twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಅಭಿನಯದ 'ಜಗ್ಗುದಾದಾ' ಆಡಿಯೋ ವಿಮರ್ಶೆ

    By ಪ್ರಶಾಂತ್ ಇಗ್ನೇಷಿಯಸ್
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಅಭಿನಯದ ಬಹು ನಿರೀಕ್ಷಿತ 'ಜಗ್ಗುದಾದಾ' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಎಂದಿನಂತೆ ದರ್ಶನ್ ಅಭಿಮಾನಿಗಳಲ್ಲಿ ಕಾತುರ.

    ಚಿತ್ರರಂಗದಲ್ಲಿನ ಜೀವನವೆಂದ ಮೇಲೆ ಏಳುಬೀಳುಗಳು ಸಹಜ. ಸದ್ಯಕ್ಕೆ ದರ್ಶನ್‍ಗೆ ಒಂದು ಭರ್ಜರಿ ಯಶಸ್ವಿ ಚಿತ್ರ ಬೇಕಾಗಿದ್ದು, ಅಭಿಮಾನಿಗಳಲ್ಲಿ ರಾಘವೇಂದ್ರ ಹೆಗೆಡೆ ನಿರ್ದೇಶನದ 'ಜಗ್ಗುದಾದಾ', ಆ ಯಶಸ್ವಿ ಚಿತ್ರವಾಗಬಹುದೆಂಬ ದೊಡ್ಡ ನಿರೀಕ್ಷೆಯಿದೆ. (ಒಂದೇ ದಿನದಲ್ಲಿ 3 ಬಿರುದು ಪಡೆದುಕೊಂಡ ದರ್ಶನ್)

    ಈಗ ಆಡಿಯೋ ಬಿಡುಗಡೆಯಾಗಿದ್ದು, ಹರಿಕೃಷ್ಣ ಅವರ ಸಂಗೀತವಿದೆ. ದರ್ಶನ್ ಚಿತ್ರಗಳ ಪಾಲಿಗೆ ದೊಡ್ಡ ವರವೆಂದರೆ ಅಭಿಮಾನಿಗಳೇ. ಹೇಗಿದ್ದರೂ ಚಿತ್ರವನ್ನು ಅವರು ಒಪ್ಪಿಕೊಳ್ಳುತ್ತಾರೆ. ಈ ಹಾಡುಗಳೂ ಸಹಾ ಅವರಿಗೆ ಮೆಚ್ಚುಗೆಯಾಗಬಹುದು.

    ಜಗ್ಗು ದುನಿಯಾ
    ಹಾಡಿರುವವರು: ರಂಜಿತ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ
    ಸಾಹಿತ್ಯ : ಚೇತನ್ ಕುಮಾರ್
    ದರ್ಶನ್ ಚಿತ್ರಗಳಿಗೆ ಆರಂಭದಲ್ಲಿ ಬೇಕಾದ ಗೀತೆ. ಎಂದಿನಂತೆ ನಾಯಕನ ಶೌರ್ಯದ, ಒಳ್ಳೆಯತನದ ಗುಣಗಾನದ ಗೀತೆ. ಇಂಥ ಗೀತೆಗಳಲ್ಲಿ ಪಳಗಿದ ಹರಿಕೃಷ್ಣರ ಸಂಗೀತಕ್ಕೆ ರಂಜಿತ್ , ಸಂತೋಷ್, ಶಶಾಂಕ್ ಎಲ್ಲರೂ ದನಿಗೂಡಿಸಿದ್ದಾರೆ. (ಆಡಿಯೋ ವಿಮರ್ಶೆ: ಸಂತೆಯಲ್ಲಿ ನಿಂತ ಕಬೀರ)

    ನಾಯಕನ ಬಗೆಗಿನ ಗೀತೆ ಆಗಿರುವುದರಿಂದ ಚೇತನ್ ಕುಮಾರ್ ಸಾಹಿತ್ಯ ಅದೇ ಸೀಮಿತ ಮಿತಿಯಲ್ಲಿಯೇ ಓಡಾಡಿಕೊಂಡಿದೆ. 'ಟೈಗರ್ರು ಕಾಲರ್ ಎತ್ತಿ ವಾಕಿಂಗ್ ಹೊರಟೈತ್ಲೇ' ಎಂಬ ಸಾಹಿತ್ಯ ಅನೇಕ ಅರ್ಥಗಳನ್ನು ನೀಡುತ್ತದೆ. ಈ ರೀತಿಯ ಅನೇಕ ಸಾಲುಗಳು ಹಾಡಿನ ಸಾಹಿತ್ಯದಲ್ಲಿದೆ. ಸ್ಲೈಡ್ ಕ್ಲಿಕ್ಕಿಸಿ..

     ಫನ್‍ಟನಟನ್

    ಫನ್‍ಟನಟನ್

    ಹಾಡಿರುವವರು: ಹೇಮಂತ್
    ಸಾಹಿತ್ಯ : ಡಾ. ನಾಗೇಂದ್ರ ಪ್ರಸಾದ್
    ನಾಗೇಂದ್ರ ಪ್ರಸಾದ್ ಸಾಹಿತ್ಯದ 'ಸಿಕ್ಕಳು ನಕ್ಕಳು ಹಿಡಿಸಿಬಿಟ್ಟಳು ತಿಕ್ಕಲು' ಎಂದು ಪ್ರಾರಂಭವಾಗುವ ಈ ಗೀತೆಯಲ್ಲಿ ಪ್ರಾಸಗಳ ಭಂಡಾರವೇ ಇದೆ. ಮುಂದಿನ ಸಾಲುಗಳಲ್ಲಿ ಹಾಡು ಲಚ್ಚಕ್ಕ್, ಸಡ್ಡಕ್ಕ್, ಡುಬುಕ್ಕ್, ಲಬ್ಬಕ್ಕ್, ಜಲಕ್ಕ್, ಜಮಕ್ಕ್...ಎಂಬ ಪ್ರಾಸಗಳ ಜೊತೆ ಜೊತೆ ಸಾಗುತ್ತದೆ. ಹೇಮಂತ್ ಲವಲವಿಕೆಯಿಂದ ಹಾಡಿದ್ದಾರೆ. ಹರಿಕೃಷ್ಣ ಈ ಹಾಡನ್ನು ಹಾಡದಿರುವುದು ಆಶ್ಚರ್ಯ, ಏಕೆಂದರೆ ಈ ರೀತಿಯ ಹಾಡುಗಳು ಅವರಿಗೂ ಹೊಂದುತ್ತದೆ. ಅಭಿಮಾನಿಗಳು ಹುಚ್ಚೆದ್ದು ಕುಣಿಯಬಹುದಾದ ಗೀತೆ.

     ತಲೆ ಕೆಡುತ್ತೆ ಹುಡುಗಿ

    ತಲೆ ಕೆಡುತ್ತೆ ಹುಡುಗಿ

    ಹಾಡಿರುವವರು: ಸೋನು ನಿಗಮ್
    ಸಾಹಿತ್ಯ : ಯೋಗ್‍ರಾಜ್ ಭಟ್
    ಈ ಹಾಡಿನಲ್ಲಿ ಹರಿಕೃಷ್ಣರ ಸಂಗೀತ ನಿಜಕ್ಕೂ ಮಧುರವಾಗಿದೆ. ಸೋನು ನಿಗಮ್ ಎಂದಿನಂತೆ ಗಾಯನದ ಮೂಲಕ ಜೀವ ತುಂಬಿದ್ದಾರೆ. ಆದರೆ ಭಟ್ಟರ ಸಾಹಿತ್ಯ ಇನ್ನಷ್ಟು ಗಂಭೀರವಾಗಿದ್ದರೆ ಇದು ಅತ್ಯುತ್ತಮ ಹಾಡಾಗಬಹುದಿತ್ತು. ನಿರ್ದೇಶಕರಿಗೇ ಈ ರೀತಿಯ ಸಾಹಿತ್ಯ ಬೇಕಿತ್ತೇನೋ? ಒಟ್ಟಿನಲ್ಲಿ ಕೇಳಬಹುದಾದ ಗೀತೆ.

    ವಾಲೆ ಜುಮ್ಕಿ

    ವಾಲೆ ಜುಮ್ಕಿ

    ಹಾಡಿರುವವರು: ಟಿಪ್ಪು, ಪ್ರಿಯಾ ಹೇಮೇಶ್
    ಸಾಹಿತ್ಯ : ಕವಿರಾಜ್
    'ಅಮ್ಮಣ್ಣಿ ಡ್ಯಾನ್ಸ್... ಅಪ್ಪಣ್ಣ ಡ್ಯಾನ್ಸ್' ಎನ್ನುವ ಸಾಲುಗಳಿರುವ ಈ ಹಾಡು ನೃತ್ಯಕ್ಕೆ ಹೇಳಿ ಮಾಡಿಸಿದಂತಿದೆ. ಹರಿಕೃಷ್ಣರವರ ಗಾಯನ ಬೇಕಿದ್ದವರಿಗೆ ಕೋರಸ್‍ನಲ್ಲಿ ಅವರನ್ನೇ ಹೋಲುವ ಧ್ವನಿ ಕೇಳಿಸುತ್ತದೆ. ಟಿಪ್ಪು ಹಾಗೂ ಪ್ರಿಯಾರವರ ಧ್ವನಿ ಸಂಗೀತ ಸಾಹಿತ್ಯಕ್ಕೆ ತಕ್ಕುದಾಗಿದೆ. "ನೀನು Search ಮಾಡು fullu Googleಉಉಉಉ" ಎಂಬಂಥ updated ಸಾಹಿತ್ಯವನ್ನೂ ಕೇಳಬಹುದು.

    ತಲೆ ಕೆಡುತ್ತೆ ಹುಡುಗಿ

    ತಲೆ ಕೆಡುತ್ತೆ ಹುಡುಗಿ

    ಗಾಯನ : ಹೇಮಂತ್
    ಸಾಹಿತ್ಯ : ಯೋಗ್‍ರಾಜ್ ಭಟ್
    ಸೋನು ನಿಗಮ್ ಹಾಡಿದ ಗೀತೆಯನ್ನು ಇಲ್ಲಿ ಹೇಮಂತ್ ಹಾಡಿದ್ದಾರೆ. ನಾವೇನು ಕಮ್ಮಿಯಲ್ಲ ಎನ್ನುವಂತಿದೆ ಹೇಮಂತ್ ಗಾಯನ. ಅವರ ದನಿಯಲ್ಲಿ ಭಟ್ಟರ ಕನ್ನಡದ ಪದಗಳು ಮತ್ತಷ್ಟು ಹೊಳಪು, ಸ್ಪಷ್ಟತೆ ಪಡೆದಿದೆ. ಮೊದಲೇ ಹೇಳಿದಂತೆ ಸಂಗೀತ ಚೆನ್ನಾಗಿದೆ. ನಡುವೆ ಬರುವ 'ಕೌನು ಹೇ ಹುಡುಗಿ' ಎಂಬ ಕೋರಸ್ ನಗೆ ತರಿಸುತ್ತದೆ.

    English summary
    Audio review of Challenging Star Darshan starer Jaggu Dada. V Harikrishna has composed the song for this movie.
    Friday, May 13, 2016, 12:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X