»   » ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಈ ಒಂದು ಆಸೆ ಈಡೇರಿಲ್ಲ.!

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಈ ಒಂದು ಆಸೆ ಈಡೇರಿಲ್ಲ.!

Posted By:
Subscribe to Filmibeat Kannada

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈಗಾಗಲೇ ಸುಮಾರು 80ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದ ಬಹುತೇಕ ಎಲ್ಲ ಸ್ಟಾರ್ ನಟರಿಗೂ ಸಂಗೀತ ನೀಡಿರುವ ಅರ್ಜುನ್ ಜನ್ಯ ಪುನೀತ್ ರಾಜ್ ಕುಮಾರ್ ಅವರ ಚಿತ್ರಕ್ಕೆ ಇದುವರೆಗೂ ಸಂಗೀತ ನೀಡಿಲ್ಲ.

ಸುದೀಪ್, ಶಿವಣ್ಣ, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ಅವರ ಸಿನಿಮಾಗಳಿಗೆ ಸಂಗೀತ ನೀಡಿದ್ದ ಜನ್ಯಗೆ ಈ ವರ್ಷ ದರ್ಶನ್ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ತು. ಮೊದಲ ಬಾರಿಗೆ ದರ್ಶನ್ ಅವರ 'ಚಕ್ರವರ್ತಿ' ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದ ಅರ್ಜುನ್ ನಂತರ 'ತಾರಕ್' ಚಿತ್ರಕ್ಕೂ ಸಂಗೀತ ನೀಡಿದರು.

Arjun Janya has not given music to Puneet Rajkumar's film yet

ಹೀಗಿದ್ದರೂ ಕೂಡ ಪುನೀತ್ ರಾಜ್ ಕುಮಾರ್ ಅವರ ಚಿತ್ರಕ್ಕೆ ಇದುವರೆಗೂ ಅರ್ಜುನ್ ಸಂಗೀತ ನೀಡಿಲ್ಲ. ಆದರೆ ಈ ಹಿಂದೆ ಅರ್ಜುನ್ ಸಂಗೀತದಲ್ಲಿ ಪುನೀತ್ ಹಾಡಿದ್ದಾರೆ. ಆದರೆ ಅಪ್ಪು ನಾಯಕನಾಗಿರುವ ಚಿತ್ರಕ್ಕೆ ಅರ್ಜುನ್ ಮ್ಯೂಸಿಕ್ ನೀಡುವ ಕಾಲ ಇನ್ನೂ ಕೂಡಿ ಬಂದಿಲ್ಲ. ಸದ್ಯ ಅರ್ಜುನ್ ಜನ್ಯ 'ದಿ ವಿಲನ್' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬಿಜಿ ಇದ್ದಾರೆ.

English summary
Kannada Music Director Arjun Janya has not given music to Puneet Rajkumar's film yet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X