twitter
    For Quick Alerts
    ALLOW NOTIFICATIONS  
    For Daily Alerts

    ಈ ವಯಸ್ಸಿನಲ್ಲಿ ಪ್ರಶಸ್ತಿ ನೀಡಿ ಅವಮಾನಿಸಬೇಡಿ: ಪದ್ಮ ಪ್ರಶಸ್ತಿ ನಿರಾಕರಿಸಿದ ಹಿರಿಯ ಗಾಯಕಿ

    |

    ನಿನ್ನೆಯಷ್ಟೆ (ಜನವರಿ 25) ಕೇಂದ್ರ ಸರ್ಕಾರವು ನಾಗರೀಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಘೋಷಿಸಿದೆ. ಹಲವು ರಾಜಕಾರಣಿಗಳು, ಕಲಾವಿದರು, ವಿಜ್ಞಾನಿಗಳು, ಸಮಾಜ ಸೇವಕರು, ಗಣಿತಜ್ಞರು ಇತರೆ ರಂಗದ ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ.

    ಕಲಾ ವಿಭಾಗದಲ್ಲಿ 90 ವರ್ಷ ವಯಸ್ಸಿನ ಪಶ್ಚಿಮ ಬಂಗಾಳದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ ಗಾಯಕಿಯು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಆ ಮೂಲಕ ಈ ವರ್ಷ ಪದ್ಮ ಪ್ರಶಸ್ತಿ ನಿರಾಕರಿಸಿದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ ಸಂಧ್ಯಾ ಮುಖರ್ಜಿ.

    ''ಈ ವಯಸ್ಸಿನಲ್ಲಿ ಪದ್ಮ ಪ್ರಶಸ್ತಿ ನೀಡಿ ನನ್ನನ್ನು ಅವಮಾನಿಸಬೇಡಿ. ಯಾರಿಗಾದರೂ ಅರ್ಹ ಯುವ ಗಾಯಕರಿಗೆ ಆ ಪ್ರಶಸ್ತಿ ನೀಡಿ ಅವರನ್ನು ಪ್ರೋತ್ಸಾಹಿಸಿ'' ಎಂದು ದೆಹಲಿಯ ಅಧಿಕಾರಿಗೆ ಸಂಧ್ಯಾ ಮುಖರ್ಜಿ ಹೇಳಿದ್ದಾರೆ. ಈ ವಿಷಯವನ್ನು ಸಂಧ್ಯಾ ಅವರ ಪುತ್ರಿ ಸೌಮಿ ಸೇನ್‌ಗುಪ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    Bengali Singer Sandhya Mukherjee Refuses To Take Padma Sri Award: Felt Insulting
    ''ಇಷ್ಟು ವರ್ಷದ ಸಾಧನೆ ಮಾಡಿದ ದಂತಕತೆ ಎನಿಸಿಕೊಂಡಿರುವ ಅವರಿಗೆ ಈಗ ಪ್ರಶಸ್ತಿ ನೀಡಿರುವುದು ಅರ್ಥಹೀನ'' ಎಂದು ಸಂಧ್ಯಾ ಮುಖರ್ಜಿ ಪುತ್ರಿ ಸೌಮಿ ಸೇನ್‌ಗುಪ್ತ ಹೇಳಿದ್ದಾರೆ.

    'ಸಂಧ್ಯಾ ಮುಖರ್ಜಿಯವರು ಪದ್ಮಶ್ರೀ ಪ್ರಶಸ್ತಿ ಬೇಡವೆಂದಿರುವ ಹಿಂದೆ ಯಾವುದೇ ರಾಜಕೀಯ ಇಲ್ಲ. ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿ ಬೇಡ ಎಂದಿರುವುದಕ್ಕೆ ಯಾವುದೇ ರಾಜಕೀಯವನ್ನು ಬೆರೆಸಬೇಡಿ'' ಎಂದು ಸೌಮಿ ಗುಪ್ತ ಮನವಿ ಮಾಡಿದ್ದಾರೆ.

    ಸಂಧ್ಯಾ ಮುಖರ್ಜಿ 8 ದಶಕಗಳಿಂದಲೂ ಗಾಯಕಿಯಾಗಿ, ಹಿನ್ನೆಲೆ ಗಾಯಕಿಯಾಗಿ ಗುರಿತಿಸಿಕೊಂಡಿದ್ದಾರೆ. ಸಾವಿರಾರು ಬಂಗಾಳಿ ಸಿನಿಮಾ ಹಾಡುಗಳಿಗೆ ಸಂಧ್ಯಾ ಮುಖರ್ಜಿ ದನಿಯಾಗಿದ್ದಾರೆ. ಹೇಮಂತ್ ಮುಖರ್ಜಿ ಅವರೊಟ್ಟಿಗಿನ ಅವರ ಯುಗಳ ಗೀತೆಗಳು ಈಗಲೂ ಜನಪ್ರಿಯ. ಬಂಗಾಳಿ ಭಾಷೆಯಲ್ಲಿ ಮಾತ್ರವೇ ಅಲ್ಲದೆ ಭಾರತದ ಇತರ ಭಾಷೆಗಳ ಸಿನಿಮಾಗಳಲ್ಲಿಯೂ ಹಾಡಿದ್ದಾರೆ ಸಂಧ್ಯಾ ಮುಖರ್ಜಿ.

    ಸಂಧ್ಯಾ ಮುಖರ್ಜಿ ಮಾತ್ರವೇ ಅಲ್ಲದೆ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ ಭಟ್ಟಾಚಾರ್ಯ ಅವರೂ ಸಹ ಪದ್ಮ ಪ್ರಶಸ್ತಿಯನ್ನು ಬೇಡವೆಂದಿದ್ದಾರೆ. ನನ್ನ ಹೆಸರನ್ನು ಪ್ರಶಸ್ತಿಗೆ ಕಳುಹಿಸಿಕೊಟ್ಟಿರುವ ವಿಚಾರ ನನಗೆ ಗೊತ್ತಿರಲಿಲ್ಲ. ಈಗ ಬಂದಿರುವ ಪ್ರಶಸ್ತಿಯೂ ನನಗೆ ಬೇಡ ಎಂದು ಅವರು ಹೇಳಿದ್ದಾರೆ. ಆ ಮೂಲಕ ಪಶ್ಚಿಮ ಬಂಗಾಳದ ಇಬ್ಬರು ಪದ್ಮ ಪ್ರಶಸ್ತಿಗಳನ್ನು ತಿರಸ್ಕರಿಸಿದಂತಾಗಿದೆ.

    ಕಲಾ ವಿಭಾಗದಲ್ಲಿ ಹಿನ್ನೆಲೆ ಗಾಯಕ ಸೋನು ನಿಗಮ್, ತಮಿಳು ಮೂಲದ ನಟಿ ಸಾವ್ಕಾರ್ ಜಾನಕಿ, ಹಿರಿಯ ಸಿನಿಮಾ ನಟ ವಿಕ್ಟರ್ ಬ್ಯಾನರ್ಜಿ, ಸಿನಿಮಾ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ, ಕನ್ನಡದ ಸಾಹಿತಿ, ಸಿನಿಮಾಗಳಿಗೂ ಕೆಲವು ಹಾಡುಗಳನ್ನು ಬರೆದಿರುವ ಕವಿ ಸಿದ್ಧಲಿಂಗಯ್ಯ (ಮರಣೋತ್ತರ) ಸೇರಿ ಇನ್ನೂ ಅನೇಕರಿಗೆ ಪದ್ಮ ಪ್ರಶಸ್ತಿ ನೀಡಲಾಗಿದೆ.

    English summary
    West Bengal singer Sandhya Mukherjee refuses to take Padma Sri award. She said its insulting to taking award at this age.
    Wednesday, January 26, 2022, 22:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X