'ರಾಬರ್ಟ್' 100 ಮಿಲಿಯನ್: ಅರ್ಜುನ್ ಜನ್ಯ ಹೆಸರಿಗೆ ಮತ್ತೊಂದು ದಾಖಲೆ

ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹೆಸರಿಗೆ ಮತ್ತೊಂದು ದಾಖಲೆ ಸೇರಿಕೊಂಡಿದೆ. ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದ ರಾಬರ್ಟ್ ಸಿನಿಮಾದ ಹಾಡು ಯೂಟ್ಯೂಬ್‌ನಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಮೂಲಕ ಜನ್ಯ ವೃತ್ತಿ ಜೀವನದಲ್ಲಿ 100 ಮಿಲಿಯನ್ ವೀಕ್ಷಣೆ ಕಂಡ ಮೂರನೇ ಹಾಡು ಇದಾಗಿದೆ.

Recommended Video

ರಾಬರ್ಟ್ ಚಿತ್ರದಿಂದ ಮತ್ತೊಂದು ದಾಖಲೆ ಬರೆದ ಅರ್ಜುನ್ ಜನ್ಯ | Filmibeat Kannada

ಇದಕ್ಕೂ ಮುಂಚೆ ಕನ್ನಡದಲ್ಲಿ ಎರಡು ವಿಡಿಯೋ ಸಾಂಗ್ ಮತ್ತು ಒಂದು ಲಿರಿಕಲ್+ ವಿಡಿಯೋ ಸಾಂಗ್ 100 ಮಿಲಿಯನ್ ವೀಕ್ಷಣೆ ಕಂಡಿತ್ತು. ಈಗ ಮತ್ತೊಂದು ಲಿರಿಕಲ್ + ವಿಡಿಯೋ ಸಾಂಗ್ ಸೇರಿ 100 ಮಿಲಿಯನ್ ಕ್ಲಬ್ ಸೇರಿದೆ. ಈ ವಿಶೇಷ ಸಾಧನೆ ಬಗ್ಗೆ ಸ್ವತಃ ಅರ್ಜುನ್ ಜನ್ಯ ಟ್ವಿಟ್ಟರ್‌ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ, ಸ್ಯಾಂಡಲ್‌ವುಡ್‌ನಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡುಗಳು ಯಾವುದು? ಮುಂದೆ ಓದಿ...

ಬೆಳಗೆದ್ದು ಯಾರ ಮುಖವಾ ನೋಡಲಿ.....

ಬೆಳಗೆದ್ದು ಯಾರ ಮುಖವಾ ನೋಡಲಿ.....

'ಕಿರಿಕ್ ಪಾರ್ಟಿ' ಸಿನಿಮಾದ 'ಬೆಳಗೆದ್ದು ಯಾರ ಮುಖವಾ ನಾನು ನೋಡಲಿ.....' ಹಾಡು ಮೊದಲ ಸಲ 100 ಮಿಲಿಯನ್ ವೀಕ್ಷಣೆ ಕಂಡಿತ್ತು. ನಾಲ್ಕು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಈ ಹಾಡಿನ ವೀಕ್ಷಣೆ ಈಗ 103 ಮಿಲಿಯನ್ (103,748,431) ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು.

ಚುಟು ಚುಟು ಅಂತೈತೆ....

ಚುಟು ಚುಟು ಅಂತೈತೆ....

ಶರಣ್-ಆಶಿಕಾ ರಂಗನಾಥ್ ನಟನೆಯಲ್ಲಿ ಮೂಡಿ ಬಂದಿದ್ದ Rambo 2 ಚಿತ್ರದ 'ಚುಟು ಚುಟು...' ಹಾಡು 100 ಮಿಲಿಯನ್ ವೀಕ್ಷಣೆ ಕಂಡಿದೆ. ಮೂರು ವರ್ಷದ ಹಿಂದೆ ತೆರೆಕಂಡಿದ್ದ ಈ ವಿಡಿಯೋ ಸಾಂಗ್ ಈಗ 143 ಮಿಲಿಯನ್ (142,496,246) ವೀಕ್ಷಣೆ ಪಡೆದಿದೆ. ಈ ಹಾಡಿಗೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದರು.

ಯಾಕಮ್ಮಿ ಯಾಕಮ್ಮಿ....

ಯಾಕಮ್ಮಿ ಯಾಕಮ್ಮಿ....

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟನೆಯ ಅಯೋಗ್ಯ ಸಿನಿಮಾದ 'ಯಾಕಮ್ಮಿ ಯಾಕಮ್ಮಿ.....' ವಿಡಿಯೋ ಹಾಡು ಮತ್ತು ಲಿರಿಕಲ್ ವಿಡಿಯೋ ಸಾಂಗ್ ಸೇರಿ 100 ಮಿಲಿಯನ್ ವೀಕ್ಷಣೆ ಕಂಡಿದೆ. ವಿಡಿಯೋ ಸಾಂಗ್ 95 ಮಿಲಿಯನ್ ಮತ್ತು ಲಿರಿಕಲ್ ವಿಡಿಯೀ 29 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಹಾಡಿಗೂ ಅರ್ಜುನ್ ಜನ್ಯ ಸಂಗೀತ ಒದಗಿಸಿದ್ದರು.

'ಕಣ್ಣು ಹೊಡಿಯಾಕ...'

'ಕಣ್ಣು ಹೊಡಿಯಾಕ...'

ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ 'ಕಣ್ಣು ಹೊಡಿಯಾಕ...' ಹಾಡು 100 ಮಿಲಿಯನ್ ವೀಕ್ಷಣೆ ಕಂಡಿದೆ. ವಿಡಿಯೋ ಸಾಂಗ್ 63 ಮಿಲಿಯನ್ ಮತ್ತು ಲಿರಿಕಲ್ ವಿಡಿಯೋ 38 ಮಿಲಿಯನ್ ವೀಕ್ಷಣೆ ಕಂಡಿದ್ದು, ಎರಡು ಸೇರಿ 100 ಮಿಲಿಯನ್ ಆಗಿದೆ.

English summary
Kannada Music Director Arjun Janya's 3 Kannada Songs Crossed 100 Million Views in Youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X