'ಟಗರು ಬಂತು ಟಗರು' ಸಾಂಗ್ ಹೊಸ ಮೈಲಿಗಲ್ಲು: ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಸುಕ್ಕಾ ಸೂರಿ ಕಾಂಬಿನೇಷನ್‌ನ ಸೂಪರ್ ಹಿಟ್ ಸಿನಿಮಾ 'ಟಗರು'. ಕೆ. ಪಿ ಶ್ರೀಕಾಂತ್ ನಿರ್ಮಾಣದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಚಿತ್ರದ 'ಟಗರು ಬಂತು ಟಗರು' ಸಾಂಗ್ ಹುಟ್ಟಾಕ್ಕಿದ ಕ್ರೇಜ್ ಅಷ್ಟಿಷ್ಟಲ್ಲ. ಸದ್ಯ ಈ ಸಾಂಗ್ ಹೊಸ ದಾಖಲೆ ಬರೆದಿದ್ದು, ಸಿನಿರಸಿಕರ ಪ್ರೀತಿಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಧನ್ಯವಾದ ತಿಳಿಸಿದ್ದಾರೆ.

2018ರಲ್ಲಿ ಸೂರಿ ನಿರ್ದೇಶನದ 'ಟಗರು' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದಲ್ಲಿ ಧನಂಜಯ ಡಾಲಿ ಆಗಿ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿ ಗೆದ್ದರು. ಈ ಸಿನಿಮಾ ಡಾಲಿಗೆ ಚಿತ್ರರಂಗದಲ್ಲಿ ಹೊಸ ಲೈಫ್ ಕೊಟ್ಟಿದ್ದು ಸುಳ್ಳಲ್ಲ. ಚಿತ್ರದಲ್ಲಿ ಟಗರು ಶಿವನಾಗಿ ಹ್ಯಾಟ್ರಿಕ್ ಹೀರೊ ಅಬ್ಬರಿಸಿದ್ದರು. ಚರಣ್ ರಾಜ್ ಮ್ಯೂಸಿಕ್‌ನಲ್ಲಿ ಸಿನಿಮಾ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಚಿತ್ರದ ಟೈಟಲ್ ಸಾಂಗ್ ಸದ್ದು ಇಂದಿಗೂ ಕಮ್ಮಿ ಆಗಿಲ್ಲ. ಅದಕ್ಕೆ ಈ ದಾಖಲೆಯೇ ಸಾಕ್ಷಿ.

ಎನ್‌ಕೌಂಟರ್ ಸ್ಪೆಷಲಿಸ್ಟ್ ಎಸಿಪಿ ಶಿವಕುಮಾರ್ ಸಮಾಜದಲ್ಲಿರುವ ಕಿಡಿಗೇಡಿಗಳನ್ನು ಹೇಗೇ ಮಟ್ಟ ಹಾಕುತ್ತಾನೆ ಎನ್ನುವ ಕಥೆ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಶಿವಣ್ಣ ಲಾಂಗ್ ಝಳಪಿಸಿ ಹುಬ್ಬೇರಿಸಿದ್ದರು. ಅದರಲ್ಲೂ ಚರಣ್‌ ರಾಜ್ ಸಾಂಗ್ಸ್ ಹಾಗೂ ಬಿಜಿಎಂ ಮ್ಯಾಜಿಕ್ ಮಾಡಿತ್ತು. ಸೂರಿ ಸ್ಕ್ರೀನ್‌ಪ್ಲೇ, ಮೇಕಿಂಗ್ ಮಜವಾಗಿತ್ತು. ಸದ್ಯ ಚಿತ್ರದ ಟಗರು ಬಂತು ಟಗರು' ಸಾಂಗ್ ಹೊಸ ಮೈಲಿಗಲ್ಲು ಸಾಧಿಸಿದೆ.

100 ಮಿಲಿಯನ್ ವೀವ್ಸ್ ಸಾಧಿಸಿದ ಸಾಂಗ್

100 ಮಿಲಿಯನ್ ವೀವ್ಸ್ ಸಾಧಿಸಿದ ಸಾಂಗ್

ಪಿಆರ್‌ಕೆ ಆಡಿಯೋದಲ್ಲಿ 'ಟಗರು' ಸಿನಿಮಾ ಸಾಂಗ್ಸ್ ರಿಲೀಸ್ ಆಗಿತ್ತು. ಮೊದಲು 'ಟಗರು ಬಂತು ಟಗರು' ಲಿರಿಕಲ್ ಸಾಂಗ್ ರಿಲೀಸ್ ಮಾಡಿತ್ತು. ಸಿನಿಮಾ ತೆರೆಕಂಡು ಸೂಪರ್ ಹಿಟ್ ಆದಮೇಲೆ ಫುಲ್ ವೀಡಿಯೋ ಸಾಂಗ್‌ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿತ್ತು. 4 ವರ್ಷಗಳ ನಂತರ ಸಾಂಗ್ 100 ಮಿಲಿಯನ್ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಇನ್ನು ಲಿರಿಕ್ ವೀಡಿಯೋ ಸಾಂಗ್ ಕೂಡ 54 ಮಿಲಿಯನ್ ವೀವ್ಸ್ ಸಾಧಿಸಿದೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಧನ್ಯವಾದ

ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಧನ್ಯವಾದ

ಪುನೀತ್ ರಾಜ್‌ಕುಮಾರ್‌ ಅಗಲಿಕೆಯ ನೋವಿನಿಂದ ಕುಟುಂಬ ಇನ್ನು ಹೊರ ಬಂದಿಲ್ಲ. ಪಿಆರ್‌ಕೆ ಆಡಿಯೋ ಯೂಟ್ಯೂಬ್‌ ಪೇಜ್‌ನಲ್ಲಿ 'ಟಗರು' ಟೈಟಲ್ ಸಾಂಗ್ 100 ಮಿಲಿಯನ್ ವೀವ್ಸ್ ಸಾಧಿಸಿದ್ದಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. "ಟಗರು ಬಂತು ಟಗರು ಸಾಂಗ್‌ 100 ಮಿಲಿಯನ್ ವೀವ್ಸ್ ಸಾಧಿಸಿದೆ. ಈ ಸಾಂಗ್ ಮೇಲೆ ನೀವು ತೋರಿಸಿದ ಪ್ರೀತಿಗೆ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ.

ಆಂಥೋನಿ ದಾಸನ್ ವಾಯ್ಸ್ ಕಿಕ್

ಆಂಥೋನಿ ದಾಸನ್ ವಾಯ್ಸ್ ಕಿಕ್

ಸಂಗೀತ ನಿರ್ದೇಶಕ ಚರಣ್‌ ರಾಜ್‌ ಟ್ಯೂನ್ ಹಾಕಿದ್ದ ಸಾಂಗ್‌ಗೆ ವಿ. ನಾಗೇಂದ್ರ ಪ್ರಸಾದ್ ಲಿರಿಕ್ಸ್ ಬರೆದಿದ್ದರು. ತಮಿಳಿನ ಜನಪದ ಗಾಯಕ ಆಂಥೋನಿ ದಾಸನ್‌ ಹಾಡನ್ನು ಹಾಡಿದ್ದರು. ಚರಣ್ ರಾಜ್‌ ಲೆಕ್ಕಾಚಾರ ಪಕ್ಕಾ ಆಗಿತ್ತು. ಆಂಥೋನಿ ವಾಯ್ಸ್‌ 'ಟಗರು ಬಂತು ಟಗರು' ಬೇರೆಯದ್ದೇ ಖದರ್ ತಂದುಕೊಟ್ಟಿತ್ತು. ಇನ್ನು ಶಿವಣ್ಣನ ಸ್ಟೆಪ್ಸ್ ಬಗ್ಗೆ ಬಿಡಿಸಿ ಹೇಳುವುದೇ ಬೇಡ.

ಸಾಂಗ್ ಕಿವಿ ಮೇಲೆ ಬಿದ್ದರೆ ಮೈ ಕುಣಿಯುತ್ತೆ!

ಸಾಂಗ್ ಕಿವಿ ಮೇಲೆ ಬಿದ್ದರೆ ಮೈ ಕುಣಿಯುತ್ತೆ!

'ಟಗರು ಬಂತು ಟಗರು' ಡ್ಯಾನ್ಸ್ ಮಾಡುವುದಕ್ಕೆ ಹೇಳಿ ಮಾಡಿಸಿದ ಸಾಂಗ್. ಚರಣ್ ರಾಜ್‌ ಹಾಕಿರುವ ಟ್ಯೂನ್ ಮ್ಯಾಜಿಕ್ಕೇ ಅಂಥಾದ್ದು. ಈ ಸಾಂಗ್ ಕಿವಿ ಮೇಲೆ ಬೀಳ್ತಿದ್ದಂತೆ ಕೇಳುಗರ ಮೈ ತನ್ನಿಂತಾನೇ ಕುಣಿಯೋಕೆ ಶುರುವಾಗುತ್ತದೆ. ಪಬ್, ಪಾರ್ಟಿಗಳಲ್ಲಿ ಈ ಸಾಂಗ್ ಪ್ಲೇ ಮಾಡಿ ಕುಣಿದವರಿಗೆ ಲೆಕ್ಕವಿಲ್ಲ. ಅದೆಲ್ಲದರ ಪರಿಣಾಮವಾಗಿ ಸಾಂಗ್ 100 ಮಿಲಿಯನ್ಸ್ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ.

More from Filmibeat

English summary
Ashwini Puneeth Rajkumar thanks fans For 'Tagaru Banthu Tagaru' Song clocks 100 million views. Shivrajkumar Starrer Super Hit Taguru Movie Title Song. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X