»   » ಇವನೊಂಶ ಸರ್ಜಾ ರೀ,,,,ಇವನು ಆಲ್ವೇಸ್ 'ಭರ್ಜರಿ'.!

ಇವನೊಂಶ ಸರ್ಜಾ ರೀ,,,,ಇವನು ಆಲ್ವೇಸ್ 'ಭರ್ಜರಿ'.!

Posted By:
Subscribe to Filmibeat Kannada

''ಇವನೊಂಶ ಸರ್ಜಾ ರೀ,,,,ಇವನು ಆಲ್ವೇಸ್ ಭರ್ಜರಿ...ಸಿಂಬಲ್ ಧ್ರುವ ನಕ್ಷತ್ರ, ಟಚ್ ಮಾಡೋದು ಕಷ್ಟ ರೀ.....ಸ್ಪೀಡ್ ಅಂತೂ ಫೆರ್ರಾರಿ, ಎನರ್ಜಿ ಧ್ರುವ ರೀ..ಜಗ್ಗುದ್ರು ಬಗ್ಗೋದಿಲ್ಲ, ಗತ್ತೇ ಇವನ ಸ್ವತ್ತು ರೀ.......'' ಅಬ್ಬಾ, ಏನ್ ಪದಗಳು ಗುರು ಇದು, ಯಾರು ಬರೆದಿರುವುದು ಅನ್ಸುತ್ತೆ ಅಲ್ವಾ.!

'ಟೀಸರ್'ನಲ್ಲೇ ಘರ್ಜಿಸಿದ 'ಆಕ್ಷನ್ ಪ್ರಿನ್ಸ್' ಧ್ರುವ

ಈ ಸಾಲುಗಳನ್ನ ಓದುತ್ತಿದ್ದಂತೆ ನಿಮಗೆ ಗೊತ್ತಾಗಿರುತ್ತೆ, ಈ ಯಾವ ಚಿತ್ರದ್ದು ಅಂತ. ಎಸ್, ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರದ ಟೈಟಲ್ ಹಾಡಿನ ಸಾಲುಗಳಿದು. ಈ ಸಾಂಗ್ ಈಗ ರಿಲೀಸ್ ಆಗಿದ್ದು, ಯ್ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ.

Bharjari soundu Song released

'ಭರ್ಜರಿ' ಚಿತ್ರವನ್ನು ದರ್ಶನ್ ಅಭಿಮಾನಿಗಳು ನೋಡಲೇಬೇಕು! ಏಕೆ?

ನಿರ್ದೇಶಕ ಕಮ್ ಬರಹಗಾರ ಚೇತನ್ ಕುಮಾರ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಅವರ ಕಂಠದಲ್ಲಿ ಈ ಹಾಡು ಮೂಡಿ ಬಂದಿದ್ದು, ಡಿ-ಬೀಟ್ಸ್ ಸಂಸ್ಥೆ ರಿಲೀಸ್ ಮಾಡಿದೆ.

ಇನ್ನು ಧ್ರುವ ಸರ್ಜಾಗೆ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಸಾಥ್ ಕೊಟ್ಟಿದ್ದು, ಚಿತ್ರದ ಮುಖ್ಯಪಾತ್ರವೊಂದರಲ್ಲಿ ಹರಿಪ್ರಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಮೂಲಕ ಅಬ್ಬರಿಸುತ್ತಿರುವ ಭರ್ಜರಿ ಸೆಪ್ಟಂಬರ್ ನಲ್ಲಿ ತೆರೆ ಕಾಣಲಿದೆ.

English summary
Bharjari soundu Song from kannada movie Bharjari starring action prince dhruva sarja, rachita ram, haripriya. the movie directed by chethan kumar and music composed by v harikrishna

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada