»   » ಬಹುಪರಾಕ್ ಹಾಡುಗಳ 'ವಿಡಿಯೋ' ಪರೇಡ್ ನೋಡಿ

ಬಹುಪರಾಕ್ ಹಾಡುಗಳ 'ವಿಡಿಯೋ' ಪರೇಡ್ ನೋಡಿ

Posted By:
Subscribe to Filmibeat Kannada

ಸಿಂಪಲ್ ಸುನಿ ಅವರ ನಿರ್ದೇಶನದ ಬಹುಪರಾಕ್ ಚಿತ್ರಗಳ ಹಾಡುಗಳು ಆನ್ ಲೈನ್ ನಲ್ಲಿ ಲಭ್ಯವಿದ್ದು, ಬಹುಪರಾಕ್ ಹಾಡುಗಳು ಹಾಗೂ ಸಾಹಿತ್ಯ ಸಿನಿರಸಿಕರ ಮನಸೂರೆಗೊಳ್ಳುತ್ತಿದೆ. ಅಬ್ ಕೀ ಬಾರ್, ಬಹುಪರಾಕ್ ದರ್ಬಾರ್‌ ಎಂಬ ಅಡಿ ಬರಹವುಳ್ಳ ಬಹುಪರಾಕ್ ಚಿತ್ರಕ್ಕೆ ಸಿಂಪಾಲ್ಲಾಗೊಂದ್ ಲವ್ ಸ್ಟೋರಿಗೆ ಸಂಗೀತ ನೀಡಿದ್ದ ಭರತ್ ಬಿ.ಜೆ ಅವರೇ ರಾಗ ಸಂಯೋಜಿಸಿದ್ದಾರೆ.

ಬಹುಪರಾಕ್ ಚಿತ್ರದಲ್ಲಿ ಎಲ್ಲಾ ಹಾಡುಗಳು ಸಾಂದರ್ಭಿಕ ಗೀತೆಗಳಾಗಿದ್ದು, ಕಥೆಯ ಓಟಕ್ಕೆ ತಕ್ಕಂತೆ ಹೆಣೆಯಲಾಗಿದೆ. ಹಾಡಿನ ದೃಶ್ಯಾವಳಿ ಕೂಡಾ ಚಿತ್ರಕಥೆಗೆ ಪೂರಕವಾಗಿ ಮೂಡಿ ಬಂದಿದೆಯಂತೆ. ಪಿ. ಲಂಕೇಶ್ ಅವರ ಗೆದ್ದೇ ಗೆಲ್ತಾನಂತ ಮೊದ್ಲೇ ಹೇಳಿದ್ದೆ.. ಹಾಡನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು.[ಬಹುಪರಾಕ್ ಗೀತ ಸಾಹಿತ್ಯ ಕೊಂಡಿ]

ಶಿಶುನಾಳ ಷರೀಫರ 'ನಾನಾರೆಂಬುದು ನಾನಲ್ಲ..' ಗೀತೆಗೆ ರಾಗ ಸಂಯೋಜನೆ ಮಾಡಿದ್ದು ನನ್ನ ಪುಣ್ಯ ಎಂದು ಸಂಗೀತ ಸಂಯೋಜನೆ ತಂಡ, ಹಾಡುಗಾರರಿಗೆ ಸಂಗೀತಗಾರ ಭರತ್ ಬಿ.ಜೆ ಥ್ಯಾಂಕ್ಸ್ ಹೇಳಿದ್ದಾರೆ.

ಮನಸ್, ಮಣಿ, ಮೌನಿ ಎಂಬ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀನಗರ ಕಿಟ್ಟಿಗೆ ಮೇಘನಾ ರಾಜ್ ನಾಯಕಿಯಾಗಿದ್ದಾರೆ. ಚಿತ್ರದ ವಿಡಿಯೋ ಸಾಂಗ್ಸ್, ಜ್ಯೂಕ್ ಬಾಕ್ಸ್ ಲಿಂಕ್ ನಿಮ್ಮ ಮುಂದಿದೆ.

Post by Bharath BJ.

ನಾನಾರೆಂಬುದು ನಾನಲ್ಲ ಆಲ್ಬಂನ ವಿಶೇಷ

ಲಂಕೇಶರ 'ಗೆದ್ದೇ ಗೆಲ್ತಾನಂತ' ಹಾಡು ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಇದರ ಜೊತೆಗೆ ಶಿಶುನಾಳ ಶರೀಫರ 'ನಾನಾರೆಂಬುದು ನಾನಲ್ಲ' ಹಾಡು ಬಳಕೆಯಾಗಿರುವುದು ಬಹುಪರಾಕ್‌ನ ವಿಶೇಷ.ಸೂರ್ಯನಾ ಬೆಂಕಿಯ ಹಾಡನ್ನು ವಿಘ್ನೇಶ್ವರ ವಿಶ್ವ ಬರೆದಿದ್ದರೆ ಉಳಿದ ಎಲ್ಲ ಹಾಡುಗಳನ್ನೂ ನಿರ್ದೇಶಕ ಸುನಿ ಬರೆದಿದ್ದಾರೆ.

ಉಸಿರಾಗುವೆ...ಉಸಿರಾಗುವೆ ವಿಡಿಯೋ

ಹಾಡಿದವರು: ರಾಜೇಶ್ ಕೃಷ್ಣನ್ ಹಾಗೂ ಅನುರಾಧ ಭಟ್ ಗೀತ
ಸಾಹಿತ್ಯ : ಸುನಿ
ಸಂಗೀತ: ಬಿ.ಜೆ ಭರತ್
ಇರುವೆ ಗೂಡಿಗೆ ಸಕ್ಕರೆ ಹಾಕಲು ಇನಿಯ ಬರುತ್ತಿಲ್ಲ
ಕತ್ತಲ ರಾತ್ರಿಯ ಮರೆಸೋ ಚಂದಿರ ನಿದಿರೆ ಮುಗಿಸಿಲ್ಲ
ಜನುಮದಿನಕೆ ಸಾವಿನ ಭಾವನೆ ಯಾರೂ ಉಸಿರಾಗಿಲ್ಲ
ಉಸಿರಾಗುವೆ...ಉಸಿರಾಗುವೆ

ಬಜಾರು ಭಾರಿ ಜೋರೈತೆ ವಿಡಿಯೋ

ಸಾಹಿತ್ಯ: ಸುನಿ
ಗಾಯಕಿ: ಸ್ಪರ್ಶ ಆರ್.ಕೆ
ಬಜಾರು ಭಾರಿ ಜೋರೈತೆ..ಸ್ಮಶಾನದಲ್ಲಿ ನಡೆಯುವ ಒಂದು ಐಟಂ ಸಾಂಗ್, ಗಾಳಿಪಟ ಖ್ಯಾತಿಯ ಭಾವನಾರಾವ್ ಈ ಹಾಡಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಗೆದ್ದೇ ಗೆಲ್ತಾನಂತ ಮೊದ್ಲೇ ಹೇಳಿದ್ದೆ ಹಾಡು

ಪಿ. ಲಂಕೇಶ್ ಅವರ ಸಾಹಿತ್ಯ ಹೊಂದಿರುವ ಭರತ್ ಬಿ.ಜೆ ರಾಗ ಸಂಯೋಜನೆಯ ಲೂಸಿಯಾ ಖ್ಯಾತಿಯ ನವೀನ್ ಸಜ್ಜು ಹಾಡಿರುವ 'ಗೆದ್ದೇ ಗೆಲ್ತಾನಂತ ಮೊದ್ಲೇ ಹೇಳಿದ್ದೆ.. ಹಾಡಿನಲ್ಲಿ ಮೌನಿ ಕ್ಯಾರೆಕ್ಟರ್ ನಲ್ಲಿ ಶ್ರೀನಗರ ಕಿಟ್ಟಿ

ಸಿಂಪಲ್ ಪ್ರೀತಿ ಅಲಕ್ ಪುಲಕ್ ಹಾಡು

ಸಿಂಪಲ್ ಪ್ರೀತಿ ಅಲಕ್ ಪುಲಕ್ ಹಾಡನ್ನು ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಹಾಡಿರುವುದು ವಿಶೇಷ.

ಬಹುಪರಾಕ್ ಹಾಡುಗಳ ಜ್ಯೂಕ್ ಬ್ಯಾಕ್ಸ್

ಆನ್ ಲೈನ್ ನಲ್ಲಿ ಹಾಡುಗಳನ್ನು ಕದ್ದು ಡೌನ್ ಲೋಡ್ ಮಾಡುವ ಈ ಕಾಲದಲ್ಲಿ ಬಹುಪರಾಕ್ ಹಾಡುಗಳ ಜ್ಯೂಕ್ ಬ್ಯಾಕ್ಸ್ ಮೂಲಕ ನೀಡಿ ಹಾಡುಗಳ ರುಚಿ ಹತ್ತಿಸಿ ಅಸಲಿ ಸಿಡಿ ಪಡೆದು ಹಾಡುಗಳನ್ನು ಕೇಳುವಂತೆ ಮಾಡುವ ಪ್ರಯತ್ನವನ್ನು ಸುನಿ ಹಾಗೂ ಆನಂದ್ ಆಡಿಯೋ ತಂಡ ಮಾಡಿದೆ.

ಬಹುಪರಾಕ್ ಚಿತ್ರದ ಫಸ್ಟ್ ಲುಕ್

ಬಹು ಸಂಭಾಷಣೆ ಭರಿತ ಬಹುಪರಾಕ್ ಚಿತ್ರದ ಫಸ್ಟ್ ಲುಕ್
ಛಾಯಾಗ್ರಾಹಕ: ಮನೋಹರ್ ಜೋಶಿ
ಸಂಕಲನ: ವಿಎಫ್ ಎಕ್ಸ್: ಸಚಿನ್

English summary
Bahuparaak Kannada movie starring Srinagar Kitty and Meghna Raj directed by Suni set to release on July.28. Bahuparaak Song Videos, Juke Box already making a buzz on Youtube.
Please Wait while comments are loading...