AR Rahman: ಶಸ್ತ್ರಚಿಕಿತ್ಸಕರ ಸಂಘದ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಎಆರ್ ರಹಮಾನ್
ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಎಆರ್ ರಹಮಾನ್ ಚೆನ್ನೈ ಮ್ಯೂಸಿಕ್ ಕಾನ್ಸರ್ಟ್ ವಿವಾದದಿಂದ ಭಾರೀ ಸುದ್ದಿಯಾಗಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಮ್ಯೂಸಿಕ್ ಕಾನ್ಸರ್ಟ್ ಹಲವು ಆರೋಪಗಳಿಗೆ ಕಾರಣವಾಗಿತ್ತು. ಈ ಘಟನೆಯ ಬೆನ್ನಲ್ಲೇ ಈಗ ಮತ್ತೊಂದು ವಿವಾದಕ್ಕೆ ರಹಮಾನ್ ಸಿಲುಕಿದ್ದಾರೆ.
2018ರಲ್ಲಿ ಸಂಗೀತ ಕಾರ್ಯಕ್ರಮ ಮಾಡಿಕೊಡುವುದಾಗಿ ಎಆರ್ ರಹಮಾನ್ 29 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಮತ್ತು ಅದನ್ನು ಎಂದಿಗೂ ನಡೆಸಿ ಕೊಡಲಿಲ್ಲ ಎಂದು ಭಾರತೀಯ ಶಸ್ತ್ರಚಿಕಿತ್ಸಕರ ಸಂಘವು ರೆಹಮಾನ್ ವಿರುದ್ಧ ದೂರು ದಾಖಲಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಎಆರ್ ರೆಹಮಾನ್ ಪರ ವಕೀಲರು ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದು, ತಾವೂ ಕೂಡ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

10 ಕೋಟಿ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ ಎಆರ್ ರೆಹಮಾನ್
ಎಆರ್ ರೆಹಮಾನ್ ಅವರ 'ಮರಕ್ಕುಮ ನೆಂಜಮ್' ಮ್ಯೂಸಿಕ್ ಕಾನ್ಸರ್ಟ್ ಕಿರುಕುಳ, ಕಾಲ್ತುಳಿತದಂತಹ ಸನ್ನಿವೇಶ ಮತ್ತು ನಕಲಿ ಟಿಕೆಟ್‌ಗಳ ಹಾವಳಿ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸಿತ್ತು. ಅತೀಯಾದ ಜನದಟ್ಟಣೆಯಿಂದಾಗಿ ಸರಿಯಾದ ಟಿಕೆಟ್‌ಗಳನ್ನು ಹೊಂದಿದ್ದರೂ ಅನೇಕ ಅಭಿಮಾನಿಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು.
ಇದಾದ ನಂತರ ಕಾರ್ಯಕ್ರಮದ ಬಗ್ಗೆ ಅನೇಕ ಗಂಭೀರ ಆರೋಪಗಳು ಕೇಳಿ ಬಂದವು. ಎಆರ್ ರಹಮಾನ್ ಕೂಡ ಕ್ಷಮೆ ಯಾಚಿಸಿದ್ದರು. ಹಲವು ಅಭಿಮಾನಿಗಳು ಇದರಲ್ಲಿ ಎಆರ್ ರಹಮಾನ್ ಅವರ ತಪ್ಪಿಲ್ಲ ಎಂದರು. ಆದರೆ ಮತ್ತೇ ಕೆಲವರು ಅಷ್ಟೋಂದು ಹಣ ನೀಡಿ ಬಂದು ಹೀಗೆ ಹಿಂಸೆಗೆ ಒಳಾಗಿರುವುದು ಅವರಿಂದಲೇ ಎಂದು ಆರೋಪಿಸಿ ಹೊಣೆ ಮಾಡಿದ್ದರು.
ಇದೀಗ, ಸಂಗೀತ ನಿರ್ದೇಶಕ ಎಆರ್ ರಹಮಾನ್ ವಿರುದ್ಧ ಭಾರತೀಯ ಶಸ್ತ್ರಚಿಕಿತ್ಸಕರ ಸಂಘ ಎಸಿಕಾನ್ ದೂರು ದಾಖಲಿಸಿದ್ದರಿಂದ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಎಆರ್ ರಹಮಾನ್ ತಂಡ, ತಮ್ಮನ್ನು ಮಾನಹಾನಿ ಮಾಡಲು ಯತ್ನಿಸಿದ್ದಕ್ಕೆ ಪರಿಹಾರವಾಗಿ 10 ಕೋಟಿ ರೂಪಾಯಿ ನೀಡಬೇಕು ಎಂದು ದಾವೆ ಹೂಡಿದೆ.

ಎಆರ್ ರಹಮಾನ್ ವಿರುದ್ಧದ ದೂರನ್ನು ಮೂರು ದಿನಗಳಲ್ಲಿ ಹಿಂಪಡೆಯುವಂತೆ ಭಾರತೀಯ ಶಸ್ತ್ರಚಿಕಿತ್ಸಕರ ಸಂಘಕ್ಕೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ರೆಹಮಾನ್ ಅವರ ತಮಡ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ತಮಗೆ ತಿಳಿದಿಲ್ಲದ ಮೂರನೇ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಿದೆ.
ಎಆರ್ ರಹಮಾನ್ ಅವರ ಪ್ರತಿಷ್ಠೆಗೆ ಧಕ್ಕೆ ತಂದಿದ್ದಕ್ಕಾಗಿ ಬೇಷರತ್ ಕ್ಷಮೆಯಾಚಿಸುವಂತೆ ಅವರು ಕಾನೂನು ನೋಟಿಸ್‌ನಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘಕ್ಕೆ ಸೂಚಿಸಿದೆ. ಜೊತೆಗೆ ರೆಹಮಾನ್ ಪರ ವಕೀಲರು ಮಾನಹಾನಿ ಮಾಡಿದ್ದಕ್ಕಾಗಿ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಭಾರತೀಯ ಶಸ್ತ್ರಚಿಕಿತ್ಸಕರ ಸಂಘವು ಪರಿಹಾರವನ್ನು ಪಾವತಿಸಲು ವಿಫಲವಾದಲ್ಲಿ ಎಆರ್ ರಹಮಾನ್ ಕಾನೂನು ಮತ್ತು ಕ್ರಿಮಿನಲ್ ಕ್ರಮವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.


Click it and Unblock the Notifications











