ಆಟಿಟ್ಯೂಡ್ ಐಕಾನ್ ನಟ ಭುವನ್ ಪೊನ್ನಣ್ಣಗೆ ಸಲಾಮ್ ಹೊಡೆದು ಮುಂದೆ ನಡಿಬೇಕಂತೆ

ಸ್ಯಾಂಡಲ್ ವುಡ್ ನಲ್ಲಿ ಈಗ ಬಿಗ್ ಬಾಸ್ ಖ್ಯಾತಿಯ ನಟ ಭುವನ್ ಪೊನ್ನಣ್ಣ ಹವಾ ಜೋರಾಗಿದೆ. ಭುವನ್ ಈಗ ಆಟಿಟ್ಯೂಡ್ ಗೆ ಐಕಾನ್ ಅಂತೆ, ಅಷ್ಟೆಯಲ್ಲ ಎಲ್ಲರು ಸಲಾಮ್ ಹೊಡೆದು ಮುಂದೆ ನಡಿಬೇಕು ಅಂತ ಮಾರ್ನಿಂಗ್ ಬೇರೆ ಮಾಡ್ತಿದ್ದಾರೆ. ಭುವನ್ ಯಾಕೆ ಹೀಗೆ ಮಾಡ್ತಿದ್ದಾರೆ ಅಂತ ಯೊಚಿಸುತ್ತಿದ್ದೀರಾ. ಭುವನ್ ಪೊನ್ನಣ್ಣ ಅಭಿನಯದ ಬಹುನಿರೀಕ್ಷೆಯ 'ರಾಂಧವ' ಚಿತ್ರ ಹಾಡಿನ ಸಾಲುಗಳಿವು.

'ರಾಂಧವ' ಚಿತ್ರದ 'ಆಟಿಟ್ಯೂಡ್ ಗೆ ಐಕಾನ್ ಇವನೇ ಸಲಾಮ್ ಹೊಡೆದು ಮುಂದೆ ನಡೆ' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಟೈಟಲ್ ಟ್ರ್ಯಾಕ್ ಅನ್ನು ರಿಲೀಸ್ ಮಾಡಲಾಗಿದೆ. ಈ ಹಾಡು ರಿಲೀಸ್ ಆಗುತ್ತಿದ್ದಂತೆ ಸಾಮಾಜಿಕ ಜಾಲಾತಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬಿಗ್ ಬಾಸ್ ರಿಯಾಲಿಟಿ ಶೋ ನಿಂದ ಹೊರಬಂದ ನಂತರ ಭುವನ್ 'ರಾಂಧವ' ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಸುಮಾರು ಒಂದುವರೆ ವರ್ಷಗಳಿಂದ 'ರಾಂಧವ' ಚಿತ್ರೀಕರಣ ನಡೆಯುತ್ತಿದ್ದು ಆ ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಭುವನ್. ಈಗ ಚಿತ್ರದಿಂದ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ.

Bhuvan Ponnanna starrer Randhawa film first song released

ಸದ್ಯ ರಿಲೀಸ್ ಆಗಿರುವ ಈ ಹಾಡು ಕೇಳೋಕೆ ಸಖತ್ ಮಜವಾಗಿದ್ದು, ಭರ್ಜರಿ ಖ್ಯಾತಿಯ ನಿರ್ದೇಶಕ ಚೇತನ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಶಶಾಂಕ್ ಶೇಷಗಿರಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿ ಧ್ವನಿ ಕೂಡ ನೀಡಿದ್ದಾರೆ. ಈ ಹಾಡನ್ನು ಆನಂದ್ ಆಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ.

ಅಂದ್ಹಾಗೆ ಈ ಚಿತ್ರಕ್ಕೆ ಸುನೀಲ್ ಆಚಾರ್ಯ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಭುವನ್ ಮೂರು ಗೆಟಪ್ ನಲ್ಲಿ ಮಿಂಚಿದ್ದಾರೆ. ರಾಜರ ಕಾಲದ ಭುವನ್ ಯಿಂದ ಮಾಡ್ರನ್ ಭುವನ್ ವರೆಗು ಕಾಣಿಸಿಕೊಂಡಿದ್ದಾರೆ. ಭುವನ್ ಗೆ ಜೋಡಿಯಾಗಿ ಅಪೂರ್ವ ಶ್ರೀನಿವಾಸ್ ಬಣ್ಣ ಹಚ್ಚಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ 'ರಾಂಧವ' ಸಧ್ಯದಲ್ಲೇ ತೆರೆಗೆ ಬರಲಿದೆ.

More from Filmibeat

English summary
Kannada actor Bigg Boss fame Bhuvan Ponnanna starrer 'Randhawa' film first song released. This movie is directed by Sunil Acharya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X