8 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ಗಾಯಕ ಕುನಾಲ್ ಗಾಂಜಾವಾಲ: ರಿಚ್ ಆಗಿದೆ 'ರಿಚ್ಚಿ' ವೀಡಿಯೋ ಸಾಂಗ್!
ಒಂದ್ಕಾಲದಲ್ಲಿ ಬಾಲಿವುಡ್ ಗಾಯಕ ಕುನಾಲ್ ಗಾಂಜವಾಲ ಕನ್ನಡ ಸಿನಿಮಾಗಳಿಗೆ ಹಾಡಲೇ ಬೇಕು. ಒಂದಾದರೂ ಹಾಡಿಗೆ ಅವರು ಧ್ವನಿ ನೀಡಿದ್ದಾರೆ ಅಂದ್ರೆ, ಆ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆದಂತೆಯೇ.
ಕನ್ನಡದ ಬಹುತೇಕ ಸೂಪರ್‌ಸ್ಟಾರ್‌ಗಳಿಗೆ ಕುನಾಲ್ ಗಾಂಜವಾಲ ಹಾಡಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ ಅಂತ ದಿಗ್ಗಜರ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಆದರೆ, ಇದ್ದಕ್ಕಿದ್ದ ಹಾಗೇ ಸ್ಯಾಂಡಲ್‌ವುಡ್‌ನಿಂದ ದೂರ ಆಗಿದ್ದರು. ಈಗ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಅದುವೇ 'ರಿಚ್ಚಿ'.
"ಕಳೆದು ಹೋಗಿರುವೆ ನಿನ್ನ ನೋಡಿ, ಜೀವ ಹಿಂಡುತಿದೆ ಒಲವು ಮೂಡಿ" ಅಂತ ಸುಮಧುರವಾಗಿ ಕುನಾಲ್ ಗಾಂಜವಾಲ ಹಾಡಿದ್ದಾರೆ. ಈ ಧ್ವನಿಯನ್ನು ಮತ್ತೆ ಕೇಳಿ ಸಂಗೀತ ಪ್ರಿಯರು ಥ್ರಿಲ್ ಆಗಿದ್ದಾರೆ. ಈ ರೊಮ್ಯಾಂಟಿಕ್ ಹಾಡಿನ ಮೂಲಕ 'ರಿಚ್ಚಿ' ಸಿನಿಮಾಗೆ ಅದ್ಭುತ ಮೈಲೇಜ್ ಸಿಕ್ಕಂತಾಗಿದೆ.

ಕುನಾಲ್ ಗಾಂಜವಾಲ ಹಾಡಿದ ಹಾಡು ನಾಯಕ ನಟ, ನಿರ್ದೇಶಕ, ನಿರ್ಮಪಕರೂ ಆಗಿರುವ ರಿಚ್ಚಿಗೆ ಬಲ ಸಿಕ್ಕಂತಾಗಿದೆ. ಇನ್ನು ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ಈ ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ. ಇದೊಂದು ಲವ್, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಹೀಗಾಗಿ ಹಾಡಿನಷ್ಟೇ ಮೋಹಕವಾದ ಸಾಹಸ ದೃಶ್ಯಗಳೂ ಕೂಡ ಇಲ್ಲಿವೆ.
'ರಿಚ್ಚಿ' ಸಿನಿಮಾದ ಮೊದಲ ಹಾಡು ಗ್ರ್ಯಾಂಡ್ ಆಗಿದೆ. ರಿಚ್ಚಿ ಮತ್ತು ರಮೋಲಾ ಜೋಡಿ ಈ ಹಾಡಿನ ಮೂಲಕ ಇಷ್ಟ ಆಗುತ್ತಿದ್ದಾರೆ. ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಸಿನಿಸಾಹಿತಿ ಗೌಸ್ ಫೀರ್ ಖಾತೆಗೆ ಮತ್ತೊಂದು ಮಧುರವಾದ ಹಾಡು ಸೇರಿಕೊಂಡಿದೆ. ಅಗಸ್ತ್ಯ ಸಂತೋಷ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಗೀತೆ, ಕುನಾಲ್ ಗಾಂಜಾವಾಲಾರ ವಿಶಿಷ್ಟ ಕಂಠಸಿರಿಯಿಂದ ಕಳೆಗಟ್ಟಿದೆ.
ರಿಚ್ಚಿ ಹಾಡನ್ನು ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ ಕಂಪೋಸ್ ಮಾಡಿದ್ದಾರೆ. ಪ್ರತಿಭಾನ್ವಿತ ತಾರಾಗಣ, ಹೊಸತನವನ್ನೇ ಪ್ರಧಾನ ವಿಷಯವಾಗಿಟ್ಟುಕೊಳ್ಳಲಾಗಿದೆ. ಹಾಡಿನ ಜೊತೆಗೆ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಚಿನ್ನಿ ಮಾಸ್ಟರ್ ನೃತ್ಯ ನಿರ್ದೇಶನ, ಅಜಿತ್ ಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿ ಪ್ರಕಾಶ್, ಧನಂಜಯ ಮತ್ತು ಭೂಷಣ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.


Click it and Unblock the Notifications











