twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೊಂದು ವಿವಾದ ಎಬ್ಬಿಸಿದ 'ಪುಷ್ಪ' ಐಟಂ ಹಾಡು: ದೇವಿಶ್ರೀ ಪ್ರಸಾದ್ ವಿರುದ್ಧ ಬಿಜೆಪಿ ಶಾಸಕ ದೂರು

    |

    ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಡಿಸೆಂಬರ್ 17 ರಂದು ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಸಿನಿಮಾದ ಹಾಡುಗಳು ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿ ಹಿಟ್ ಆಗಿದ್ದವು. ಹಾಡುಗಳೇ ಜನರನ್ನು ಚಿತ್ರಮಂದಿರಕ್ಕೆ ಕರೆತಂದಿವೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

    'ಪುಷ್ಪ' ಸಿನಿಮಾದ ಹಾಡುಗಳು ಹಿಟ್ ಆದ ಖುಷಿಯಲ್ಲಿರುವ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ಗೆ ಸಂಕಷ್ಟವೊಂದು ಎದುರಾಗಿದೆ. ದೇವಿಶ್ರೀ ಪ್ರಸಾದ್ ಮೇಲೆ ದೂರು ದಾಖಲಾಗಿದೆ.

    'ಪುಷ್ಪ' ಸಿನಿಮಾ ಬಿಡುಗಡೆಗೆ ಮುನ್ನ ಹೈದರಾಬಾದ್, ಚೆನ್ನೈ, ಬೆಂಗಳೂರು, ಮುಂಬೈ, ತಿರುವನಂತಪುರಂ ಇನ್ನೂ ಕೆಲವೆಡೆಗಳಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿನಿಮಾದ ಸುದ್ದಿಗೋಷ್ಠಿಯನ್ನು ಸಹ ಆಯೋಜಿಸಲಾಗಿತ್ತು.

     BJP MLA Raja Singh Gave Complaint Against Devi Sri Prasad For Comparing Devotional Songs To Item Song

    ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಿಶ್ರೀ ಪ್ರಸಾದ್, ''ಕೇಳುಗರಿಗೆ ಐಟಂ ಸಾಂಗ್, ಲವ್ ಸಾಂಗ್ ಎಂದು ಭಿನ್ನವಾಗಿರಬಹುದೇನೋ ಆದರೆ ನನಗೆ ಎಲ್ಲವೂ ಒಂದೇ, ಐಟಂ ಹಾಡು ಸಹ ನನಗೆ ದೇವರ ಹಾಡಿನಂತೆಯೇ ನಿರ್ಮಲ, ಅದೊಂದು ಧ್ಯಾನ'' ಎಂದಿದ್ದರು.

    ಜೊತೆಗೆ ತಮ್ಮದೇ ಸಂಗೀತ ನಿರ್ದೇಶನದ 'ಆರ್ಯ 2' ಸಿನಿಮಾದ ಐಟಂ ಹಾಡು 'ರಿಂಗ ರಿಂಗ' ಹಾಡಿಗೆ ದೇವರ ಸಾಹಿತ್ಯ ಬೆರೆಸಿ ಹಾಡಿ ರಂಜಿಸಿದರು. ಭಕ್ತಿ ಗೀತೆಯಾಗಲಿ, ಐಟಂ ಹಾಡಾಗಲಿ ನನಗೆ ಎಲ್ಲವೂ ಒಂದೇ, ಎಲ್ಲವನ್ನೂ ನಾನು ಧ್ಯಾನಿಸಿಯೇ ಮಾಡಿರುತ್ತೇನೆ'' ಎಂದರು.

    ಮುಂದುವರೆದು, 'ಊ ಅಂಟಾವ ಊ ಹು ಅಂಟಾವ ಮಾವ' ಹಾಡನ್ನು ಭಕ್ತಿಪೂರಕವಾಗಿ ಸಹ ಹಾಡಬಹುದು. ಹಲವು ಅನ್ನಮಯ್ಯ ಕೀರ್ತನೆಗಳನ್ನು ಹಾಡಿರುವ ಗಾಯಕಿ ಶೋಭಾ ರಾಜ್ ಅವರು ನಮ್ಮ 'ಊ ಅಂಟಾವ ಮಾನ ಊ ಹುಂ ಅಂಟಾವ' ಹಾಡನ್ನು ಭಕ್ತಿಗೀತೆಯಾಗಿ ಹಾಡಿ ಅದರ ವಿಡಿಯೋವನ್ನು ಹರಿಬಿಟ್ಟಿದ್ದಾರೆ. 'ಊ ಅಂಟಾವ ಮಾಧವ, ಊ ಹೂ ಅಂಟಾವ' ಎಂದು ಅವರು ಐಟಂ ಹಾಡನ್ನು ಭಕ್ತಿಗೀತೆಯಾಗಿ ಬದಲಾವಣೆ ಮಾಡಿದ್ದಾರೆ'' ಎಂದು ಉದಾಹರಣೆ ನೀಡಿದರು ದೇವಿಶ್ರೀ ಪ್ರಸಾದ್.

    ಆದರೆ ದೇವಿಶ್ರೀ ಪ್ರಸಾದ್ ಅವರು ಐಟಂ ಹಾಡನ್ನು ಭಕ್ತಿ ಗೀತೆಗೆ ಹೋಲಿಸಿರುವುದನ್ನು ಕೆಲವರಿಗೆ ಸಹಿಸಲಾಗಿಲ್ಲ. ಘೋಷ್‌ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್, ದೇವಿಶ್ರೀ ಪ್ರಸಾದ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಿನ್ನೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ದೇವಿಶ್ರೀ ಪ್ರಸಾದ್‌ಗೆ ಎಚ್ಚರಿಕೆ ನೀಡಿದ್ದರು. ಇದೀಗ ರಾಜಾ ಸಿಂಗ್, ದೇವಿಶ್ರೀ ಪ್ರಸಾದ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ''ದೇವಿಶ್ರೀ ಪ್ರಸಾದ್, ದೇವರ ಹಾಡುಗಳಿಗೆ ಐಟಂ ಹಾಡುಗಳಿಗೆ ಹೋಲಿಕೆ ಮಾಡಿರುವುದು ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ. ಅವರ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು'' ಎಂದು ರಾಜಾ ಸಿಂಗ್ ದೂರಿನಲ್ಲಿ ಮನವಿ ಮಾಡಿದ್ದಾರೆ.

    ವಿಡಿಯೋ ಪ್ರಕಟಿಸಿದ್ದ ರಾಜಾ ಸಿಂಗ್, ''ಅನವಶ್ಯಕವಾಗಿ ಹಿಂದುಗಳ ತಂಟೆಗೆ ನೀವು ಬರುತ್ತಿದ್ದೀರ. ನೀವು ಈ ಕೂಡಲೇ ಕ್ಷಮೆ ಕೋರಬೇಕು, ಒಂದು ವೇಳೆ ಕ್ಷಮೆ ಕೋರಲಿಲ್ಲವಾದರೆ ತೆಲಂಗಾಣದ ಹಿಂದು ಸಮಾಜದ ಜನ ನಿಮ್ಮನ್ನು ಓಡಿಸಿ-ಓಡಿಸಿ ಹೊಡೆಯುತ್ತಾರೆ'' ಎಂದಿದ್ದರು. ಮುಂದುವರೆದು, ''ನಮ್ಮದು ಹಿಂದು ಸೈನ್ಯ ಇದೆ. ಅವರು ಮಾತನಾಡುವುದಿಲ್ಲ ಆದರೆ ಚಪ್ಪಲಿ ಮೂಲಕವೇ ನಿಮಗೆ ಉತ್ತರ ನೀಡುತ್ತಾರೆ ಎಚ್ಚರ'' ಎಂದು ಧಮ್ಕಿ ಹಾಕಿದ್ದರು ರಾಜಾ ಸಿಂಗ್.

    'ಪುಷ್ಪ' ಸಿನಿಮಾದ ಐಟಂ ಹಾಡು 'ಊ ಅಂಟಾವ ಮಾವ ಊ ಹು ಅಂಟಾವ' ಬಿಡುಗಡೆ ಆದಾಗಿನಿಂದಲೂ ವಿವಾದಕ್ಕೆ ಕಾರಣವಾಗುತ್ತಲೇ ಇದೆ. ಹಾಡು ಬಿಡುಗಡೆ ಆದ ಬಳಿಕ ಪುರುಷರ ಸಂಘ ಹಾಡಿನ ಸಾಹಿತ್ಯಕ್ಕೆ ತಕರಾರು ಎತ್ತಿತ್ತು. ಹಾಡಿನಲ್ಲಿ ಪುರುಷರನ್ನು ಕಾಮಲೋಲುಪರೆಂದು, ಯುವತಿಯರ ಸೌಂದರ್ಯಕ್ಕೆ ದಾಸರೆಂದು, ಚಂಚಲ ಮನೋವೃತ್ತಿಯವರೆಂದು ಚಿತ್ರಿಸಲಾಗಿದೆ. ಹಾಗಾಗಿ ಈ ಹಾಡಿನ ವಿರುದ್ಧ ತಡೆ ನೀಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಹಾಡಿನಲ್ಲಿ ಸಮಂತಾ ಅತಿಯಾದ ಮಾದಕತೆಯಿಂದ ಕುಣಿದಿರುವುದಕ್ಕೂ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು.

    English summary
    BJP MLA Raja Singh gave police complaint against music director Devi Sri Prasad for comparing devotional songs to item songs.
    Monday, December 20, 2021, 13:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X