕರ್ನಾಟಕ ಮೂಲದ ಭಾರತದ ಅತ್ಯುತ್ತಮ ಕ್ರೀಡಾ ಪಟು ಅನಿಲ್ ಕುಂಬ್ಳೆ 'ಜೈ ಜೈ ಜನಗಣಮನ' ಲಿರಿಕಲ್ ಹಾಡನ್ನು ರಿಲೀಸ್ ಮಾಡಿದ್ದಾರೆ.

  ಸಾವಿರಾರು ಮಕ್ಕಳು ಭಾಗವಹಿಸಿರುವ 'ಜೈ ಜೈ ಜನಗಣಮನ' ಗೀತೆಯನ್ನು ಭಾರತದ ಉದ್ದಗಲಕ್ಕೂ ಚಿತ್ರೀಕರಿಸಲಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ರಚಿಸಿರುವ ಈ ಗೀತೆಗೆ ಅರ್ಜುನ್ ಜನ್ಯ ರಾಗ ಸಂಯೋಜನೆ ಮಾಡಿದ್ದಾರೆ.

  ಅಂದು 'ಅಮೇರಿಕಾ ಅಮೇರಿಕಾ'.. ಇಂದು 'ಭಾರತ v/s ಇಂಗ್ಲೆಂಡ್'ಅಂದು 'ಅಮೇರಿಕಾ ಅಮೇರಿಕಾ'.. ಇಂದು 'ಭಾರತ v/s ಇಂಗ್ಲೆಂಡ್'

  ''ಕನ್ನಡ ಚಿತ್ರರಂಗಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ರವರ ಕೊಡುಗೆ ತುಂಬಾ ಇದೆ. 'ಅಮೇರಿಕಾ ಅಮೇರಿಕಾ' ಚಿತ್ರ ನಮ್ಮೆಲ್ಲರ ಮನಸ್ಸು ಸೆಳೆದಿತ್ತು. ಈಗ 'ಇಂಡಿಯಾ ವರ್ಸಸ್ ಇಂಗ್ಲೆಂಡ್.. ಆದ್ರೆ ಕ್ರಿಕೆಟ್ ಅಲ್ಲ' ಎಂಬ ಚಿತ್ರದ ಹಾಡನ್ನು ನಾನು ರಿಲೀಸ್ ಮಾಡಲು ತುಂಬಾ ಸಂತೋಷ ಆಗುತ್ತಿದೆ. ಚಿತ್ರತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಚಿತ್ರವನ್ನು ಎಲ್ಲರೂ ನೋಡಲಿ ಅಂತ ಹಾರೈಸುತ್ತೇನೆ. ಈ ಸಿನಿಮಾ ರಿಲೀಸ್ ಆದಾಗ ನಾನು ನೋಡುತ್ತೇನೆ. ನೀವೂ ಬಂದು ನೋಡಿ'' ಎಂದಿದ್ದಾರೆ ಅನಿಲ್ ಕುಂಬ್ಳೆ.

  ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್

  ಅಂದ್ಹಾಗೆ, 'ಇಂಡಿಯಾ ವರ್ಸಸ್ ಇಂಗ್ಲೆಂಡ್.. ಆದ್ರೆ ಕ್ರಿಕೆಟ್ ಅಲ್ಲ' ಚಿತ್ರದಲ್ಲಿ ವಸಿಷ್ಠ ಸಿಂಹ, ಮಾನ್ವಿತಾ, ಅನಂತ್ ನಾಗ್, ಸುಮಲತಾ ಅಂಬರೀಶ್ ಮುಂತಾದವರ ಅಭಿನಯ ಇದೆ.

  ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣಗೊಂಡಿರುವ 'ಇಂಡಿಯಾ ವರ್ಸಸ್ ಇಂಗ್ಲೆಂಡ್.. ಆದ್ರೆ ಕ್ರಿಕೆಟ್ ಅಲ್ಲ' ಚಿತ್ರ ಸದ್ಯದಲ್ಲೇ ನಿಮ್ಮೆಲ್ಲರ ಮುಂದೆ ಬರಲಿದೆ.

  English summary
  Anil Kumble release India Versus England lyrical song video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X