''ರಾನಿ'' ಚಿತ್ರದ ಮೂಲಕ ಕನ್ನಡಕ್ಕೆ ಮರಳಿದ 'ಕುನಾಲ್ ಗಾಂಜಾವಾಲ'..!
ಕನ್ನಡತಿ ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದವರು ಕಿರಣ್ ರಾಜ್. ಬಡ್ಡೀಸ್ .. ಭರ್ಜರಿ ಗಂಡು .. ಚಿತ್ರಗಳ ಮೂಲಕ ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರ ಹೃದಯ ಗೆಲ್ಲುವ ಪ್ರಯತ್ನವನ್ನೂ ಮಾಡಿರುವ ಕಿರಣ್ ರಾಜ್ ಸದ್ಯಕ್ಕೆ ತಮ್ಮ ರಾನಿ ಚಿತ್ರದ ಬಿಡುಗಡೆಯನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಯಾಕೆಂದರೆ.. ಹಿಂದೆಂದೂ ಕಾಣದ ರೂಪದಲ್ಲಿ ಕಿರಣ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಕೂಡ ಕಿರಣ್ ರಾಜ್ ಮಿಂಚಿದ್ದಾರೆ.
ಇನ್ನೂ ರಾನಿ ಮೇಲೆ ಕಿರಣ್ ರಾಜ್‌ಗೆ ಸಾಕಷ್ಟು ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ ಈ ಹಿಂದೆ ಬಿಡುಗಡೆಯಾದ ಟೀಸರ್ ಮತ್ತು ಹಾಡು ಚಿತ್ರದ ಮೇಲಿನ ಭರವಸೆಯನ್ನೂ ಹೆಚ್ಚಿಸಿವೆ. ಹೀಗಿರುವಾಗ ಇದೀಗ ರಾನಿ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಎಲ್ಲರ ಚಿತ್ತವನ್ನು ಕದಿಯುತ್ತಿದೆ.

ಹೌದು, ಕಿರಣ್ ರಾಜ್ ಹುಟ್ಟುಹಬ್ಬದ ಪ್ರಯುಕ್ತ, ಮೊನ್ನೆಯ ದಿವಸ ರಾನಿ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. 'ಹವಾಮಾನವೆ ಸುಂದರ' ಎಂಬ ಸಾಲುಗಳಿಂದ ಆರಂಭವಾಗುವ ಈ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಇದೆ. ಎಂಬ ಹಾಡು ಬಿಡುಗಡೆಯಾಗಿದೆ. ಇನ್ನೂ ಒಂದ್ಕಾಲದಲ್ಲಿ ತಮ್ಮ ಚಿನ್ನದ ಕಂಠದಿಂದ ಕನ್ನಡಿಗರನ್ನು ಹುಚ್ಚೆಬ್ಬಿಸಿದ್ದ ಬಾಲಿವುಡ್‌ನ ಗಾಯಕ ಕುನಾಲ್ ಗಾಂಜಾವಾಲ ಬಹಳ ದಿನಗಳ ನಂತರ ಈ ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಹಂಸಿಕಾ ಐಯ್ಯರ್ ಈ ಹಾಡಿನ ಫೀಮೇಲ್ ಸಿಂಗರ್
ಇನ್ನೂ ಈ ಸಿನಿಮಾದಲ್ಲಿ ಕಿರಣ್ ರಾಜ್‌ಗೆ ಮೂವರು ನಾಯಕಿಯರು. ಅಪೂರ್ವ, ಸಮೀಕ್ಷಾ, ರಾಧ್ಯ ಅವರ ಜತೆ ಕಿರಣ್ ರಾಜ್ ಡುಯೆಟ್ ಹಾಡಿದ್ದಾರೆ. ಗುರು ತೇಜ್ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗ್ಡೆ ಚಿತ್ರದ ನಿರ್ಮಾಪಕರು. ಬಿ ಸುರೇಶ್, ರವಿ ಶಂಕರ್, ಮೈಕೋ ಶಂಕರ್, ಧರ್ಮಣ್ಣ ಕಡೂರು, ಸೂರಿ, ಚೇತನ್, ಶ್ರೀನಿವಾಸ ಪ್ರಭು, ಉಮೇಶ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹತ್ ಹತ್ರ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣವನ್ನೂ ಮಾಡಲಾಗಿದೆ.

ಉಳಿದಂತೆ ಹಾಡು ಬಿಡುಗಡೆಯ ಸಮಯದಲ್ಲಿ ಮಾತನಾಡಿದ ಕಿರಣ್ ರಾಜ್, ಒಂದು ಹಂತದಲ್ಲಿ ನನಗೆ ಜೀವನದಲ್ಲಿ ಮುಂದೇನು ಎಂಬ ಪ್ರಶ್ನೆ ಎದುರಾಯಿತು. ಆಗ ನನಗೆ, "ರಾನಿ" ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಸಿಕ್ಕರು. ನನಗೂ ಈ ಚಿತ್ರದ ಕಥೆ ಇಷ್ಟವಾಯಿತು. ಚಿತ್ರದ ಕಥೆ ಕಾಲ್ಪನಿಕವಾದರೂ, ಪ್ರತಿಯೊಬ್ಬರಿಗೂ ನನ್ನ ಪಾತ್ರ ಹತ್ತಿರವಾಗುತ್ತದೆ. ಹೆವಿ ಬಜೆಟ್ ನ ಚಿತ್ರವಿದು. ಕೆಲವರು ನನ್ನ ಸಿನಿಮಾಗೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದೀರಾ? ಎಂದು ನಿರ್ಮಾಪಕರನ್ನು ಕೇಳಿರಬಹುದು. ಆದರೆ ನಮ್ಮ ನಿರ್ಮಾಪಕರು ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುವವರು. ಹಾಗಾಗಿ, ಹಣಕಾಸಿನ ವಿಚಾರಕ್ಕಿಂತ ಒಳ್ಳೆಯ ಸಿನಿಮಾ ಮಾಡಿದ್ದಾರೆ' ಎಂದು ಹೇಳಿದ್ದಾರೆ.
ಸದ್ಯಕ್ಕೆ ರಾನಿ ಚಿತ್ರದ ಈ ಹಾಡು ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದ್ದು ಚಿತ್ರ ಆಗಸ್ಟ್ 30ಕ್ಕೆ ತೆರೆಗೆ ಬರಲಿದೆ


Click it and Unblock the Notifications











