For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸಿನಿಮಾದಲ್ಲಿ ಪಾಪ್ ಸೂಪರ್ ಸ್ಟಾರ್ ಬ್ರಿಟ್ನಿ

  |

  ಭಾರತೀಯ ಸಿನಿಮಾಗಳಲ್ಲಿ ಹಾಲಿವುಡ್ ನಟರು ನಟಿಸುವುದು ಹೊಸದೇನೂ ಅಲ್ಲ. ಭಾರತೀಯ ನಟರು ಹಾಲಿವುಡ್‌ನಲ್ಲಿಯೂ, ಅಲ್ಲಿನ ನಟರು ಭಾರತೀಯ ಸಿನಿಮಾಗಳಲ್ಲಿ ನಟಿಸುವುದು ನಡೆದೇ ಇದೆ.

  ಆದರೆ ಇದೀಗ ಖ್ಯಾತ ಅಮೆರಿಕನ್ ಪಾಪ್ ಗಾಯಕಿಯೊಬ್ಬರು ತೆಲುಗು ಸಿನಿಮಾ ಒಂದಕ್ಕೆ ವಿಶೇಷವಾದ ಹಾಡೊಂದನ್ನು ಹಾಡಲಿದ್ದಾರೆ. ಅದೂ ಚಿರಂಜೀವಿ ನಟಿಸಲಿರುವ ಸಿನಿಮಾದಲ್ಲಿ.

  ನಟ ಚಿರಂಜೀವಿ 'ಗಾಡ್ ಫಾದರ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾದಲ್ಲಿ ವಿಶೇಷ ಹಾಡೊಂದನ್ನು ಅಮೆರಿಕನ್ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಹಾಡಲಿದ್ದಾರೆ. ಈ ಹಾಡು ಇಂಗ್ಲೀಷ್‌ನಲ್ಲಿರುತ್ತದೆಯೋ ಅಥವಾ ಬ್ರಿಟ್ನಿ ಸ್ಪಿಯರ್ಸ್ ತೆಲುಗು ಹಾಡನ್ನು ಹಾಡುತ್ತಾರೆಯೇ ನೋಡಬೇಕಿದೆ.

  ಮಲಯಾಳಂನ 'ಲುಸಿಫರ್' ಸಿನಿಮಾದ ತೆಲುಗು ರೀಮೇಕ್ 'ಗಾಡ್‌ಫಾದರ್' ಆಗಿದ್ದು ಸಿನಿಮಾದಲ್ಲಿ ವಿಶೇಷವಾದ ಹಾಡೊಂದನ್ನು ಇಡಲಾಗಿದೆ. ಈ ಹಾಡನ್ನು ಬ್ರಿಟ್ನಿ ಸ್ಪಿಯರ್ಸ್‌ರಿಂದ ಹಾಡಿಸಲು ಚಿತ್ರತಂಡ ಯೋಜಿಸಿದೆ.

  ಬ್ರಿಟ್ನಿ ಸ್ಪಿಯರ್ಸ್ ಸಾಮಾನ್ಯ ಗಾಯಕಿಯೇನೂ ಅಲ್ಲ, ಪಾಪ್ ಜಗತ್ತಿನ ಅತಿ ದೊಡ್ಡ ತಾರೆಗಳಲ್ಲಿ ಒಬ್ಬರು. 'ಊಪ್ಸ್ ಐ ಡಿಡ್‌ ಇಟ್ ಅಗೇನ್', 'ಗಿಮ್ಮಿ ಮೋರ್', 'ವುಮನೈಜರ್', 'ಟಾಕ್ಸಿಕ್', 'ಕ್ರಿಮಿನಲ್' ಇನ್ನೂ ಹಲವು ಸೂಪರ್ ಹಿಟ್ ಹಾಡುಗಳನ್ನು ಬ್ರಿಟ್ನಿ ಹಾಡಿದ್ದಾರೆ. ಅವರ ಆಲ್ಬಂಗಳು ಕೊಟಿಗಳಲ್ಲಿ ಮಾರಾಟವಾಗುತ್ತವೆ.

  ಕೆಲವು ದಿನಗಳ ಹಿಂದಷ್ಟೆ ಬ್ರಿಟ್ನಿ ಸ್ಪಿಯರ್ಸ್‌ಗೆ ದೊಡ್ಡ ಕಾನೂನು ಜಯವೊಂದು ದಕ್ಕಿದೆ. ಮಾದಕ ವಸ್ತು ಸೇವಸಿ ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿ ಹಲವು ವರ್ಷಗಳಿಂದ ತಂದೆಯ ನಿಗಾವಣೆಯಲ್ಲಿದ್ದ ಬ್ರಿಟ್ನಿ ಸ್ಟಿಯರ್ಸ್ ಬಹು ವರ್ಷಗಳ ಕಾನೂನು ಹೋರಾಟದ ಬಳಿಕ ಬಿಡುಗಡೆ ಪಡೆದಿದ್ದಾರೆ. ಕಳೆದೊಂದು ದಶಕ್ಕೂ ಹೆಚ್ಚು ಕಾಲದಿಂದ ಬ್ರಿಟ್ನಿ ಸ್ಪಿಯರ್ಸ್‌ ತಂದೆಯ ನಿಗಾವಣೆಯಲ್ಲಿದ್ದರು. ಬ್ರಿಟ್ನಿ ಸ್ಪಿಯರ್ಸ್ ತಾನೇ ಸಂಪಾದಿಸಿದ ಹಣ ಖರ್ಚು ಮಾಡಲು ಸಹ ತಂದೆಯ ಅನುಮತಿ ಕೇಳಬೇಕಿತ್ತು, ಯಾವುದೇ ಶೋ ಮಾಡಲು, ಆಲ್ಬಂ ಮಾಡಲು ತಂದೆಯ ಅನುಮತಿ ಕೇಳುವ ಸ್ಥಿತಿ ಇತ್ತು. ಇದರ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋದ ಬ್ರಿಟ್ನಿಗೆ ಇತ್ತೀಚೆಗಷ್ಟೆ ಜಯವಾಗಿದೆ. ಈಗ ಅವರು ಸ್ವತಂತ್ರ್ಯರು.

  ಚಿರಂಜೀವಿ ನಟಿಸುತ್ತಿರುವ 'ಗಾಡ್ ಫಾದರ್' ಸಿನಿಮಾವು ರಾಜಕೀಯ ಮತ್ತು ಭೂಗತ ಲೋಕಕ್ಕೆ ಸಂಬಂಧಿಸಿದ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಸಹೋದರಿ ಸೆಂಟಿಮೆಂಟ್ ಸಹ ಇರಲಿದೆ. ಮಲಯಾಳಂನ 'ಲುಸಿಫರ್' ಸಿನಿಮಾದಲ್ಲಿ ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ತೆಲುಗು ರೀಮೇಕ್ ಹೆಚ್ಚು ಅದ್ಧೂರಿಯಾಗಿ ಮಾಡಲು ನಿಶ್ಚಯಿಸಿದ್ದು, ಕತೆಯ ನಿರೂಪಣೆಯಲ್ಲೂ ಬದಲಾವಣೆ ಮಾಡಲಿದ್ದಾರೆ ನಿರ್ದೇಶಕ ಮೋಹನ್ ರಾಜು.

  'ಗಾಡ್‌ಫಾದರ್' ಸಿನಿಮಾದಲ್ಲಿ ಬ್ರಿಟ್ನಿ ಸ್ಪಿಯರ್ಸ್ ಮಾತ್ರವೇ ಅಲ್ಲದೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಮಲಯಾಳಂನ 'ಲುಸಿಫರ್' ಸಿನಿಮಾದಲ್ಲಿ ಸುಕುಮಾರನ್ ನಿರ್ವಹಿಸಿದ್ದ ಪಾತ್ರವನ್ನು 'ಗಾಡ್‌ಫಾದರ್'ನಲ್ಲಿ ಸಲ್ಮಾನ್ ಖಾನ್ ನಿರ್ವಹಿಸುವ ಸಾಧ್ಯತೆ ಇದೆ. ಮೂಲ ಸಿನಿಮಾದಲ್ಲಿ ಮಂಜು ವಾರಿಯರ್ ನಿರ್ವಹಿಸಿದ್ದ ಪಾತ್ರಕ್ಕೆ ಜೆನಿಲಿಯಾರನ್ನು ಕೇಳಲಾಗಿತ್ತು, ಆದರೆ ಅವರು ಒಪ್ಪಿಲ್ಲ. ಹಾಗಾಗಿ ಬೇರೊಬ್ಬ ದೊಡ್ಡ ನಟಿಗಾಗಿ ಹುಡುಕಾಟ ಆರಂಭವಾಗಿದೆ. ತೆಲುಗಿನಲ್ಲಿ ಸಿನಿಮಾವನ್ನು ಮೋಹನ್ ರಾಜಾ ನಿರ್ದೇಶನ ಮಾಡುತ್ತಿದ್ದಾರೆ.

  ಚಿರಂಜೀವಿ ಪ್ರಸ್ತುತ 'ಆಚಾರ್ಯ' ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾವು ಫೆಬ್ರವರಿ 04 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಸಹ ನಟಿಸಿದ್ದು, ಸಿನಿಮಾಕ್ಕೆ ಬಂಡವಾಳವನ್ನೂ ಅವರೇ ಹೂಡಿದ್ದಾರೆ. ಸಿನಿಮಾದ ನಿರ್ದೇಶನದ ಮಾಡಿರುವುದು ಕೊರಟಾಲ ಶಿವ.

  English summary
  American pop singer Britney spears singing special song in Chiranjeevi starer Telugu movie God Father. Movie directing by Mohan Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X