For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತೆ ಆಸ್ಪತ್ರೆಗೆ ದಾಖಲು

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಪಾಸಿಟಿವ್ ವರದಿ ಬಂದ ಕಾರಣ ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅರ್ಜುನ್ ಜನ್ಯ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಕಳೆದ ವರ್ಷ ಅರ್ಜುನ್ ಜನ್ಯ ಅವರಿಗೆ ಲಘು ಹೃದಯಾಘಾತ ಸಂಭವಿಸಿದ್ದು, ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಘಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಸುದ್ದಿ ಜನ್ಯ ಅಭಿಮಾನಿಗಳಿಗೆ, ಆಪ್ತರಿಗೆ ಮತ್ತು ಕುಟುಂಬದವರಿಗೆ ಶಾಕ್ ನೀಡಿತ್ತು. ಬಳಿಕ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು.

  ಕೊರೊನಾ ಲಸಿಕೆ ಪಡೆದ ನಂತರ ನಟಿ ನಗ್ಮಾಗೆ ಪಾಸಿಟಿವ್ಕೊರೊನಾ ಲಸಿಕೆ ಪಡೆದ ನಂತರ ನಟಿ ನಗ್ಮಾಗೆ ಪಾಸಿಟಿವ್

  ಸಂಗೀತ ಕೆಲಸಗಳ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿ ಇರುವ ಅರ್ಜುನ್ ಜನ್ಯ ಸದ್ಯ ಡಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಕೊರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾದ ಜೊತೆ ಮಾತನಾಡಿದ ಅರ್ಜುನ್ ಜನ್ಯ, 'ತಡವಾಗಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿತು. ನಂತರ ಕೊರೊನಾ ಪರೀಕ್ಷೆ ಮಾಡಿಸಿದಾಗ ವರದಿ ಪಾಸಿಟಿವ್ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾನು ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದೇನೆ' ಎಂದಿದ್ದಾರೆ.

  ಸುರಕ್ಷತಾ ಪ್ರೋಟೋಕಾಲ್ ಅನುಸರಿಸಿದ್ದೇವೆ, ತುಂಬಾ ಜಾಗರೂಕರಾಗಿ ಇದ್ದರೂ ಸಹ ಹೇಗೆ ಕೊರೊನಾ ವೈರಸ್ ಬಂದಿದೆ ಎನ್ನುವುದು ಖಚಿತವಿಲ್ಲ ಎಂದಿದ್ದಾರೆ. ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ಮರಳುತ್ತೇನೆ. ವೈದ್ಯರ ಸಲಹೆ ಮೇರೆಗೆ ಮತ್ತೆ ಕೆಲಸಕ್ಕೆ ತೆರಳುವುದಾಗಿ ಹೇಳಿದ್ದಾರೆ.

  ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯ ಸಾಕಷ್ಟು ಹಿಟ್ ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ನೀಡಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ದರ್ಶನ್ ನಟನೆಯ ಸೂಪರ್ ಹಿಟ್ ರಾಬರ್ಟ್ ಸಿನಿಮಾಗೂ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

  English summary
  Music director Arjun Janya hospitalized after tested positive for corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X