'ದಡ್ಡ' ಪ್ರವೀಣನ ಹಾಡನ್ನು ಆದ್ಯ ಬಾಯಲ್ಲಿ ಕೇಳಿ
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು' ಸಿನಿಮಾದ ದಡ್ಡ ಪ್ರವೀಣನ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಈ ಹಾಡು ಕೇಳಿದವರು ಅದೇ ಗುಂಗಿನಲ್ಲಿ ಇರುವಂತೆ ಆಗಿದೆ. ಈಗ ಬೇಬಿ ಡಾಲ್ ಆದ್ಯ ಕೂಡ 'ಪ್ರವೀಣ ಪ್ರವೀಣ..' ಎನ್ನುತ್ತಿದ್ದಾಳೆ.
ಸರಿಗಮಪ ಕಾರ್ಯಕ್ರಮದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿರುವ ಆದ್ಯ ಯಾವುದೇ ಹಾಡು ಕೊಟ್ಟರು ಮುದ್ದಾಗಿ ಹಾಡುತ್ತಾಳೆ. ಈಗ ಆದ್ಯ 'ದಡ್ಡ ಪ್ರವೀಣ' ಹಾಡನ್ನು ಹಾಡಿದ್ದಾಳೆ. ಹಾಡು ಸಖತ್ ಕ್ಯೂಟ್ ಆಗಿದೆ. ಪ್ರವೀಣನ ಹಾಡನ್ನು ಆದ್ಯ ಕಂಠದಲ್ಲಿ ಕೇಳಿ ಎಲ್ಲರೂ ಫಿದಾ ಆಗಿದ್ದಾರೆ.

ಸ್ವತಃ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು' ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಆದ್ಯ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸಹ ಹಾಡನ್ನು ಇಷ್ಟ ಪಟ್ಟಿದ್ದಾರೆ.
ಯೂಟ್ಯೂಬ್ ನಲ್ಲಿ ಪ್ರವೀಣ ಹಾಡನ್ನು 6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ತ್ರಿಲೊಕ್ ತ್ರಿವಿಕ್ರಮ ಹಾಡಿನ ಸಾಹಿತ್ಯ ಬರೆದಿದ್ದಾರೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರೇ ಹಾಡನ್ನು ಹಾಡಿದ್ದಾರೆ.
English summary
Watch video : Baby Doll Adya sings 'Sa Hi Pra Shaale Kasaragodu' kannada movie song.


Click it and Unblock the Notifications