ಬೆಡ್‌ರೂಂ, ಡೈನಿಂಗ್ ಟೇಬಲ್, ಪೂಲ್ ಎಲ್ಲೆಲ್ಲೂ ವಿಕ್ಕಿ-ತೃಪ್ತಿ ಶೃಂಗಾರ; ಸಖತ್ ವೈರಲ್
ಬಾಲಿವುಡ್ ಸಿನಿಮಾಗಳಲ್ಲಿ ಬಿಂದಾಸ್ ಸಾಂಗ್ಸ್‌ಗೇನು ಲೆಕ್ಕವಿಲ್ಲ. ಆದರೆ ಎಲ್ಲಾ ಸಾಂಗ್ಸ್ ಹಿಟ್ ಆಗಲ್ಲ. ಕೆಲವು ಮಾತ್ರ ಸಖತ್ ವೈರಲ್ ಆಗಿ ಸದ್ದು ಮಾಡುತ್ತವೆ. ಸದ್ಯ 'ಬ್ಯಾಡ್ ನ್ಯೂಸ್' ಚಿತ್ರದ 'ಜಾನಂ' ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
'ಅನಿಮಲ್' ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಮಿಂಚಿದ್ದ ತೃಪ್ತಿ ದಿಮ್ರಿ ಮತ್ತೊಮ್ಮೆ ನೋಡುಗರ ಹುಬ್ಬೇರಿಸಿದ್ದಾರೆ. ಈ ಬಾರಿ ವಿಕ್ಕಿ ಕೌಶಲ್ ಜೊತೆ ಮತ್ತಷ್ಟು ಹಾಟ್ ಅವತಾರದಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಹಸಿಬಿಸಿ ರೊಮ್ಯಾನ್ಸ್ ಭಾರೀ ಸದ್ದು ಮಾಡ್ತಿದೆ. ಕೆಲವೇ ಗಂಟೆಗಳಲ್ಲಿ ಸಾಂಗ್ 50 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿ ಮುನ್ನುಗ್ಗುತ್ತಿದೆ. ಹಸಿಬಿಸಿ ದೃಶ್ಯಗಳು ಫೇಸ್‌ಬುಕ್, ಇನ್‌ಸ್ಟಾ, ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ.

ಆನಂದ್ ತಿವಾರಿ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ 'ಬ್ಯಾಡ್ ನ್ಯೂಸ್'. ಪಂಜಾಬಿ ನಟ ಅಮ್ಮಿ ವಿರ್ಕ್ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವಾರ ಸಿನಿಮಾ ತೆರೆಗೆ ಬರಲಿದೆ. ಆದರೆ ಸದ್ಯ ಬಿಡುಗಡೆ ಆಗಿರುವ ಹಾಟ್ ಸಾಂಗ್ ಸಿನಿಮಾ ಮೇಲಿನ ನಿರೀಕ್ಷೆ ಹಚ್ಚುವಂತೆ ಮಾಡಿದೆ. 'ಬಾಂಬೆ ವೆಲ್ವೆಟ್', 'ಉರಿ', 'ಸರ್ದಾರ್ ಉದ್ಧಾಮ್' ಚಿತ್ರಗಳಲ್ಲಿ ವಿಕ್ಕಿ ಕೌಶಲ್ ನಟನೆ ನೋಡಿ ಮೆಚ್ಚಿದ್ದವರು ಈ ಹಾಡಿನಲ್ಲಿ ಆತನ ಬೋಲ್ಡ್‌ನೆಸ್ ನೋಡಿ ಬೆರಗಾಗಿದ್ದಾರೆ.
ವರ್ಷದ ಸೆಕ್ಸಿಯೆಸ್ಟ್ ಸಾಂಗ್ ಎಂದು ಇದನ್ನು ಕರೆಯಲಾಗುತ್ತಿದೆ. ಅಷ್ಟರಮಟ್ಟಿಗೆ ವಿಕ್ಕಿ-ತೃಪ್ತಿ ಗಾಢ ಶೃಂಗಾರಭರಿತ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೆಡ್‌ರೂಂ, ಸ್ವಿಮ್ಮಿಂಗ್ ಪೂಲ್ ಅಷ್ಟೇ ಯಾಕೆ ಡೈನಿಂಗ್ ಟೇಬಲ್ ಮೇಲೆ ಇಟ್ಟಿರುವ ಊಟದ ಮೇಲೆಯೂ ಹೊರಲಾಡಿ ರೊಮ್ಯಾನ್ಸ್ ಮಾಡಿರುವುದನ್ನು ನೋಡಬಹುದು. ಇನ್ನು ಸ್ಮಿಮ್‌ಸೂಟ್‌ನಲ್ಲಿ ತೃಪ್ತಿ ಬಿಂದಾಸ್ ಆಗಿ ಪೂಲ್‌ಗೆ ಇಳಿದು ನೀರಿನ ಮೇಲೆ ನೀರಿನ ಒಳಗೆ ವಿಕ್ಕಿ ಜೊತೆ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ.
ವಿಶಾಲ್ ಮಿಶ್ರಾ ಟ್ಯೂನ್ ಹಾಕಿ ಸಾಹಿತ್ಯ ಬರೆದು 'ದೆಕೋ ಜಾನಂ' ಎಂದು ಹಾಡಿದ್ದಾರೆ. ರಣ್‌ಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲಿ ತೃಪ್ತಿ ಬೋಲ್ಡ್ ಸೀನ್ಸ್ ಸದ್ದು ಮಾಡಿತ್ತು. ಮತ್ತಷ್ಟು ಬಿಂದಾಸ್ ಆಗಿ ಈ ಬಾರಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಇನ್ನು ನೆಟ್ಟಿಗರು ಸಾಂಗ್ ನೋಡಿ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. "ವಿಕ್ಕಿ ರಾಕ್ಸ್, ಕತ್ರೀನಾ ಶಾಕ್ಸ್" ಎಂದು ಬರೆಯುತ್ತಿದ್ದಾರೆ.

3 ವರ್ಷಗಳ ಹಿಂದೆ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಪ್ರೀತಿಸಿ ಮದುವೆ ಆಗಿದ್ದರು. ಇದೀಗ 'ಬ್ಯಾಡ್ ನ್ಯೂಸ್' ಚಿತ್ರದ 'ಜಾನಂ' ಸಾಂಗ್ ನೋಡಿದವರು ಕತ್ರೀನಾ ಏನಮ್ಮಾ ಇದೆಲ್ಲಾ? ಎಂದು ಕೇಳುತ್ತಿದ್ದಾರೆ. ಒಟ್ಟಾರೆ ಸಾಂಗ್ ಸಖತ್ ವೈರಲ್ ಆಗಿ ಸದ್ದು ಮಾಡ್ತಿದೆ. ಕೆಲವರಂತೂ ವಿಕ್ಕಿನ ಈ ಅವತಾರದಲ್ಲಿ ನಾವು ಊಹಿಸಿಕೊಂಡಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
'ಅನಿಮಲ್' ಬಳಿಕ ಮೂರ್ನಾಲ್ಕು ಸಿನಿಮಾಗಳಲ್ಲಿ ತೃಪ್ತಿ ಬ್ಯುಸಿಯಾಗಿದ್ದಾರೆ. ' ನ್ಯೂಸ್' ಬಳಿಕ 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ', 'ಭೂಲ್ ಬುಲಯ್ಯಾ-3' ಹಾಗೂ 'ಧಡಕ್-2' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರೀದೇವಿ ನಟಿಸಿದ 'ಮಾಮ್' ಚಿತ್ರದಲ್ಲಿ ಮೊದಲಿಗೆ ತೃಪ್ತಿ ಬಣ್ಣ ಹಚ್ಚಿದ್ದರು.


Click it and Unblock the Notifications











