For Quick Alerts
  ALLOW NOTIFICATIONS  
  For Daily Alerts

  ಯಶ್ ರಾಜ್ ಸ್ಟುಡಿಯೋದಲ್ಲಿ ಅರ್ಜುನ್ ಜನ್ಯ,ಪ್ರೇಮ್: ಪಕ್ಕದಲ್ಲಿರೋ ದಿಗ್ಗಜ ಯಾರು?

  |

  ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಸೋಲುತ್ತೋ, ಗೆಲ್ಲುತ್ತೋ.. ಆದರೆ, ಸಿನಿಮಾದ ಸಂಗೀತ ಮಾತ್ರ ಗೆದ್ದೇ ಗೆಲ್ಲುತ್ತೆ. ಪ್ರೇಮ್ ಸಿನಿಮಾದ ಪ್ರತಿಯೊಂದು ಹಾಡು ಕೂಡ ಸೂಪರ್ ಹಿಟ್ ಆಗಿದೆ. ಇತ್ತೀಚೆಗೆ ಬಂದ 'ಏಕ್ ಲವ್ ಯಾ' ಸಿನಿಮಾದ ಹಾಡುಗಳು ಕೂಡ ಸಂಗೀತ ಪ್ರಿಯರ ಮನಗೆದ್ದಿದೆ.

  ಜೋಗಿ ಪ್ರೇಮ್ ಸಿನಿಮಾಗಳ ತಾಕತ್ತೇ ಅದು. ಸಂಗೀತ ಅಂತೂ ಹಿಟ್ ಲಿಸ್ಟ್ ಸೇರೋದರಲ್ಲಿ ಯಾವುದೇ ಅನುಮಾನವೂ ಇರೋದಿಲ್ಲ. ಇನ್ನೊಂದು ಕಡೆ ಸಿನಿಮಾ ಕೂಡ ಬಿಡುಗಡೆ ಮುನ್ನ ಸಿಕ್ಕಪಟ್ಟೆ ಹೈಪ್ ಕ್ರಿಯೇಟ್ ಮಾಡುತ್ತೆ. ಸಿನಿಪ್ರಿಯರಲ್ಲಿ ಆ ಸಿನಿಮಾ ಬಗ್ಗೆ ಕ್ರೇಜ್ ಇಮ್ಮಡಿಗೊಳಿಸುತ್ತೆ.

  ಮತ್ತೆ ಕನ್ನಡಕ್ಕೆ ಸಂಜಯ್ ದತ್! ಈ ಬಾರಿ ಕರೆತರುತ್ತಿರುವುದು ಯಾರು?ಮತ್ತೆ ಕನ್ನಡಕ್ಕೆ ಸಂಜಯ್ ದತ್! ಈ ಬಾರಿ ಕರೆತರುತ್ತಿರುವುದು ಯಾರು?

  ಈಗ ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರಿದೆ. 70ರ ದಶಕದ ಕಥೆಯಾಗಿರುವುದರಿಂದ ಅದಕ್ಕಾಗಿ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರೆ. ಈಗ ಆ ಸಿನಿಮಾಗಾಗಿಯೇ ಸಂಗೀತ ಸಂಯೋಜನೆ ಮಾಡಲಾಗುತ್ತಿದೆ. ಅರ್ಜುನ್ ಜನ್ಯ ಹಾಗೂ ಪ್ರೇಮ್ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ.

  ಮ್ಯೂಸಿಕ್ ಮೂಡ್ನಲ್ಲಿ ಅರ್ಜುನ್ ಜನ್ಯ!

  ಮ್ಯೂಸಿಕ್ ಮೂಡ್ನಲ್ಲಿ ಅರ್ಜುನ್ ಜನ್ಯ!

  ಜೋಗಿ ಪ್ರೇಮ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳುತ್ತಿರೋದು ಗೊತ್ತೇ ಇದೆ. ಈ ಸಿನಿಮಾಗಾಗಿಯೇ ಮ್ಯೂಸಿಕ್ ಕಂಪೋಸ್ ಮಾಡಲಾಗುತ್ತಿದೆ. ಸದ್ಯ ಚಿತ್ರತಂಡ ಹಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದೆ. ಸಂಗೀತ ಕ್ಷೇತ್ರದ ದಿಗ್ಗಜ ತೌಫಿಕ್ ಖುರೇಶಿ ಜೊತೆ ಅರ್ಜುನ್ ಜನ್ಯ ಕೈ ಜೋಡಿಸಿದ್ದಾರೆ. ಸಿನಿಮಾಗೆ ಬೇಕಿರೋ ರಿಧಂಗಳನ್ನು ರೆಕಾರ್ಡ್ ಮಾಡಲಾಗುತ್ತಿದ್ದು, ಮುಂಬೈನ ವೈಆರ್‌ಎಫ್ ಸ್ಟುಡಿಯೋದಲ್ಲಿ ಬೀಡು ಬಿಟ್ಟಿದ್ದಾರೆ.

  ತುಂಬು ಗರ್ಭಿಣಿ ಧ್ರುವ ಸರ್ಜಾ ಪತ್ನಿಗೆ ಹಿಗಂದಿದ್ಯಾಕೆ ಒಳ್ಳೆ ಹುಡುಗ ಪ್ರಥಮ್​..?ತುಂಬು ಗರ್ಭಿಣಿ ಧ್ರುವ ಸರ್ಜಾ ಪತ್ನಿಗೆ ಹಿಗಂದಿದ್ಯಾಕೆ ಒಳ್ಳೆ ಹುಡುಗ ಪ್ರಥಮ್​..?

  ತೌಫಿಕ್ ಖುರೇಶಿ ಯಾರು?

  ತೌಫಿಕ್ ಖುರೇಶಿ ಯಾರು?

  ಅರ್ಜುನ್ ಜನ್ಯ ಹಾಗೂ ಪ್ರೇಮ್ ಜೊತೆ ಫೋಟೊದಲ್ಲಿ ಕಾಣಿಸಿಕೊಳ್ಳುತ್ತಿರುವ ದಿಗ್ಗಜ ತೌಫಿಕ್ ಖುರೇಷಿ. ಖ್ಯಾತ ತಬಲ ವಾದಕ ಜಾಕಿರ್ ಹುಸೇನ್ ಅವರ ಸಹೋದರ. ಸಂಗೀತ ಕ್ಷೇತ್ರದಲ್ಲಿ ತೌಫಿಕ್ ಖುರೇಶಿ ಸಾಧನೆ ಕೂಡ ಬಹಳ ದೊಡ್ಡದಿದೆ. ಈತ ಖ್ಯಾತ ಜಂಬೆ ವಾದಕನಾಗಿದ್ದು, ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾಗೆ ಬೇಕಾಗಿರೋ ರಿಧಂಗಳನ್ನು ರೆಕಾರ್ಡ್ ಮಾಡುವುದಕ್ಕೆ ಅರ್ಜುನ್ ಜರ್ನಾಗೆ ನೆರವು ನೀಡುತ್ತಿದ್ದಾರೆ.

  ಅಂಡರ್‌ವರ್ಲ್ಡ್ ಕಥೆನಾ?

  ಅಂಡರ್‌ವರ್ಲ್ಡ್ ಕಥೆನಾ?

  ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ ಕುತೂಹಲ ದುಪ್ಪಟ್ಟಾಗಿದೆ. ಅಂದ್ಹಾಗೆ ಇದು ಜೋಗಿ ಪ್ರೇಮ್ ನಿರ್ದೇಶನ 9ನೇ ಸಿನಿಮಾ. ಈ ಬಾರಿ ಪ್ರೇಮ್ 70 ದಶಕದ ಭೂಗಲೋಕದ ಕಥೆಯನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಕೊತ್ವಾಲ್ ರಾಮಚಂದ್ರ ಹಾಗೂ ಎಂ ಪಿ ಜೈರಾಜ್ ಕಾಲ ಭೂಗತಲೋಕದ ಕತೆಯೊಂದನ್ನುತೆರೆಮೇಲೆ ತರಲು ಹೊರಟಿದ್ದಾರೆ ಅನ್ನೋ ಮಾತಿದೆ. ಇದು 1968 ಮತ್ತು 1978 ರ ನಡುವೆ ಕಾಲಘಟ್ಟದ ನೈಜ ಘಟನೆಯನ್ನು ಆಧರಿಸಿದೆ ಅನ್ನೋ ಮಾತಿದೆ.

  ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ ಅದ್ಧೂರಿ ಸೀಮಂತ ಶಾಸ್ತ್ರದ ಫೋಟೊಗಳು ವೈರಲ್ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ ಅದ್ಧೂರಿ ಸೀಮಂತ ಶಾಸ್ತ್ರದ ಫೋಟೊಗಳು ವೈರಲ್

  ಸಂಗೀತವೂ ಪ್ರಧಾನ

  ಸಂಗೀತವೂ ಪ್ರಧಾನ

  ಜೋಗಿ ಪ್ರೇಮ್ ನಿರ್ದೇಶನದ 'ಕರಿಯಾ', 'ಜೋಗಿ', 'ಜೋಗಯ್ಯ' ದಂತಹ ಸಿನಿಮಾಗಳನ್ನು ನೋಡಿದರೆ, ಸಂಗೀತ ಪ್ರಮುಖ ಪಾತ್ರವಹಿಸಿತ್ತು. ಇದು ಭೂಗತಲೋಕದ ಕಥೆಯಾಗಿದ್ದರೂ, ಪ್ರೇಮ್ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಕೆವಿಎನ್ ಪ್ರೊಡಕ್ಷನ್‌ನಂತಹ ಸಂಸ್ಥೆ ಈ ಸಿನಿಮಾಗೆ ಬಂಡವಾಳವನ್ನು ಹೂಡುತ್ತಿದೆ. ಹೀಗಾಗಿ ಈ ಬಾರಿ ಆಕ್ಷನ್ ಪ್ರಿನ್ಸ್ ಫ್ಯಾನ್ಸ್‌ಗೆ ಸಖತ್ ಸಿನಿಮಾ ಸಿಗೋದು ಗ್ಯಾರಂಟಿ ಅನ್ನೋ ಮಾತು ಗಾಂಧಿನಗರದಲ್ಲಿದೆ.

  English summary
  Arjun Janya Musically Associated Taufiq Qureshi For Rhythm For Dhruva Sarja And Prem Movie, Know More.
  Thursday, September 15, 2022, 21:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X