AR Rahman: ಲಕ್ಷಗಳಿಗೆ ಹರಾಜಾಯ್ತು ಎಆರ್ ರೆಹಮಾನ್ ಧರಿಸಿದ್ದ ಉಡುಪು

'ಸೆಲೆಬ್ರಿಟಿಗಳ ಹೇಸಿಗೆಯೂ ಮಾರಾಟವಾಗುತ್ತದೆ' ಎಂದು ನಟಿ ಕಂಗನಾ ರನೌತ್ ಒಮ್ಮೆ ಹೇಳಿದ್ದರು. ಅದು ಬಹುತೇಕ ನಿಜವೂ ಹೌದು. ಆದರೆ ಈ ರೀತಿಯ ಪ್ರಯತ್ನಗಳು ಭಾರತದಲ್ಲಿ ಆಗಿಲ್ಲವೆಂಬುದು ಸಾಮಾಧಾನ.

ಆದರೆ ಭಾರತದಲ್ಲಿಯೂ ಸೆಲೆಬ್ರಿಟಿಗಳು ಬಳಸಿದ ವಸ್ತುಗಳನ್ನು ಹರಾಜು ಮಾಡುವ ಸಂಪ್ರದಾಯ ಹೆಚ್ಚಿದೆ. ಕ್ರಿಕೆಟಿಗರು ತಮ್ಮ ಮೆಚ್ಚಿನ ಬ್ಯಾಟುಗಳನ್ನು ಹರಾಜಿಗಿಟ್ಟರೆ, ಸಿನಿಮಾ ತಾರೆಯರು ಬಟ್ಟೆಗಳನ್ನು, ಫ್ಯಾಷನ್ ವಸ್ತುಗಳನ್ನು ಹರಾಜಿಗಿಡುತ್ತಾರೆ.

ಇದೀಗ ಸಂಗೀತ ಮಾಂತ್ರಿಕ ಎಆರ್ ರೆಹಮಾನ್‌ರ ಉಡುಪನ್ನು ಹರಾಜು ಮಾಡಲಾಗಿದೆ. ಎರಡು ಆಸ್ಕರ್ ಸೇರಿದಂತೆ ತಮ್ಮ ಅದ್ವಿತೀಯ ಸಂಗೀತಕ್ಕಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎ.ಆರ್.ರೆಹಮಾನ್ ಒಂದು ಪ್ರಮುಖ ಕಾರ್ಯಕ್ರಮದಲ್ಲಿ ತೊಟ್ಟಿದ್ದ ಬಟ್ಟೆಯನ್ನು ಹರಾಜು ಮಾಡಲಾಗಿದ್ದು 6.75 ಲಕ್ಷ ರುಪಾಯಿ ಬೆಲೆಗೆ ಉಡುಪು ಹರಾಜಾಗಿದೆ. ಪ್ರಮೋದ್ ಸುರಾಧಿಯಾ ಎಂಬುವರು ಎ.ಆರ್.ರೆಹಮಾನ್ ಅವರ ಉಡುಪನ್ನು ಖರೀದಿ ಮಾಡಿದ್ದಾರೆ.

AR Rahman Dress Auctioned For 6.70 Lakh Rs

ದಿ ರಾಜಸ್ಥಾನ ಕಾಸ್ಮೊ ಕ್ಲಬ್‌ನ 28ನೇ ಸಂಸ್ಥಾಪನಾ ದಿನಾಚರಣೆಯ ದಿನ ಎ.ಆರ್.ರೆಹಮಾನ್ ಬಟ್ಟೆಯನ್ನು ಹರಾಜು ಮಾಡಲಾಗಿದೆ. ಹರಾಜಿನಿಂದ ಬಂದ ಹಣವನ್ನು ಬಟ್ಟೆ ಇಲ್ಲದ ಮಕ್ಕಳಿಗೆ ಉಚಿತವಾಗಿ ಬಟ್ಟೆ ಒದಗಿಸುವ ಎನ್‌ಜಿಓ ಒಂದಕ್ಕೆ ದಾನ ನೀಡಲಾಗುತ್ತದೆ.

ಭಾರತದ ಅತ್ಯುತ್ತಮ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿಲ್ಲ. ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿ ಅವರೊಟ್ಟಿಗಷ್ಟೆ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಮೊದಲ ಬಾರಿಗೆ ಎ.ಆರ್.ರೆಹಮಾನ್ ಸಿನಿಮಾ ಒಂದಕ್ಕೆ ಕತೆ ಬರೆದು, ನಿರ್ಮಾಣ ಸಹ ಮಾಡಿದ್ದರು, '99 ಸಾಂಗ್ಸ್' ಹೆಸರಿನ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯಿತು.

ಇದರ ಹೊರತಾಗಿ ಮಣಿರತ್ನ ನಿರ್ದೇಶಿಸುತ್ತಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ ರೆಹಮಾನ್. ಜೊತೆಗೆ ನಟ, ನಿರ್ದೇಶಕ ಪಾರ್ತಿಬನ್‌ರ ಹೊಸ ಸಿನಿಮಾ 'ಇರವಿನ್ ನಿಳಲ್' ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾ ರಾಷ್ಟ್ರಪ್ರಶಸ್ತಿ ಗಳಿಸಲಿದೆ ಎಂದು ಹೊಗಳಿರುವ ರೆಹಮಾನ್, ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ನನಗೆ ಸಿಕ್ಕ ಗೌರವ ಎಂದು ಹೇಳಿದ್ದಾರೆ.

ಎಆರ್ ರೆಹಮಾನ್ ಭಾರತದ ಟಾಪ್ ಒನ್ ಸಂಗೀತ ನಿರ್ದೇಶಕ 'ಸ್ಲಮ್ ಡಾಗ್ ಮಿಲೇನಿಯರ್' ಸಿನಿಮಾಕ್ಕೆ ನೀಡಿದ ಸಂಗೀತಕ್ಕಾಗಿ ಎರಡು ಆಸ್ಕರ್ ಪ್ರಶಸ್ತಿ ಬಾಚಿಕೊಂಡಿರುವ ರೆಹಮಾನ್. ಬಳಿಕ ಹಾಲಿವುಡ್ ಸಿನಿಮಾ '127 ಹವರ್ಸ್‌'ಗೆ ನೀಡಿದ ಸಂಗೀತಕ್ಕಾಗಿ ಆಸ್ಕರ್‌ಗೆ ನಾಮಿನೇಟ್ ಆಗಿದ್ದರು. ಆಸ್ಕರ್‌ ಮಾತ್ರವಲ್ಲದೆ ವಿದೇಶದ ಪ್ರತಿಷ್ಠಿತ ಪ್ರಶಸ್ತಿಗಳಾದ 'ಬಾಫ್ತಾ', 'ಗೋಲ್ಡನ್ ಗ್ಲೋಬ್', 'ಗ್ರಾಮಿ', 'ಡಬ್ಲು ಎಸ್‌ಎ' ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಇವುಗಳ ಜೊತೆಗೆ ಈ ವರೆಗೆ ಆರು ಬಾರಿ ಅತ್ಯುತ್ತಮ ಸಂಗೀತಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದಾರೆ. 23 ಬಾರಿ ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಐಶಾ, ಫಿಲಂಫೇರ್ ಸೌತ್, ತಮಿಳುನಾಡು ರಾಜ್ಯ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಎ.ಆರ್.ರೆಹಮಾನ್ ಅವರನ್ನು ಹುಡುಕಿ ಬಂದಿವೆ.

More from Filmibeat

English summary
Music director AR Rahman's Dress auctioned for 6.70 lakh rs. Money will be used to give cloths to poor children.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X