For Quick Alerts
  ALLOW NOTIFICATIONS  
  For Daily Alerts

  100 ಮಿಲಿಯನ್ ಕಂಡ ಬೆಳಗೆದ್ದು ಹಾಡು: ರಶ್ಮಿಕಾ ಮಂದಣ್ಣ ಟ್ವೀಟ್

  |

  ರಶ್ಮಿಕಾ ಮಂದಣ್ಣ ನಟಿಸಿದ್ದ ಚೊಚ್ಚಲ ಸಿನಿಮಾ 'ಕಿರಿಕ್ ಪಾರ್ಟಿ' ತೆರೆಕಂಡು 4 ವರ್ಷ ಕಳೆದಿದೆ. ರಕ್ಷಿತ್ ಶೆಟ್ಟಿ ನಾಯಕರಾಗಿದ್ದ ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದರು.

  ಇಂದು ಸೌತ್ ಇಂಡಿಯಾದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾಗೆ ಲೈಫ್ ಕೊಟ್ಟಿದ್ದು ಇದೇ ಚಿತ್ರ. ಈ ಸಿನಿಮಾ 'ಬೆಳಗೆದ್ದು ಯಾರ ಮುಖವಾ ನಾನು ನೋಡಲಿ......' ಎಂಬ ಹಾಡು ಯ್ಯೂಟ್ಯೂಬ್‌ನಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿದೆ.

  100 ಮಿಲಿಯನ್ ವೀಕ್ಷಣೆ ಕಂಡ ಕಿರಿಕ್ ಪಾರ್ಟಿಯ 'ಬೆಳಗೆದ್ದು..' ಹಾಡು: ಧನ್ಯವಾದ ತಿಳಿಸಿದ ರಕ್ಷಿತ್ ಶೆಟ್ಟಿ100 ಮಿಲಿಯನ್ ವೀಕ್ಷಣೆ ಕಂಡ ಕಿರಿಕ್ ಪಾರ್ಟಿಯ 'ಬೆಳಗೆದ್ದು..' ಹಾಡು: ಧನ್ಯವಾದ ತಿಳಿಸಿದ ರಕ್ಷಿತ್ ಶೆಟ್ಟಿ

  ಈ ಕುರಿತು ರಶ್ಮಿಕಾ ಮಂದಣ್ಣ ಟ್ವಿಟ್ಟರ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ''ಬೆಳಗೆದ್ದು...ನನ್ನ ಮೊದಲ ಹಾಡು. ನೂರು ಮಿಲಿಯನ್ ದಾಟಿದೆ. ಈ ಹಾಡು ನನಗಾಗಿ ಮೇಕಿಂಗ್ ಮಾಡಿದ್ದು ನೆನಪಾಗುತ್ತಿದೆ. ಆ ದೃಶ್ಯಗಳು ಕಣ್ಣ ಮುಂದಿದೆ. ನನ್ನಲ್ಲಿ ನಾನು ಸಾನ್ವಿಯನ್ನು ಕಂಡೆ. ಅಹಾ ಎಂತಹ ಜರ್ನಿ'' ಎಂದು ಟ್ವೀಟ್ ಮಾಡಿದ್ದಾರೆ.

  ಈ ಟ್ವೀಟ್‌ನಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸಂಯುಕ್ತಾ ಹೆಗಡೆ, ಅಜನೀಶ್ ಲೋಕನಾಥ್, ಪರಂವಾ ಸ್ಟುಡಿಯೋಸ್ ಟ್ವಿಟ್ಟರ್‌ ಹ್ಯಾಂಡಲ್‌ಗಳಿಗೆ ಪೋಸ್ಟ್ ಮಾಡಿದ್ದಾರೆ.

  ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಧನಂಜಯ್ ರಂಜನ್ ಸಾಹಿತ್ಯ ರಚಿಸಿದ್ದಾರೆ.

  ಇನ್ನೂ ಕನ್ನಡದಲ್ಲಿ 100 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದ ಹಾಡಿದ ಸಾಲಿನಲ್ಲಿ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ 'ಖರಾಬು..' ಸಾಂಗ್ ಮೊದಲ ಸ್ಥಾನದಲ್ಲಿದೆ. 180 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಶರಣ್ ಮತ್ತು ಆಶಿಕಾ ರಂಗನಾಥ್ ನಟನೆಯ 'ಚುಟು ಚುಟು..' ಸಾಂಗ್ ಎರಡನೇ ಸ್ಥಾನದಲ್ಲಿದೆ.

  English summary
  Rakshith Shetty and Rashmika Mandanna starrer Kirik party song crossed 100 million views on youtube. Rashmika thank to her fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X