For Quick Alerts
  ALLOW NOTIFICATIONS  
  For Daily Alerts

  ಆಪ್ತ ಗೆಳೆಯನ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಲಿದ್ದಾರೆ ದಿವಾಕರ್

  |

  ಬಿಗ್ ಬಾಸ್ ಮನೆಯಲ್ಲಿ ಆಪ್ತಮಿತ್ರರಂತೆ ಕಾಣಿಸಿಕೊಂಡಿದ್ದ ಚಂದನ್ ಶೆಟ್ಟಿ ಮತ್ತು ದಿವಾಕರ್ ತುಂಬಾ ದಿನಗಳ ಬಳಿಕ ಮತ್ತೆ ಸದ್ದು ಮಾಡುತ್ತಿದ್ದಾರೆ.

  ಇತ್ತೀಚಿಗಷ್ಟೆ ಕೋಲುಮಂಡೆ ಹಾಡಿನ ಯಶಸ್ಸು ಮತ್ತು ವಿವಾದದ ನಡುವೆ ಸಿಲುಕಿಕೊಂಡಿದ್ದ ಚಂದನ್ ಶೆಟ್ಟಿ ನಾಳೆ (ಸೆಪ್ಟೆಂಬರ್ 17) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಗೆಳಯನ ಈ ಜನುಮದಿನವನ್ನು ಬಿಗ್ ಬಾಸ್ ಖ್ಯಾತಿಯ ದಿವಾಕರ್ ಮತ್ತಷ್ಟು ವಿಶೇಷವಾಗಿಸಲು ಯೋಜಿಸಿದ್ದಾರೆ.

  ಬಿಗ್ ಬಾಸ್ ದಿವಾಕರ್ ಮತ್ತೊಂದು ಹೊಸ ಸಿನಿಮಾ 'ಗುಲಾಲ್'ಬಿಗ್ ಬಾಸ್ ದಿವಾಕರ್ ಮತ್ತೊಂದು ಹೊಸ ಸಿನಿಮಾ 'ಗುಲಾಲ್'

  ಹೌದು, ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ದಿವಾಕರ್ ಭರ್ಜರಿ ಉಡುಗೊರೆ ನೀಡಲು ಎಲ್ಲ ತಯಾರಿ ನಡೆಸಿದ್ದಾರೆ. ಚಂದನ್ ಬರ್ತಡೇ ಪ್ರಯುಕ್ತ, ಆತನ ಸ್ನೇಹಕ್ಕಾಗಿ ವಿಶೇಷ ಹಾಡೊಂದನ್ನು ಸಿದ್ದಪಡಿಸಿದ್ದಾರೆ.

  'Rapper ಕಿಂಗ್' ಎಂಬ ಹೆಸರಿನಲ್ಲಿ ಈ ಹಾಡು ಮೂಡಿ ಬಂದಿದ್ದು, ಖುದ್ದು ದಿವಾಕರ್ ಅವರೇ ನಿರ್ಮಿಸಿದ್ದಾರೆ. ಈ ಕುರಿತು ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡ ದಿವಾಕರ್ ''ನನ್ನ ಗೆಳೆಯನಿಗಾಗಿ ಸರ್ಪ್ರೈಸ್ ಕೊಡಬೇಕು ಅಂತ ಈ ಹಾಡು ಮಾಡಿದ್ದೇನೆ, ಇದುವರೆಗೂ ಚಂದನ್ ಶೆಟ್ಟಿಗೂ ಗೊತ್ತಿಲ್ಲ. ಸೆಪ್ಟೆಂಬರ್ 17ಕ್ಕೆ ಈ ಹಾಡು ಬಿಡುಗಡೆಗೊಳಿಸಲಿದ್ದೇನೆ'' ಎಂದಿದ್ದಾರೆ.

  ''ಗೊತ್ತಾ ಇವನ್ಯಾರು....ಕರುನಾಡಿನ ಸಿಂಗರ್ರು....ಹೆಜ್ಜೆ ಹಾಕೋ ಹಾಡಿಗೆ ಇವನೇ ದಿಲ್ದಾರ್ರು....'' ಎಂದು ಶುರುವಾಗುವ ಈ ಹಾಡು ಚಂದನ್ ಶೆಟ್ಟಿಗೆ ಸರ್ಪ್ರೈಸ್ ಆಗುವುದು ಪಕ್ಕಾ.

  ಕೊನೆಗೂ ಅಪ್ಪಾಜಿ ಜೊತೆ ಆಕ್ಟ್ ಮಾಡೋ ಆಸೆ ಈಡೇರಲಿಲ್ಲ | Shruthi Krishna | Filmibeat Kannada

  ಇನ್ನು ಈ ಹಾಡಿಗೆ ಹಿತನ್ ಹಾಸನ್ ಸಾಹಿತ್ಯ ರಚಿಸಿದ್ದು, ಹರ್ಷ ಕೋಗೋಡ್ ಸಂಗೀತ ಒದಗಿಸಿದ್ದಾರೆ. ಗಿರೀಶ್ ರಾಮಾಂಜನೇಯ ಈ ಹಾಡಿಗೆ ಧ್ವನಿಯಾಗಿದ್ದು, ನಂದುನಾಚೋ ಸಂಕಲನವಿದೆ.

  English summary
  Bigg Boss Fame Diwakar has planning to give surprise gift for his dearest friend chandan shetty on birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X