ಹೈ ಕ್ವಾಲಿಟಿಯಲ್ಲಿ 'ಬಸಣ್ಣಿ' ವಿಡಿಯೋ ಹಾಡು ನೋಡಿ
'ಯಜಮಾನ' ಸಿನಿಮಾದ ಸೂಪರ್ ಹಿಟ್ ಹಾಡು ಬಸಣ್ಣಿ ಬಾ' ವಿಡಿಯೋ ಇಂದು ಬಿಡುಗಡೆಯಾಗಿದೆ. ಯೂ ಟ್ಯೂಬ್ ನಲ್ಲಿ ಬಸಣ್ಣಿ ವೈಯಾರವನ್ನು ಎಲ್ಲರೂ ಕಣ್ತುಂಬಿಕೊಳ್ಳುತ್ತಿದ್ದಾರೆ.
ಈ ವರ್ಷದ ಸೂಪರ್ ಹಿಟ್ ಹಾಡು ಇದಾಗಿದ್ದು, ಎಲ್ಲರನ್ನು ಹಾಡು ಕುಣಿಸಿದೆ. ಬರೀ ಚಿತ್ರಮಂದಿರದಲ್ಲಿ ಹಾಡಿನ ವಿಡಿಯೋವನ್ನು ನೋಡಿದ್ದ ಅಭಿಮಾನಿಗಳು ಈಗ ಮತ್ತೆ ಮತ್ತೆ ಹಾಡನ್ನು ನೋಡಬಹುದಾಗಿದೆ.
ಡಿ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ವಿಡಿಯೋ ಹಾಡು ಇಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ. 4K ನಲ್ಲಿ ವಿಡಿಯೋ ಹಾಡನ್ನು ರಿಲೀಸ್ ಮಾಡಿದ್ದು, ಹಾಡಿನ ಕ್ವಾಲಿಟಿ ಅದ್ಭುತವಾಗಿದೆ.

ಅಂದಹಾಗೆ, 'ಬಸಣ್ಣಿ ಬಾ..' ಹಾಡನ್ನು ಯೋಗರಾಜ್ ಭಟ್ ಬರೆದಿದ್ದು, ಹರಿಕೃಷ್ಣ ಸಂಗೀತ ನೀಡಿದ್ದರು. ಯುವ ಗಾಯಕಿ ವರ್ಷ ಬಿ ಸುರೇಶ್ ಧ್ವನಿ ಹಾಡಿನ ಹೈಲೈಟ್ ಆಗಿತ್ತು.
ಉಳಿದಂತೆ, ದರ್ಶನ್ ಹಾಗೂ ತಾನ್ಯ ಹೂಪ್ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ್ದರು. ಚಿತ್ರ ನೋಡುವಾಗ ಈ ಹಾಡು ಅಗತ್ಯ ಇತ್ತೆ ಅಂತ ಅನಿಸಿದರೂ, ಹಾಡನ್ನು ಮಾತ್ರ ಎಲ್ಲರೂ ಏಂಜಾಯ್ ಮಾಡಿದ್ದರು.


Click it and Unblock the Notifications











