»   » ಬಚ್ಚನ್ ಟುಂಗ್ ಟುಂಗ್ ಆರ್ ಸಿಬಿ ಬ್ಯಾಟಿಂಗ್

ಬಚ್ಚನ್ ಟುಂಗ್ ಟುಂಗ್ ಆರ್ ಸಿಬಿ ಬ್ಯಾಟಿಂಗ್

By: ವಿಜಯರಾಜ್ ಕನ್ನಂತ
Subscribe to Filmibeat Kannada
Bachchan Movie Song Lyrics
ಕಿಚ್ಚ ಸುದೀಪ್ ಅಭಿನಯ ಬಚ್ಚನ್ ಚಿತ್ರಕ್ಕೆ ಹಾಡುಗಳು ಬೇಕಿತ್ತಾ ಎಂಬ ಪ್ರಶ್ನೆಯ ನಡುವೆ ಚಿತ್ರದ ಮೈಸೂರ್ ಪಾಕಲ್ಲಿ... ಟೋಟಲ್ ಆಗಿ... ಎಷ್ಟು ತೂತಿದೆ? ಎಂಬ ಐಟಂ ಸಾಂಗ್ ಚಿತ್ರದಲ್ಲಿ ಸುಮ್ಮನೆ ತುರುಕಿದಂತೆ ಇದ್ದರೂ ಯೋಗರಾಜ್ ಭಟ್ಟರ ಸಾಹಿತ್ಯಕ್ಕಾಗಿ ಮತ್ತೆ ಮತ್ತೆ ಹಾಡು ಕೇಳುವವರು ಇದ್ದಾರೆ. ಈ ಹಾಡಿನ ಧಾಟಿಯಲ್ಲಿ ವಿಜಯ್ ಮಲ್ಯ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡದ ಗೇಯ್ಲ್ , ಕೊಹ್ಲಿ ಮತ್ತು ABD ಮೇಲೆ ಜಾಸ್ತಿ ಅವಲಂಬಿತ ಆಗಿರೋ RCB ಬ್ಯಾಟಿಂಗ್ ಮೇಲೆ ಒಂದು ಅಣಕ...

ಬೆಂಗ್ಳೂರ್ ಬ್ಯಾಟಿಂಗು... ಟೋಟಲ್ ಆಗಿ... ಎಷ್ಟು ಸ್ಟ್ರಾಂಗಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಮೂರು ವಿಕೆಟ್ಟು...ಬಿದ್ರೆ ಸಾಕು... ಟೈಟ್ ಆಗ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಕೆಲವೊಮ್ಮೆ... ಕೊಹ್ಲಿ ಗೇಯ್ಲು... ನಿಂತ್ಕೋ ಬೇಕಾಯ್ತದೆ
ಇಲ್ಲಾ ಅಂದ್ರೆ... ಮ್ಯಾಚನ್ನ... ಕಳ್ಕೋ ಬೇಕಾಯ್ತದೆ
ಬ್ಯಾಟಿಂಗ್ ಸಾಲಿಡ್ದು... ಇಲ್ದೆ ಹೋದ್ರೆ... ಹಿಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಬೆಂಗ್ಳೂರ್ ಬ್ಯಾಟಿಂಗು... ಟೋಟಲ್ ಆಗಿ... ಎಷ್ಟು ಸ್ಟ್ರಾಂಗಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಬ್ಯಾಟಿಂಗ್ ಪಿಚ್ಚಲ್ಲಿ... ಕೊಹ್ಲಿನಾ ಕ್ಲೀನ್ ಬೌಲ್ಡ್
ಮಾಡೋದು ಹೆಂಗೇ... ಹೇಳಿ ಸ್ವಾಮೀ
ಪ್ರತೀ ಬಾಲಿಗೆ... ಸಿಕ್ಸರು ಹೊಡೆದೂ...
ಸುಸ್ತಾಗಲ್ಲಾ ನಮ್ಮ... ಗೇಯ್ಲು ಸ್ವಾಮಿ
ನ...ಮ್ಮಾ ಗ್ರೌಂಡಿನಲ್ಲಿ .... ಎ...ಲ್ಲಾ ವಿನ್ನೇನೇ
ಬ್ಯಾ...ಟಿಂಗಲ್ಲಿ ಡೆಪ್ತು... ಒಂ...ಚೂರ್ ಕಮ್ಮೀನೆ
ಕೊನೇ ಗಳ್ಗೇಲಿ.... ಮ್ಯಾಚು ಟೆನ್ಸ್ ಆಯ್ತದೆ
ಕೊಹ್ಲಿ ಹುಡುಗರಿಗೆ... ಪರೇಶಾನ್ ಆಯ್ತದೆ
ಬರೀ ಮೂವರನ್ನೇ... ನಂಬಿ ಕೊಂಡ್ರೆ... ಹೆಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಬೆಂಗ್ಳೂರ್ ಬ್ಯಾಟಿಂಗು... ಟೋಟಲ್ ಆಗಿ... ಎಷ್ಟು ಸ್ಟ್ರಾಂಗಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಡಿ ವಿಲಿಯರ್ಸು... ಔಟಾದರೆ ಸಾಕು
ಕೈ ಕೊಟ್ಟ ದಾಂಡಿಗರು... ಬರುತಾರೆ
ಆರ್ಸೀಬಿ ಕೊಡೆಯ... ಕೆಳಗಡೆ ಸುಮ್ನೆ
ಕೊಹ್ಲಿ ಟೆನ್ಸ್ ಆಗಿ ಯಾಕೋ... ಉರಿತಾರೆ
ಪಾ....ಯಿಂಟ್ ಟೆಬಲಲ್ಲಿ... ಊ...ಪರ್ ಆದರೂ
ಆ....ರು ಮ್ಯಾಚನ್ನಿನ್ನು.... ಬಾ...ಹರು ಆಡ್ಬೇಕು
ಉಳ್ದವ್ರ ಬ್ಯಾಟಿಂಗು... ಇಂಪ್ರೂ ಆಗಬೇಕಿದೆ
ವಿಲ್ಯರ್ಸು ಕೀಪಿಂಗು... ಮಾಡ ಬೇಕಾಯ್ತದೆ
ನಮ್ಮ ಬ್ಯಾಟಿಂಗು... ಇನ್ನೂ ಸ್ಟ್ರಾಂಗ್... ಆಗ್ ಬೇಕಿದೆ
ಟುಂಗ್ ಟುಂಗ್ ಟುಂಗ್ ಟುಂಗ್
ಬೆಂಗ್ಳೂರ್ ಬ್ಯಾಟಿಂಗು... ಟೋಟಲ್ ಆಗಿ... ಎಷ್ಟು ಸ್ಟ್ರಾಂಗಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

ಮೂಲ ಹಾಡು: ಬಚ್ಚನ್ ಚಿತ್ರ
ರಚನೆ: ಯೋಗರಾಜ್ ಭಟ್

ಮೈಸೂರ್ ಪಾಕಲ್ಲಿ... ಟೋಟಲ್ ಆಗಿ... ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಮಂಡ್ಯಾ ಮಾರ್ಕೆಟ್ಟು... ಚೂಡಿದಾರೂ... ರೇಟ್ ಏನಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಕೆಲವೊಮ್ಮೆ...ಕೆಲವೊಂದು... ತಿಳಕೋ ಬೇಕಾಯ್ತದೆ
ಇಲ್ಲಾ ಅಂದ್ರೆ... ಮರ್ಯಾದೆ... ಕಳ್ಕೋ ಬೇಕಾಯ್ತದೆ
ಜನರಲ್ ನಾಲೆಜ್ಜು... ಇಲ್ದೆ ಹೋದ್ರೆ... ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಮೈಸೂರ್ ಪಾಕಲ್ಲಿ... ಟೋಟಲ್ ಆಗಿ... ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ಇಂಟರ್-ನೆಟ್ಟಲ್ಲಿ... ಇಡ್ಲಿ ನಾ ಡವ್ನ್-ಲೋಡ್...
ಮಾಡೋದು ಹೆಂಗೇ...ಹೇಳಿ ಸ್ವಾಮೀ
ಇಂಥಾ ಪ್ರಶ್ನೇಗೆ... ಉತ್ತರ ಸಿಗದೆ...
ಸತ್ತ್ ಹೋದಾ ನನ್ನಾ... ಹಳೇ ಪ್ರೇಮೀ
ನ...ನ್ನಾ ಪ್ರೀತಿ ಪಾಠಾ.... ಸ್ವ....ಲ್ಪಾ ಹಿಂಗೇನೇ
ಸ್ಕೂ...ಲಿನಲ್ಲೀ ಲಾಸ್ಟು... ಬೆಂ...ಚು... ನಿಮ್ದೇನೇ
ಸಂಜೇ ಟೈಮಲ್ಲಿ.... ಕ್ಲಾಸು ಸ್ಟಾರ್ಟ್ ಆಯ್ತದೆ
ಬರೀ ಹುಡುಗರಿಗೆ... ಪ್ರವೆಸಾ ಇರ್ತದೆ
ಎಜುಕೇಸನ್ನೇ.. ಇಲ್ದೆ ಹೋದ್ರೆ... ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಮೈಸೂರ್ ಪಾಕಲ್ಲಿ ಟೋಟಲ್ ಆಗಿ... ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್
ವಿಂಡೋ ಕರ್ಟನ್ನು... ತೆಗೆದರೆ ಸಾಕು...
ಕೈ ಕೊಟ್ಟ ಹುಡುಗರೇ... ಕಾಣುತಾರೇ
ಕಾಫಿಡೇ ಕೊಡೆಯಾ... ಕೆಳಗಡೆ ಸುಮ್ನೆ
ನಮ್ಗೆ ಫ್ರೆಶ್ ಆಗಿ ಯಾರೋ... ಸಿಗುತಾರೆ
ಮೂ...ರೂ ಘಂಟೆಯಲ್ಲಿ... ಪ್ಯಾ...ರೂ ಆದರೇ...
ಆ...ರೂ ಘಂಟೆಗೆಲ್ಲಾ... ಬೋ...ರೂ ಆಯ್ತದೆ
ಲೇಡೀಸ್ಗೆ ಲವ್ವಲ್ಲಿ... ಟೈಮು... ಬೇಕಾಯ್ತದೆ
ಗಂಡಸ್ರು ಪೇಷೆನ್ಸು... ಕಲೀ ಬೇಕಾಯ್ತದೆ
ತುಂಬಾ ಅರ್ಜೆಂಟು... ಆರೋಗ್ಯಕ್ಕೆ... ರಾಂಗ್ ಆಯ್ತದೆ
ಟುಂಗ್ ಟುಂಗ್ ಟುಂಗ್ ಟುಂಗ್
ಮೈಸೂರ್ ಪಾಕಲ್ಲಿ ಟೋಟಲ್ ಆಗಿ... ಎಷ್ಟು ತೂತಿದೆ?
ಟುಂಗ್ ಟುಂಗ್ ಟುಂಗ್ ಟುಂಗ್

English summary
Bachchan Movie song 'Mysoru paknalli eshtu tootide.. in Cricket satire style by Vijayaraj Kannantha. Royal Challengers Bangalore team is often condemned for depening on Chris Gayle, Kohli, and AB De Villiers. Song lyrics based on RCB's Batting is here
Please Wait while comments are loading...