ಮಹಿಳೆಯರಿಗೆ ಇಂಡಿಪಾಪ್ ಗಾಯಕ ನಿಖಿಲ್ ಗೀತೆ ಕೊಡುಗೆ
ಭಾರತೀಯ ಇಂಡಿಪಾಪ್ ಸಂಗೀತದ ಪ್ರಮುಖ ತಾರೆಗಳಲ್ಲಿ ಒಬ್ಬರಾದ, ಮಿಸ್ಟಿಕ್, ದ ಮ್ಯಾಜಿಕ್ ಆಫ್ ಲವ್ ಖ್ಯಾತಿಯ, ನಿಖಿಲ್ ಕುಮಾರ್ ಮತ್ತೊಮ್ಮೆ ರಾಕ್ ಸ್ಟೇಜ್ ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಭಾರತೀಯ ಚಲನಚಿತ್ರರಂಗದ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಕಟ್ಟಾ ಅಭಿಮಾನಿಯಾದ ನಿಖಿಲ್ ತಮ್ಮ ಏಂಜಲ್ ಐಸ್... ಮಿಲ್ ತೋ ಕಭಿ ಅನ್ನು ಮಾರ್ಚ್ 8 ರಂದು ಬಿಡುಗಡೆ ಮಾಡುವ ಮೂಲಕ ಇಂಡಿಪಾಪ್ ರಂಗದಲ್ಲಿ ಕಮಾಲ್ ಮಾಡಲು ಸನ್ನದ್ಧರಾಗಿದ್ದಾರೆ.
ಮಹಿಳಾ ಕೇಂದ್ರೀಕೃತ ಏಂಜಲ್ ಐಸ್...ಮಿಲ್ ತೋ ಕಭಿ ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಯುಬಿ ಸಿಟಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುತ್ತಿದ್ದು, ಅದನ್ನು ಮಹಿಳೆಯರಿಗಾಗಿ ಅರ್ಪಿಸುತ್ತಿದ್ದಾರೆ.
ಏಂಜಲ್ ಐಸ್...ಮಿಲ್ ತೋ ಕಭಿ ಯುವಜನರ ನಾಡಿಮಿಡಿತವನ್ನು ಗ್ರಹಿಸಿ ರಚಿಸಿರುವ ಮಹಿಳಾಪ್ರಧಾನ ಪಾಪ್ /ಫನ್ ರಾಕ್ ಟ್ರ್ಯಾಕ್ ಆಗಿದ್ದು, ಸ್ವತಃ ನಿಖಿಲ್ ಕುಮಾರ್ ಗೀತ ರಚಿಸಿದ್ದಾರೆ. ಹಿಂದಿ ಮತ್ತು ಇಂಗ್ಲೀಷ್ ಪದಪುಂಜಗಳನ್ನು ಹೊಂದಿರುವ ಈ ಟ್ರ್ಯಾಕ್ ನ ಸಂಗೀತ ನಿರ್ದೇಶನ ಸಹ ನಿಖಿಲ್ ಅವರದ್ದೇ. ಏಂಜಲ್ ಐಸ್...ಮಿಲ್ ತೋ ಕಭಿ ಸದಾ ಗುನುಗುನಿಸುವ ಮತ್ತು ಪದೇ ಪದೇ ಕೇಳಬೇಕೆನಿಸಿಕೊಳ್ಳುವ ಗುಣ ಹೊಂದಿದೆ.

ರೇನಿಂಗ್ ಟಿಯರ್ಸ್ ಮತ್ತು ದಿಲ್ ಕ ಟೂಟ್ನಾ ಗಳನ್ನು ಹಾಡಿರುವ ಬ್ರಿಟನ್ನಿನ ಖ್ಯಾತ ಗಾಯಕಿ ಮಿಲ್ಲೀ ಮರ್ಸಿಡಿಸ್ ಏಂಜಲ್ ಅಯ್ಸ್...ಮಿಲ್ ತೋ ಕಭಿ ಅನ್ನು ಹಾಡಿದ್ದಾರೆ. ಮ್ಯೂಸಿಕ್ ಎಲಿಮೆಂಟ್ಸ್ ಖ್ಯಾತ ಗಿಟಾರಿಸ್ಟ್ ಸೆಡ್ರಿಕ್ ಡಿಸ ಅವರದ್ದು. ನಿಖಿಲ್ ಅವರ ಹಿನ್ನೆಲೆ ಹಾಗೂ ಮಹಿಳೆಯರ ಬಗ್ಗೆ ಅವರ ಸಾಮಾಜಿಕ ಕಳಕಳಿ ಬಗ್ಗೆ ಮುಂದೆ ಓದಿ...


Click it and Unblock the Notifications











