Don't Miss!
- Sports
BGT 2023: ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್ನೆಸ್ ಪರೀಕ್ಷೆ: ಪಾಸಾದರೆ ಮಾತ್ರ ಟೆಸ್ಟ್ ತಂಡದಲ್ಲಿ ಸ್ಥಾನ
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ರೆಂಡಿಂಗ್‌ನಲ್ಲಿ 'ಬಾಸ್ ಪಾರ್ಟಿ': ಚಿರು-ದೇವಿಶ್ರೀ ಪ್ರಸಾದ್ ಕಾಂಬೋ ಸೂಪರ್ ಹಿಟ್
ದಶಕಗಳ ಹಿಂದೆಯೇ ಅದ್ಭುತ ಡ್ಯಾನ್ಸ್‌ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟ ಚಿರಂಜೀವಿ. ವಯಸ್ಸು 60 ದಾಟಿದ್ರು ಚಿರು ಡ್ಯಾನ್ಸ್‌ಗೆ ಮಾತ್ರ ಇನ್ನು 20ರ ಹರೆಯ. 'ವಾಲ್ತೇರು ವೀರಯ್ಯ' ಸಿನಿಮಾದಲ್ಲಿ ಮತ್ತೊಮ್ಮೆ ತಮ್ಮ ಡ್ಯಾನ್ಸ್‌ನಿಂದ ಮೆಗಾಸ್ಟಾರ್ ಪ್ರೇಕ್ಷಕರ ಮನಗೆಲ್ಲಲು ಬರುತ್ತಿದ್ದಾರೆ.
ಚಿರಂಜೀವಿ ನಟನೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ವಾಲ್ತೇರು ವೀರಯ್ಯ'. ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದಲ್ಲಿ ಚಿರು ಜೊತೆಗೆ ಶ್ರುತಿ ಹಾಸನ್, ರವಿತೇಜಾ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರದ 'ಬಾಸ್ ಪಾರ್ಟಿ' ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ದೇವಿಶ್ರೀಪ್ರಸಾದ್ ಟ್ಯೂನ್ ಹಾಕಿ ಲಿರಿಕ್ಸ್ ಬರೆದು ನಕಾಶ್ ಅಜಿಜ್ ಜೊತೆ ದನಿಗೂಡಿಸಿದ್ದಾರೆ. ಚಿರು ಜೊತೆ ಸಾಂಗ್‌ನಲ್ಲಿ ಊವರ್ಶಿ ರೌಟೇಲಾ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ.
ಕೇಂದ್ರ
ಸರ್ಕಾರದಿಂದ
ನಟ
ಚಿರಂಜೀವಿಗೆ
ಅಪರೂಪದ
ಗೌರವ:
ಅಭಿಮಾನಿಗಳು,
ಆಪ್ತರಿಂದ
ಅಭಿನಂದನೆ

ಟ್ರೆಂಡಿಂಗ್‌ನಲ್ಲಿ 'ಬಾಸ್ ಪಾರ್ಟಿ'
ಪಕ್ಕಾ ಡ್ಯಾನ್ಸ್ ನಂಬರ್ 'ಬಾಸ್ ಪಾರ್ಟಿ'. ಕಲರ್‌ಫುಲ್ ಸೆಟ್‌ನಲ್ಲಿ ಅಷ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ. ರಾಕ್‌ಸ್ಟಾರ್ ದೇವಿಶ್ರೀಪ್ರಸಾದ್ ಟ್ಯೂನ್‌ಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಶೇಖರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಮತ್ತಷ್ಟು ಕಿಕ್ ಕೊಡ್ತಿದೆ. ಚಿರಂಜೀವಿ ಮತ್ತೆ ತಮ್ಮ ಗ್ರೇಸ್‌ಫುಲ್ ಡ್ಯಾನ್ಸ್‌ನಿಂದ ಮೋಡಿ ಮಾಡಿದ್ದಾರೆ. ಲಿರಿಕಲ್ ವಿಡಿಯೋ ಸಾಂಗ್‌ನಲ್ಲಿ ವೀರಯ್ಯ ಹುಕ್‌ಸ್ಟೆಪ್ಸ್ ಮಿಕ್ಸ್ ಮಾಡಿ ರಿಲೀಸ್ ಮಾಡಿದ್ದಾರೆ. ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಸಾಂಗ್ ಸದ್ದು ಮಾಡ್ತಿದೆ.

'ಮುಠ್ಠಾಮೇಸ್ತ್ರಿ' ನೆನಪಿಸುವ 'ವೀರಯ್ಯ'
ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೂಪರ್ ಹಿಟ್ ಸಿನಿಮಾ 'ಮುಠ್ಠಾಮೇಸ್ತ್ರಿ'. ಲುಂಗಿ ಉಟ್ಟು, ಬೀಡಿ ಹಿಡಿದು ಆ ಚಿತ್ರದಲ್ಲಿ ಚಿರು ಕಮಾಲ್ ಮಾಡಿದ್ದರು. 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ಮೆಗಾಸ್ಟಾರ್ ಮತ್ತೆ ಅದೇ ತರಹದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೂಕ ಇಳಿಸಿ ಮತ್ತಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಮಿಂಚಿದ್ದಾರೆ. ಬಿಂದಾಸ್ ಡ್ಯಾನ್ಸ್‌ನಿಂದ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ.

ಸಂಕ್ರಾಂತಿಗೆ 'ವಾಲ್ತೇರು ವೀರಯ್ಯ' ರಿಲೀಸ್
ಸುಗ್ಗಿ ಹಬ್ಬದ ಸಂಭ್ರಮದಲ್ಲಿ 'ವಾಲ್ತೇರು ವೀರಯ್ಯ' ಸಿನಿಮಾ ತೆರೆಗೆ ಬರ್ತಿದೆ. ಈ ಬಾರಿ ಸಂಕ್ರಾಂತಿಗೆ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಆ ಲಿಸ್ಟ್‌ನಲ್ಲಿ 'ವಾಲ್ತೇರು ವೀರಯ್ಯ' ಕೂಡ ಇದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಕ್ಯಾತರಿನ್ ತ್ರೆಸಾ, ಬಾಬಿ ಸಿಂಹ, ವೆನ್ನೆಲ ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಚಿರುಗೆ ಕೇಂದ್ರ ಸರ್ಕಾರದ ಗೌರವ
ಇನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಮೆಗಾಸ್ಟಾರ್ ಚಿರಂಜೀವಿಗೆ 'ಇಂಡಿಯನ್ ಫಿಲ್ಮ್ ಪರ್ಸನಲಿಟಿ ಆಫ್ ದಿ ಇಯರ್ -2022' ಪ್ರಶಸ್ತಿ ಘೋಷಿಸಿದೆ. ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿದ ಸಂಭ್ರಮದಲ್ಲಿ 2013 ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಚಿರಂಜೀವಿ ನಟಿಸಿ ಚಿರು ಪ್ರೇಕ್ಷಕರನ್ನು ರಂಜಿಸಿದ್ದಾರೆ.