ಒಂದು ಮಿಲಿಯನ್ ಜನರ ಪ್ರೀತಿ ಪಡೆದ 'ಅಯೋಗ್ಯ'

By Naveen

ಮಂಡ್ಯ ಮಾತ್ರವಲ್ಲ ಎಲ್ಲ ಕಡೆ ಈಗ 'ಏನಮ್ಮಿ ಏನಮ್ಮಿ..' ಎಂದು ಎಲ್ಲರೂ ಹಾಡುವ ಹಾಗೆ ಆಗಿದೆ. 'ಅಯೋಗ್ಯ' ಸಿನಿಮಾದ ಮೊದಲ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಆ ಹಾಡು ಈಗ ಸೂಪರ್ ಹಿಟ್ ಆಗಿದೆ.

ಸತೀಶ್ ನೀನಾಸಂ ನಟನೆಯ 'ಅಯೋಗ್ಯ' ಸಿನಿಮಾದ 'ಏನಮ್ಮಿ ಏನಮ್ಮಿ..' ಹಾಡು ಈಗ ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದಿದೆ. ಒಂದು ವಾರದ ಹಿಂದೆ ಬಿಡುಗಡೆಯಾಗಿದ್ದ ಈ ಹಾಡನ್ನು ಎಲ್ಲರು ಕೇಳಿ ಇಷ್ಟ ಪಟ್ಟಿದ್ದಾರೆ. ಹಾಡಿನ ಅನೇಕ ಡಬ್ ಸ್ಮಾಶ್ ಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

'ಏನಮ್ಮಿ ಏನಮ್ಮಿ..' ಹಾಡನ್ನು ನಟ ಧ್ರುವ ಸರ್ಜಾ ರಿಲೀಸ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ಬಹದ್ದೂರ್ ಚೇತನ್ ಕುಮಾರ್ ಹಾಡಿಗೆ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಈ ಹಾಡು ಕೇಳುವುದು ಸಖತ್ ಮಜಾ ನೀಡುತ್ತಿತ್ತು.

ayogya movie 1st song got 1 million views in youtube

ಅಂದಹಾಗೆ, 'ಅಯೋಗ್ಯ' ಚಿತ್ರದಲ್ಲಿ ಸತೀಶ್ ಜೊತೆಗೆ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದ್ದು, ಮಹೇಶ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಭಾರಿ ಮೊತ್ತಕ್ಕೆ 'ಅಯೋಗ್ಯ'ನ ಹಾಡುಗಳ ಹಕ್ಕನ್ನು ಆನಂದ್ ಆಡಿಯೋಗೆ ಕೊಂಡುಕೊಂಡಿದೆ.

More from Filmibeat

English summary
Actor Sathish Neenasam and Rachita Ram's 'Ayogya' movie 1st song got 1 million views in youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X