'ರನ್ ಆಂಟನಿ' ಆಡಿಯೋ ವಿಮರ್ಶೆ: ಗಮನ ಸೆಳೆಯುವ ಹಾಡುಗಳು

By ಪ್ರಶಾಂತ್ ಇಗ್ನೇಷಿಯಸ್

ವಿನಯ್ ರಾಜ್ ಕುಮಾರ್ ಅಭಿನಯದ ಎರಡನೆಯ ಚಿತ್ರ 'ರನ್ ಆಂಟನಿ' ಬಿಡುಗಡೆಗೆ ಸಿದ್ಧವಾಗಿದೆ. ಯುವ ನಿರ್ದೇಶಕ ರಘು ಶಾಸ್ತ್ರಿ ಹೊಸ ರೀತಿಯ ಪೋಸ್ಟರ್‌ಗಳಿಂದ ಚಿತ್ರದ ಬಗ್ಗೆ ಒಂದು ರೀತಿಯ ಕುತೂಹಲವನ್ನು ಹುಟ್ಟಿಸಿದ್ದಾರೆ.

ಒಂದು ಮಟ್ಟಿಗೆ ಯಶಸ್ಸು ಪಡೆದಿದ್ದ ವಿನಯ್ ಅಭಿನಯದ ಮೊದಲ 'ಸಿದ್ಧಾರ್ಥ' ಚಿತ್ರದಲ್ಲಿ ಗಮನ ಸೆಳೆಯುವಂಥ ಹಾಡುಗಳಿದ್ದವು.

ರನ್ ಆಂಟನಿ ಚಿತ್ರಕ್ಕೆ ಮಣಿಕಾಂತ್ ಕದ್ರಿಯವರ ಸಂಗೀತವಿದೆ. ಕದ್ರಿಯವರ ಸಂಗೀತ ಎಂದ ಮೇಲೆ ವಿಶೇಷತೆ ಇರಲೇಬೇಕು. (ಅಂದುಕೊಂಡಂಗಿಲ್ಲ ರನ್ ಆಂಟನಿ ಸಿನಿಮಾ)

ರನ್ ಆಂಟನಿ ಚಿತ್ರದ ಆಡಿಯೋ ಬಿಡುಗಡೆಯಾಗಿದೆ, ಹೇಗಿದೆ ಹಾಡುಗಳು ನೋಡೋಣ..

ಜನಕ್ ಜನಕ್
ಹಾಡಿರುವವರು: ಪುನೀತ್ ರಾಜ್‍ ಕುಮಾರ್
ಸಾಹಿತ್ಯ : ನಾಗೇಂದ್ರ ಪ್ರಸಾದ್

ಈ ಗೀತೆ ಒಂದು ರೀತಿಯಲ್ಲಿ Fusion ಸಂಗೀತದ ಧಾಟಿಯಲ್ಲಿ, ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತದೊಡನೆ ಜೋಕಾಲಿ ಆಡುತ್ತಾ ಸಾಗುತ್ತದೆ. ನಾಗೇಂದ್ರ ಪ್ರಸಾದರ ಸಾಹಿತ್ಯವೂ ಹಾಗೆಯೇ ಲವಲವಿಕೆಯಿಂದ ಕೂಡಿದೆ. ಇನ್ನು, ಪುನೀತ್ ಕಂಠ ಹಾಡಿಗೆ ಹೊಂದಿಕೊಂಡಿದೆ.

ಗೀತಯಲ್ಲಿನ ಸುರುಳಿಗಳು, ಏರುಪೇರನ್ನು ಉತ್ತಮವಾಗಿ ನಿಭಾಯಿಸಿರುವ ಪುನೀತ್, ಮುಂದಿನ ದಿನಗಳಲ್ಲಿ ಉತ್ತಮ ಗಾಯಕನಾಗಿ ರೂಪುಗೊಳ್ಳುತ್ತಿರುವ ಸೂಚನೆಗಳನ್ನು ಹಾಡಿನ ಮೂಲಕ ನೀಡಿದ್ದಾರೆ. ಹಿಂದಿ ಸಾಹಿತ್ಯದ ಕಿರಿಕಿರಿಯನ್ನು ಹೊರತುಪಡಿಸಿದರೆ, ನಿಜಕ್ಕೂ ಇದೊಂದು ಉತ್ತಮ ಗೀತೆ.

ಕಣ್ಣ ಕರೆಯು

ಕಣ್ಣ ಕರೆಯು

ಹಾಡಿರುವವರು: ಸೋಹಮ್ ಚಕ್ರಬೊರ್ತಿ, ಯಾಜನ್ ನಿಜರ್
ಸಾಹಿತ್ಯ : ರಘುಶಾಸ್ತ್ರಿ

ಮಣಿಕಾಂತ್ ಕದ್ರಿಯವರ ಸಂಗೀತ, ಈ ಗೀತೆಯಲ್ಲಿ ಹೊನಲಾಗಿ, ಸಣ್ಣ ತೊರೆಯಂತೆ ಓಲಾಡುತ್ತಾ ಸಾಗುತ್ತದೆ. ಕೇಳಿಯೂ ಕೇಳದಂತೆ ಹಿನ್ನಲೆಯಲ್ಲಿ ಬರುವ ಹಾರ್‍ಮೋನಿಯಂ, ಕೊಳಲು, ವೀಣೆಯ ದನಿಗಳು ಹಾಡಿನ ಸೊಬಗನ್ನು ಹೆಚ್ಚಿಸುತ್ತದೆ. ರಘು ಶಾಸ್ತ್ರಿಯವರ ಸಾಹಿತ್ಯ ಇಲ್ಲಿದೆ. ಸೋಹಂ ಚಕ್ರವರ್ತಿ ಹಾಗೂ ಯಾಸಿನ್ ನಿಜಾರ್ ಅವರ ಭಾವಪೂರ್ಣ ಗಾಯನ ಇಷ್ಟವಾಗುತ್ತದೆ. ನಿಧಾನಗತಿಯ ಮಧುರ ಹಾಡುಗಳನ್ನು ಇಷ್ಟಪಡುವವರಿಗೆ ಹೇಳಿ ಮಾಡಿಸಿದ ಗೀತೆಯಿದು.

ಮರುಳ

ಮರುಳ

ಹಾಡಿರುವವರು: ಸೋಹಂ ಚಕ್ರಬೊರ್ತಿ, ಸುಪ್ರಿಯಾ ಲೋಹಿತ್
ಸಾಹಿತ್ಯ : ಜಯಂತ್ ಕಾಯ್ಕಿಣಿ

ಎಂದಿನ ಕನ್ನಡದ ಡ್ಯೂಯಟ್ ಹಾಡುಗಳಿಗಿಂತ ಭಿನ್ನವಾದ ಸಂಗೀತ, ಸ್ಪರ್ಷವಿರುವ ಗೀತೆ. ಕದ್ರಿಯವರ ಸಂಗೀತದ ಶೈಲಿ ಇಲ್ಲಿ ಎದ್ದು ಕಾಣುತ್ತದೆ. ತಾಳ ವಾದ್ಯಗಳ ಬಳಕೆ ಸಹಾ ವಿಶಿಷ್ಟವಾಗಿದೆ. ಜಯಂತ್ ಕಾಯ್ಕಿಣಿಯವರ ಭಾವ ಜಗತ್ತಿನ ಪದ ಸಂಪತ್ತಿನಿಂದ ಹಾಡು ಸಮೃದ್ಧವಾಗಿದೆ. ಸೋಹಂ ಉತ್ತಮವಾಗಿ ಹಾಡಿದ್ದು, ಜೊತೆಯಲ್ಲಿ ಹಾಡಿರುವ ಸುಪ್ರಿಯಾ ಲೋಹಿತ್ ಗಾಯನ ಅಲ್ಲಲ್ಲಿ ಕೊಳಲಿನ ನಾದವನ್ನೇ ಹೋಲುವಷ್ಟು ಮಧುರವಾಗಿದೆ.

ರನ್ ಆಂಟ್ಯನಿ ಮಾಶ್ ಅಪ್

ರನ್ ಆಂಟ್ಯನಿ ಮಾಶ್ ಅಪ್

ಹಾಡಿರುವವರು: ಕೀರ್ತನ್ ಹೊಳ್ಳ, ಅರವಿಂದ್ ಮುಕುಂದನ್, ಕಿಶೋರ್ ಇಳವನ್, ಇಶಾ ಸುಚಿ, ಚೈತ್ರ ನಾನಯ್ಯ

ಚಿತ್ರದ ಎಲ್ಲಾ ಹಾಡುಗಳನ್ನು ಒಂದು ಸುಂದರ ಪಾತ್ರಯಲ್ಲಿ ಹಾಕಿ ಮತ್ತಷ್ಟು ಉಪ್ಪು, ಖಾರ, ಮಸಾಲೆ ಹಾಕಿ ಬೆರಸಿ ಅಕರ್ಷಕವಾದ ಬೇಲ್ ಪುರಿಯಂತೆ ಉಣಬಡಿಸಿರುವ ಈ ಪ್ರಯತ್ನ ನಿಜಕ್ಕೂ ರುಚಿಕರವಾಗಿದೆ. ಚಿತ್ರದ ಹಾಡುಗಳಲ್ಲಿನ ಭಿನ್ನತೆ ಹಾಗೂ ಸಂಗೀತದ ಶ್ರೀಮಂತಿಕೆ ಈ ಹಾಡಿನಲ್ಲಿ ಕಾಣಿಸುತ್ತದೆ. ಯುವ ಮನಸ್ಸುಗಳಿಗೆ ಇಷ್ಟವಾಗಬಹುದಾದ ಒಂದು ಉತ್ತಮ ಮತ್ತು ವಿಭಿನ್ನ ಪ್ರಯತ್ನ.

ರನ್ ರನ್ ರನ್

ರನ್ ರನ್ ರನ್

ಹಾಡಿರುವವರು: ದಿವ್ಯ ಕುಮಾರ್, ವರಿಜಾಶ್ರೀ ವೇಣುಗೋಪಾಲ್ , ಎಂ.ಸಿ.ವಿಕ್ಕಿ
ಸಾಹಿತ್ಯ : ನಾಗೇಂದ್ರ ಪ್ರಸಾದ್

ಮತ್ತೆ ಫ್ಯೂಸನ್ ಸಂಗೀತದ ಪ್ರಯೋಗ ಇಲ್ಲಿದೆ. ದು:ಖದ, ವೇದಾಂತದ ಛಾಯೆಯಿರುವ ಗೀತೆ ಅಬ್ಬರದೊಂದಿಗೆ ಸಾಗುತ್ತದೆ. ನಾಗೇಂದ್ರ ಪ್ರಸಾದರ ಸಾಹಿತ್ಯದ ಕೈ ಚಳಕ ಸಂಗೀತದ ಅಬ್ಬರದ ನಡುವೆಯೂ ಗಮನ ಸೆಳೆಯುತ್ತದೆ. ಸಂಗೀತ ಹಾಗೂ ಸಾಹಿತ್ಯಕ್ಕೆ ಪೂರಕವಾದ ಗಾಯನ , ಗಾಯಕ/ಗಾಯಕಿಯರಿಂದ ಬಂದಿದೆ. ಕೇಳುತ್ತಾ, ಕೇಳುತ್ತಾ ಇಷ್ಟವಾಗಬಹುದು. ಅದರಲ್ಲೂ 'ರನ್ ರನ್ ರನ್' ಹಾಗೂ ಮರಿಗಿಳಿಯು ಸೆರೆಯಾಗಿದೆ' ಎಂಬ ಸಾಲುಗಳಲ್ಲಿ ಗಾಯನ ಚೆನ್ನಾಗಿದೆ.

ಸುಮ್ಮನೆ

ಸುಮ್ಮನೆ

ಹಾಡಿರುವವರು: ಜಾವೇದ್ ಆಲಿ
ಸಾಹಿತ್ಯ : ರಘು ಶಾಸ್ತ್ರಿ

ಇದೊಂದು ಅಪ್ಪಟ ಮಣಿಕಾಂತ್ ಕದ್ರಿ ಹಾಡು ಎನ್ನಲು ಅಡ್ಡಿಯಿಲ್ಲ. ಹಾಡಿನ ಪ್ರತಿ ಸಾಲು, ಹಿನ್ನಲೆ ಸಂಗೀತದಲ್ಲೂ ಕದ್ರಿ ತಮ್ಮದೇ ಆಸ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಜಾವೇದ್ ಆಲಿಯಂಥವರ ಸಮರ್ಥ ಗಾಯಕರು ಇಂಥ ಹಾಡಿಗೆ ಜೊತೆಯಾದಾಗ ಹಾಡು ಮತ್ತೊಂದು ಎತ್ತರಕ್ಕೆ ಏರುವುದನ್ನು ಈ ಗೀತೆಯಲ್ಲಿ ಕಾಣಬಹುದು. ರಘು ಶಾಸ್ತ್ರಿ ಉತ್ತಮವಾದ ಸಾಹಿತ್ಯವನ್ನು ರಚಿಸಿದ್ದಾರೆ.

More from Filmibeat

English summary
Audio review of Vinay Rajkumar starer second movie Run Antony. Manikanth Kadri has composed the song and Raghu Shastry has directed this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X