Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
26 ವರ್ಷದ ನಂತರ 'ಭಂಡ'ನಾದ ನವರಸ ನಾಯಕ
Recommended Video
ಕನ್ನಡ ಸಿನಿಮಾರಂಗದಲ್ಲಿ ಕೆಲವು ಸಿನಿಮಾಗಳನ್ನು ರೀಪ್ಲೇಸ್ ಮಾಡಲು ಸಾಧ್ಯವೇ ಇಲ್ಲ. ಅವು ಮಾಸ್ಟರ್ ಪೀಸ್ ಲೀಸ್ಟ್ ಸೇರಿಕೊಂಡಿವೆ. ಆದ್ರೆ ಈಗಿನ ಯುವ ಜನಾಂಗಕ್ಕೆ ಅಂತಹ ಸಿನಿಮಾಗಳನ್ನು ಮತ್ತೆ ನೋಡುವ ಅವಕಾಶ ಎಂದರೆ ಹಳೆ ಚಿತ್ರಗಳಿಗೆ ಈಗಿನ ತಂತ್ರಜ್ಙಾನ ಅಳವಡಿಸಿ ಮತ್ತೆ ಬಿಡುಗಡೆ ಮಾಡುವುದು.
ಈಗಾಗಲೇ ಇಂತಹ ಪ್ರಯತ್ನಗಳು ನಡೆದಿದ್ದು ಸಾಕಷ್ಟು ಚಿತ್ರಗಳು ಹೊಸ ರೂಪದಲ್ಲಿ ತೆರೆಕಂಡಿವೆ. ಇನ್ನು ಹಾಡುಗಳ ಸಾಲುಗಳನ್ನು ಅನೇಕ ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ನವರಸನಾಯಕನ ವೃತ್ತಿ ಜೀವನದಲ್ಲಿ ಸಖತ್ ಸೌಂಡ್ ಮಾಡಿದ್ದ ಹಾಡುಗಳಲ್ಲಿ ಒಂದಾದ, ಅಂತಿಂಥ ಗಂಡು ನಾನಲ್ಲಾ.. ಹಾಡನ್ನು ಮತ್ತೆ ಕೇಳುವ ಅವಕಾಶ ಸಿಗುತ್ತಿದೆ.
26ವರ್ಷದ ನಂತರ 'ಭಂಡ ನನ್ನ ಗಂಡ' ಚಿತ್ರದ ಅಂತಿಂಥ ಗಂಡು ನಾನಲ್ಲಾ.. ಹಾಡು 5.1 ಅವಿಷ್ಕಾರದಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಂಗೀತ ನಿರ್ದೇಶಕ ವಿನಯ್ ಚಂದ್ರ ಸಾರಥ್ಯದಲ್ಲಿ ಮತ್ತೆ ಈ ಹಾಡು ಬರುತ್ತಿದ್ದು ನಟ ಜಗ್ಗೇಶ್ ಈಗಾಗಲೇ ತಮ್ಮ ಧ್ವನಿಯನ್ನು ನೀಡಿದ್ದಾಗಿದೆ.
'ಭಂಡ ನನ್ನ ಗಂಡ' ಚಿತ್ರ 1992 ರಲ್ಲಿ ತೆರೆ ಕಂಡಿತ್ತು. ಜಗ್ಗೇಶ್, ಪ್ರಿಯಾಂಕ, ಅಂಬರೀಶ್, ಆಶಾಲತಾ ಇನ್ನು ಅನೇಕರು ಚಿತ್ರದಲ್ಲಿ ಅಭಿನಯ ಮಾಡಿದ್ದರು. ವಿ ಮನೋಹರ್ ಸಂಗೀತ ನಿರ್ದೇಶನದಲ್ಲಿ ಅಂತಿಂಥ ಗಂಡು ನಾನಲ್ಲಾ.. ಮೂಡಿ ಬಂದಿತ್ತು. ಈಗ ಮತ್ತೆ ಈ ಹಾಡು ಕೇಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ
26ವರ್ಷದ ನಂತರ 5.1ಅವಿಷ್ಕಾರದಲ್ಲಿ "ಭಂಡ ನನ್ನ ಗಂಡ " ಚಿತ್ರದ ಅಂತಿಂಥ ಗಂಡು ನಾನಲ್ಲಾ ಹಾಡು ಸಂಗೀತ ನಿರ್ದೇಶಕ ವಿನಯ್ ಚಂದ್ರ ಸಾರಥ್ಯದಲ್ಲಿ ಮತ್ತೆ ಹಾಡಿದೆ..ತಾಂತ್ರಿಕ ಕಾರ್ಯ ಪೂರ್ಣವಾದಮೇಲೆ ನಿಮಗೆ ಅರ್ಪಣೆ... pic.twitter.com/7Pii7TL0xR
— ನವರಸನಾಯಕ ಜಗ್ಗೇಶ್ (@Jaggesh2) July 11, 2018