AR Rahman: ಎಆರ್ ರಹಮಾನ್ ಸಂಗೀತ ಕಾರ್ಯಕ್ರಮದ ಅವ್ಯವಸ್ಥೆ, ಪೊಲೀಸ್ ಅಧಿಕಾರಿಗಳ ವರ್ಗಾವಣೆ!
ಎಆರ್ ರೆಹಮಾನ್ ದೇಶಕ್ಕೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಸಂಗೀತ ನಿರ್ದೇಶಕ. ಅವರ ಹಾಡುಗಳಲ್ಲಿ ಜನರನ್ನು ಸೆಳೆಯುವ ಜಾದುವಿತ್ತು. ಈಗ ಅದು ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಆದರೂ ಕಾನ್ಸರ್ಟ್‌ಗಳ ಮೂಲಕ ಸಂಗೀತ ಪ್ರೇಮಿಗಳನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಮೊನ್ನೆ ನಡೆದ ಸಂಗೀತ ಕಚೇರಿ ರಹಮಾನ್ ಹೆಸರಿಗೆ ಕಪ್ಪು ಚುಕ್ಕೆಯಾಗಿದೆ.
ಸೆಪ್ಟೆಂಬರ್ 10 ರಂದು ನಡೆದ ಚೆನ್ನೈ ಸಂಗೀತ ಕಛೇರಿ, 'ಮುರುಕ್ಕಂ ನೆಂಜಮ್'' ಭಾರತದ ಅತಿದೊಡ್ಡ ಸಂಗೀತ ಕಛೇರಿ ಎಂದು ಟಿಕೆಟ್ ಮಾರಾಟ ಮಾಡಲಾಗಿತ್ತು. ಚೆನ್ನೈನ ಪನೈಯೂರ್‌ನಲ್ಲಿರುವ ಆದಿತ್ಯರಾಮ್ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 45,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಈ ಕಾನ್ಸರ್ಟ್‌ನಲ್ಲಿ ಜನಸಂದಣಿ ನಿಯಂತ್ರಣ ಮಾಡಲು ಆಡಳಿತ ವಿಫಲವಾಗಿತ್ತು. ಸಂಗೀತ ಕಚೃರಿಯಲ್ಲಿ ಅನೇಕ ಮಹಿಳೆಯರು ಕಿರುಕುಳಕ್ಕೊಳಗಾಗುವುದು, ಮಕ್ಕಳು ಕಷ್ಟಕ್ಕೆ ಒಳಗಾಗುವುದು ಮತ್ತು ವಿಪರೀತ ದಟ್ಟಣೆ, ದಟ್ಟಣೆಯನ್ನು ಸರಿಯಾಗಿ ನಿಯಂತ್ರಿಸದಿರುವುದು ಕಂಡು ಬಂದಿತ್ತು. ಕಾರ್ಯಕ್ರಮ ಆಯೋಜಕರು ಮತ್ತು ಸಂಗೀತ ನಿರ್ದೇಶಕ ಎಆರ್ ರಹಮಾನ್ ವಿರುದ್ಧ ಭಾರೀ ಆಕ್ರೋಶ ಕೇಳಿ ಬಂದಿತ್ತು.
ಮೂವರು ಪೊಲೀಸರ ವರ್ಗಾವಣೆ
ಇನ್ನು, ಕಾನ್ಸರ್ಟ್ ವೇಳೆ ನಡೆದ ಅವ್ಯವಸ್ಥೆ ಬಗೆಗಿನ ವರದಿಗಳ ನಂತರ ತನಿಖೆಗೆ ಆದೇಶಿಸಲಾಗಿದೆ. ಇಂಡಿಯಾ ಟುಡೇ ಹಂಚಿಕೊಂಡಿರುವ ಮಾಹಿತಿಯಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಜನಸಂದಣಿ ಮತ್ತು ದಟ್ಟಣೆ ನಿರ್ವಹಣೆಯ ವೈಫಲ್ಯದ ವರದಿಗಳ ನಂತರ, ವಿಚಾರಣೆ ನಡೆಸಲಾಗಿದೆ. ಇವುಗಳ ಹಿನ್ನೆಲೆ ಮೂವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಮುಂದಿನ ಆದೇಶದವರೆಗೆ ಕಡ್ಡಾಯವಾಗಿ ಕಾಯುವಂತೆ ನಿರ್ದೇಶಿಸಸಲಾಗಿದೆ. ಈ ವರ್ಗಾವಣೆ ಕೇವಲ ಎಆರ್ ರೆಹಮಾನ್ ಅವರ ಸಂಗೀತ ಕಛೇರಿಗಷ್ಟೇ ಸಂಬಂಧಿಸಿಲ್ಲ. ಇತರ ಕಾರ್ಯಕ್ರಮಗಳಿಗೆ ಸಂಬಂಧಿಸಿವೆ ಎಂದು ವರದಿಗಳು ಸೂಚಿಸುತ್ತವೆ.
ಇನ್ನು, ಕಾನ್ಸರ್ಟ್‌ನಲ್ಲಿ ಒಬ್ಬರಾಗಿದ್ದ ಗಾಯಕಿ ಶ್ವೇತಾ ಮೋಹನ್ ಅವರು ಸಂಗೀತ ಕಛೇರಿಯಲ್ಲಿ ಕಿರುಕುಳಕ್ಕೊಳಗಾದ ಯುವತಿಗರ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳಂತೆ ವೇಷ ಧರಿಸಿರುವ ಇಂತಹ ದುಷ್ಕರ್ಮಿಗಳು ಇಂತಹ ಸಂಗೀತ ಕಛೇರಿಗಳಿಗೆ ಹಾಜರಾಗಬೇಕೇ ಎಂದು ಪ್ರಶ್ನಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 11 ರಂದು, ಯುವನ್ ಶಂಕರ್ ರಾಜಾ ಅವರು ವಿವರವಾದ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಸಂಘಟಕರು ಇದರಿಂದ ಪಾಠ ಕಲಿಯಬೇಕು. ಭವಿಷ್ಯದಲ್ಲಿ ಕಾರ್ಯಕ್ರಮಗಳನ್ನು ಸರಿಯಾಗಿ ನಡೆಸಬೇಕು ಎಂದು ವಿವರಿಸಿದರು. ಈ ವಿಚಾರದಲ್ಲಿ ಎಆರ್ ರೆಹಮಾನ್ ಜೊತೆ ನಿಲ್ಲುತ್ತೇನೆ ಎಂದೂ ಅವರು ತಿಳಿಸಿದ್ದಾರೆ.
ತಮಿಳು ನಟ ಕಾರ್ತಿ ತಮ್ಮ ಕುಟುಂಬದವರೂ ಕೂಡ ಸಂಗೀತ ಕಛೇರಿಗೆ ಬಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಈ ಘಟನೆಯಿಂದಾಗಿ ರಹಮಾನ್‌ಗೆ ತೊಂದರೆಯಾಗುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ನಟಿ ಖುಷ್ಬೂ ಸುಂದರ್ ಕೂಡ ಸೀಟುಗಳು ಸಿಗದೆ ತನ್ನ ಮಗಳು ಮತ್ತು ಅವಳ ಸ್ನೇಹಿತರಿಗೆ ಪ್ರವೇಶ ನಿರಾಕರಿಸಲಾಗಿದೆ. ಆಯೋಜಕರದ್ದೇ ತಪ್ಪೇ ಹೊರತು ರಹಮಾನ್ ಅವರದ್ದಲ್ಲ ಎಂದು ಹೇಳಿದ್ದಾರೆ.


Click it and Unblock the Notifications











