'ಭೀಮ' ಚಿತ್ರದ ಮೊದಲ ಹಾಡು 'ಡೋಂಟ್ ವರಿ ಬೇಬಿ ಚಿನ್ನಮ್ಮ' ರೆಡಿ

2021ರಲ್ಲಿ ತಾನೇ ಚಿತ್ರಕತೆ ಬರೆದು ನಿರ್ದೇಶನವನ್ನೂ ಮಾಡಿ, ನಟಿಸಿ 'ಸಲಗ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದ ದುನಿಯಾ ವಿಜಯ್‌ ಈಗ ತಮ್ಮ ಮುಂದಿನ ಕನ್ನಡ ಚಿತ್ರವನ್ನೂ ಸಹ ತಾವೇ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಭೀಮ' ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಈ ಹಿಂದೆ ಚಿತ್ರದ ಹಲವಾರು ಪಾತ್ರಗಳನ್ನು ಪೋಸ್ಟರ್ ಮೂಲಕ ಪರಿಚಯಿಸಿದ್ದ ಭೀಮ ಚಿತ್ರತಂಡ ಈಗ ತಮ್ಮ ಚಿತ್ರದ ಮೊದಲ ಹಾಡಿನ ಮಾಹಿತಿಯನ್ನು ಹಂಚಿಕೊಂಡಿದೆ. 'ಡೋಂಟ್ ವರಿ ಬೇಬಿ ಚಿನ್ನಮ್ಮ' ಎಂಬ ಹಾಡಿನ ರೆಕಾರ್ಡಿಂಗ್ ಮುಗಿದಿದೆ ಎಂದು ಪೋಸ್ಟರ್ ಹಂಚಿಕೊಂಡಿಕೊಳ್ಳುವ ಮೂಲಕ ತಿಳಿಸಿದೆ ಭೀಮ ಚಿತ್ರತಂಡ.

ಈ ಹಾಡಿಗೆ ತಮಿಳಿನ ಗಾಯಕ ಗಣ ಮುತ್ತು ಎಂಬುವವರು ದನಿ ನೀಡಿದ್ದಾರೆ. ತಮಿಳಿನ ಮಹಾನ್ ಹಾಗೂ ಪ್ಯಾರಿಸ್ ಜಯರಾಜ್ ಸೇರಿದಂತೆ ಹಲವಾರು ಚಿತ್ರಗಳ ಹಾಡುಗಳನ್ನು ಹಾಡಿರುವ ಗಣ ಮುತ್ತು ದನಿಯಲ್ಲಿ ಮೂಡಿ ಬಂದಿರುವ ಆಲ್ಬಂ ಹಾಡುಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಇನ್ನು ಸಲಗ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಚರಣ್ ರಾಜ್ ಅವರೇ ಭೀಮ ಚಿತ್ರಕ್ಕೂ ಸಂಗೀತ ನಿರ್ದೇಶಿಸುತ್ತಿದ್ದಾರೆ.

Bheema movies first song dont worry baby chinnamma recording completed

ಇನ್ನು ಈ ಹಿಂದೆ ಸಲಗ ಚಿತ್ರದಲ್ಲೂ ಸಹ ತಮಿಳಿನ ಖ್ಯಾತ ಗಾಯದ ಆಂಟೊನಿ ದಾಸನ್ ಕಂಠದಲ್ಲಿ ಮೂಡಿ ಬಂದಿದ್ದ 'ಸೂರಿ ಅಣ್ಣ' ಹಾಡನ್ನು ಮೊದಲು ಚಿತ್ರತಂಡ ಬಿಡುಗಡೆ ಮಾಡಿತ್ತು. ಚರಣ್ ರಾಜ್ ಸಂಗೀತ ಹಾಗೂ ಆಂಟನಿ ದಾಸನ್ ಕಾಂಬಿನೇಶನ್‌ನ ಈ ಹಾಡು ಚಾರ್ಟ್‌ಬಸ್ಟರ್ ಆಗಿತ್ತು. ಸದ್ಯ ಹಾಡಿನ ರೆಕಾರ್ಡಿಂಗ್ ಮುಗಿಸಿರುವ ಭೀಮ ಚಿತ್ರತಂಡ ಹಾಡನ್ನು ಯಾವಾಗ ಬಿಡುಗಡೆ ಮಾಡಲಿದೆ ಎಂಬ ಕುತೂಹಲ ಹೆಚ್ಚಿದೆ.

More from Filmibeat

English summary
Bheema movie's first song 'dont worry baby chinnamma' recording completed. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X