ಮಾಜಿ ಬಿಗ್‌ಬಾಸ್ ಸ್ಪರ್ಧಿ ವಿರುದ್ಧ ವಾರೆಂಟ್, ಬಂಧನ ಭೀತಿ
ಮಾಜಿ ಬಿಗ್‌ಬಾಸ್ ಸ್ಪರ್ಧಿ, ಗಾಯಕಿ, ನೃತ್ಯಗಾರ್ತಿ ಸಪ್ನಾ ಚೌದರಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿತ್ತು, ಬಂಧನ ಭೀತಿ ಎದುರಾಗಿದೆ.
ಮೂರು ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲಖನೌನ ನ್ಯಾಯಾಲಯವು ಗಾಯಕಿ ಸಪ್ನಾ ಚೌದರಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ. ಸಪ್ನಾರನ್ನು ಬಂಧಿಸಿ ನ್ಯಾಯಾಲದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
2018 ರಲ್ಲಿ ಸಪ್ನಾ ಚೌದರಿ ಸಂಗೀತ ಕಾರ್ಯಕ್ರಮವೊಂದನ್ನು ಆಯೋಜಿಸಿ ಟಿಕೆಟ್ 300ರಂತೆ ಸಾವಿರಾರು ಜನರಿಗೆ ಟಿಕೆಟ್ ಮಾರಾಟ ಮಾಡಿದ್ದರು. ಆದರೆ ಸಪ್ನಾ ಆ ಕಾರ್ಯಕ್ರಮಕ್ಕೆ ಆಗಮಿಸಲೇ ಇಲ್ಲ. ಇದರಿಂದಾಗಿ ಕಾರ್ಯಕ್ರಮಕ್ಕೆ ಗೊತ್ತು ಮಾಡಲಾಗಿದ್ದ ಸ್ಥಳದಲ್ಲಿ ಗಲಾಟೆಗಳು ಆದವು. ಕಾರ್ಯಕ್ರಮ ರದ್ದಾದ ಬಳಿಕ ಟಿಕೆಟ್ ಖರೀದಿಸಿದ್ದವರಿಗೆ ಟಿಕೆಟ್ ಹಣವನ್ನು ವಾಪಸ್ ಸಹ ಮಾಡಲಿಲ್ಲ ಸಪ್ನಾ. ಹಾಗಾಗಿ ಕೆಲವರು ಆಯೋಜಕಿ ಹಾಗೂ ಗಾಯಕಿ ಎರಡೂ ಆಗಿದ್ದ ಸಪ್ನಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಎಷ್ಟೇ ನೊಟೀಸ್ ಕಳಿಸಿದರೂ ಸಪ್ನಾ ಉತ್ತರಿಸಿರಲಿಲ್ಲ, ನ್ಯಾಯಾಲಯ ಸಹ ಹಲವು ನೋಟೀಸ್ ಕಳಿಸಿದರೂ ಸಪ್ನಾ ಉತ್ತರ ನೀಡಿರಲಿಲ್ಲ. ಹಾಗಾಗಿ ಈಗ ನವೆಂಬರ್ 24 ಕ್ಕೆ ಇದೇ ಪ್ರಕರಣದ ವಿಚಾರಣೆ ಇದ್ದು, ಸಪ್ನಾ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಸಪ್ನಾರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯವು ಸೂಚಿಸಿದೆ.
ಈ ಹಿಂದೆ ಸಪ್ನಾ ನ್ಯಾಯಾಲಯಕ್ಕೆ ಪಿಟಿಶನ್ ಒಂದು ಸಲ್ಲಿಸಿ ತನ್ನ ವಿರುದ್ಧ ದಾಖಲು ಮಾಡಲಾಗಿರುವ ಎಫ್‌ಐಆರ್ ಅನ್ನು ರದ್ದು ಮಾಡುವಂತೆ, ಪ್ರಕರಣವನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ ಸಪ್ನಾರ ಪಿಟಿಶನ್ ರದ್ದಾಗಿತ್ತು.
ಸಪ್ನಾ ಚೌದರಿ ಮಾತ್ರವೇ ಅಲ್ಲದೆ ಕಾರ್ಯಕ್ರಮದ ಆಯೋಜಕ ಮಂಡಳಿಯಲ್ಲಿದ್ದ ಜುನೈದ್ ಅಹ್ಮದ್, ನವೀನ್ ಶರ್ಮಾ, ಇವಾದ್ ಅಲಿ, ಅಮಿತ್ ಪಾಂಡೆ, ರತ್ನಾಕರ್ ಉಪಾಧ್ಯಯ್ ಅವರುಗಳ ಮೇಲೆಯೂ ಎಫ್‌ಐಆರ್ ದಾಖಲಾಗಿದೆ. ಕಾರ್ಯಕ್ರಮದ ಟಿಕೆಟ್‌ಗಳನ್ನು ರು 300 ರಂತೆ ಆನ್‌ಲೈಫ್ ಹಾಗೂ ಆಫ್‌ಲೈನ್‌ನಲ್ಲಿ ಮಾರಾಟ ಮಾಡಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಮಂದಿ ಟಿಕೆಟ್‌ಗಳನ್ನು ಖರೀದಿಸಿದ್ದರು.


Click it and Unblock the Notifications











