For Quick Alerts
  ALLOW NOTIFICATIONS  
  For Daily Alerts

  ಬುಲೆಟ್ ಸ್ಪೀಡಲ್ಲಿ ಹುಚ್ಚೆಬ್ಬಿಸುತ್ತಿದೆ 'ಬುಲೆಟ್ ಬಂಡಿ' ಹಾಡು!

  By ರವೀಂದ್ರ ಕೊಟಕಿ
  |

  'ನಿ ಬುಲೆಟ್ ಬಂಡಿ ಎಕಿ ವಚೆಸ್ತಾ ಪ ಡುಕ್ಕು ಡುಕ್ಕು ಅನಿ...' ಸದ್ಯಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಹಾಡಿಗಿರುವ ಕ್ರೇಜ್ ಯಾವುದೇ ಸಿನಿಮಾನಟರ ಹಾಡಿಗೂ ಇಲ್ಲ. ಅಷ್ಟರಮಟ್ಟಿಗೆ ಈ ವಿಡಿಯೋ ಆಲ್ಬಮ್ ಸಾಂಗ್ ಗೆ ಜನ ಫಿದಾ ಆಗಿದ್ದಾರೆ. ಹಳ್ಳಿಗಳ ಓಣಿಯಿಂದ ಹಿಡಿದು ನಗರಗಳ ಗಲ್ಲಿವರೆಗೂ, ಎಲ್ಲಿ ನೋಡಿದರೂ ಇದೊಂದೇ ಹಾಡು! ಅಂತಹ ಮೋಡಿ ಮಾಡಿದೆ ಬುಲೆಟ್ ಈ ಹಾಡು.

  ಹಾಗಂತ ಇದು ನಿನ್ನೆ ಮೊನ್ನೆ ಬಿಡುಗಡೆಯಾದ ಹಾಡಲ್ಲ. ಇದನ್ನ ಸುಮಾರು 4 ತಿಂಗಳ ಹಿಂದೆ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಆಗ ತಕ್ಕಮಟ್ಟಿಗೆ ಜನರಿಂದ ಅಭಿಪ್ರಾಯ ವ್ಯಕ್ತವಾಗಿತ್ತು, ಆದರೆ ಕಳೆದೊಂದು ತಿಂಗಳಿಂದ ಇದು ಜನರ ಹೃದಯಕ್ಕೆ ಯಾವ ಪರಿ ಲಗ್ಗೆ ಹಾಕಿದೆ ಎಂದರೆ ಖ್ಯಾತ ನಟರ ಹಾಡುಗಳು ಕೂಡ ಇದರ ಮುಂದೆ ಸಪ್ಪೆ ಎನಿಸುವಂತಿದೆ. ಇಷ್ಟಕ್ಕೂ ಈ ಹಾಡು ಎಷ್ಟು ಜನಪ್ರಿಯವಾಗಲು ಕಾರಣವೇನು? ಈ ಆಲ್ಬಮ್ ಸಾಂಗ್ ಅಲ್ಲಿ ಅಂತಹದು ಏನಿದೆ? ಇದು ಇಷ್ಟು ಜನಪ್ರಿಯವಾಗಿದ್ದು ಹೇಗೆ? ಮುಂದೆ ಓದಿ...

  ಜೋಕೆ-ಜೋಕೆ ಮೇಕೆ: ಹಸಿವಿನ ಕತೆ ಹೇಳುತ್ತಿದೆ 'ಪುಷ್ಪ' ಹಾಡುಜೋಕೆ-ಜೋಕೆ ಮೇಕೆ: ಹಸಿವಿನ ಕತೆ ಹೇಳುತ್ತಿದೆ 'ಪುಷ್ಪ' ಹಾಡು

  4 ತಿಂಗಳ ಹಿಂದೆ ಬಿಡುಗಡೆಯಾದ ಹಾಡು!

  4 ತಿಂಗಳ ಹಿಂದೆ ಬಿಡುಗಡೆಯಾದ ಹಾಡು!

  ಪ್ರಸ್ತುತ ಈ ಹಾಡನ್ನು ಸುಮಾರು 60M (ಆರು ದಶಲಕ್ಷ) ಯೂಟ್ಯೂಬ್ನಲ್ಲಿ ವೀಕ್ಷಣೆ ಮಾಡಿದ್ದಾರೆ. ಕಳೆದ ತಿಂಗಳಿನವರೆಗೆ ಇದು 10M ದಾಟಿರಲಿಲ್ಲ. ಆದರೆ ಈಗ ಅದು ಸರಿಸುಮಾರು ಸುಮಾರು 20 ದಿನಗಳಲ್ಲಿ 50M ಜನ ಇದನ್ನು ವೀಕ್ಷಿಸಿದ್ದಾರೆ ಮತ್ತು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ನೋಡಿದ ಪ್ರತಿಯೊಬ್ಬರೂ ಸೋಶಿಯಲ್ ಮೀಡಿಯಾಗಳಲ್ಲಿ ಇದನ್ನ ಶೇರ್ ಮಾಡಿಕೊಳ್ಳುವ ಮೂಲಕ ಇದನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ. ತೆಲುಗಿನ ಯುವ ಗಾಯಕಿ ಮೋಹನ ಭೋಗರಾಜು ಈ ಹಾಡನ್ನು ಹಾಡಿ, ವಿಡಿಯೋ ಆಲ್ಬಮ್ ನಲ್ಲಿ ಆಕ್ಟಿಂಗ್ ಕೂಡ ಮಾಡಿದ್ದಾರೆ. ತೆಲಂಗಾಣ ಜಾನಪದ ಹಿನ್ನೆಲೆಯ ಸಾಹಿತಿ ಲಕ್ಷ್ಮಣ್ ಇದಕ್ಕೆ ಸಾಹಿತ್ಯ ರಚಿಸಿದ್ದಾರೆ. ಎಸ್ಕೆ ಬಾಜಿ ಅವರ ಸಂಗೀತವಿದೆ.

  ಮನಮುಟ್ಟುವ ಸಾಹಿತ್ಯ

  ಮನಮುಟ್ಟುವ ಸಾಹಿತ್ಯ

  ತೆಲಂಗಾಣದ ಜನಪದ ಮಾತುಗಳನ್ನೇ ಸಾಹಿತಿ ಲಕ್ಷ್ಮಣ್ ಅವರು ಈ ಹಾಡಿನಲ್ಲಿ ತುಂಬಿದ್ದಾರೆ. ಮದುವೆ ವಯಸ್ಸಿಗೆ ಬಂದ ಹಳ್ಳಿಯ ಮುಗ್ಧ ಹೆಣ್ಣು ಮಗಳೊಬ್ಬಳು ತನ್ನನ್ನು ಮುಂದೆ ಮದುವೆ ಆಗಲಿರುವ ಭಾವಿ ಪತಿಗೆ, ತನ್ನ ಹಿನ್ನೆಲೆಯನ್ನು ಅವಳು ವಿವರಿಸುತ್ತಾಳೆ. ತನ್ನ ಕುಟುಂಬ ಅಣ್ಣ-ತಮ್ಮಂದಿರ ಜೊತೆ ಬೆಳೆದ ಪರಿ, ಅಪ್ಪ-ಅಮ್ಮನ ಜೊತೆ ಕಲಿಸಿದ ಸಂಸ್ಕಾರಗಳು, ಪ್ರೀತಿ. ಹಳ್ಳಿಯ ಸೊಗಡು, ಇದೆಲ್ಲವನ್ನು ವರ್ಣಿಸುವ ಆಕೆ ಮುಂದೆ ತಾನು ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಹೇಗೆ ಗಂಡನೊಂದಿಗೆ, ಅವನ ಕುಟುಂಬದೊಂದಿಗೆ ಜೀವನ ಮಾಡುತ್ತೇನೆ ಅಂತ ಹೇಳುವುದರೊಂದಿಗೆ ಹಾಡು ಮುಕ್ತಾಯವಾಗುತ್ತದೆ.ಒಂದು ಹೆಣ್ಣಿನ ಸಹಜವಾದ ಮದುವೆಯ ಬಯಕೆಯ ಮತ್ತು ಅದರ ಆಸೆ-ಆಕಾಂಕ್ಷೆಗಳ ಹಿನ್ನೆಲೆಯ ಮುಗ್ಧ ಭಾವನೆಗಳ ಅನಾವರಣ ಈ ಹಾಡು.

  ವಿಶ್ವದ ಅತ್ಯಂತ ಶ್ರೀಮಂತ ಗಾಯಕಿ ರಿಹಾನ್ನಾ: ಒಟ್ಟು ಆಸ್ತಿ ಮೌಲ್ಯ ಎಷ್ಟು?ವಿಶ್ವದ ಅತ್ಯಂತ ಶ್ರೀಮಂತ ಗಾಯಕಿ ರಿಹಾನ್ನಾ: ಒಟ್ಟು ಆಸ್ತಿ ಮೌಲ್ಯ ಎಷ್ಟು?

  ಹಾಡಿಗೆ ಕ್ರೇಜ್ ತಂದುಕೊಟ್ಟಿದ್ದು ಸಾಯಿ ಶ್ರೇಯ

  ಹಾಡಿಗೆ ಕ್ರೇಜ್ ತಂದುಕೊಟ್ಟಿದ್ದು ಸಾಯಿ ಶ್ರೇಯ

  ಹೌದು ಈ ದಿನ ಬುಲೆಟ್ ಬಂಡಿ ಇಷ್ಟು ವೈರಲ್ ಆಗಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ತೆಲಂಗಾಣದ ಮಂಚಿರಾಲ ಜಿಲ್ಲೆಗೆ ಸೇರಿದ ನವವಧು ಸಾಯಿ ಶ್ರೇಯ. ಸಾಯಿ ಶ್ರೇಯ ಮತ್ತು ಆಕುಲ ಶಿವ ವಿವಾಹ ಸಂದರ್ಭದಲ್ಲಿ ನವವಧು ಶ್ರೇಯ 'ಬುಲೆಟ್ ಬಂಡಿ ಎಕಿ ವಚೆಸ್ತಾ ಪ ಡುಕ್ಕು ಡುಕ್ಕು ಅನಿ' ಅಂತೇಳಿ ಮದುವೆ ದಿನ ಯಾವ ಹಿಂಜರಿಕೆಯೂ ಇಲ್ಲದೇ ತನ್ನ ಗಂಡನ ಜೊತೆ ಹೆಜ್ಜೆ ಹಾಕಿದಳು. ಎರಡು ವಾರಗಳ ಹಿಂದೆ ಇದನ್ನ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದೆ ತಡ. ಸೋಶಿಯಲ್ ಮೀಡಿಯಾದಲ್ಲಿ ಸಾಯಿ ಶ್ರೇಯ ಡ್ಯಾನ್ಸ್ ಮತ್ತು ಹಾಡು ಜನರ ಮನಸ್ಸಿಗೆ ಲಗ್ಗೆ ಹಾಕಿತ್ತು. ಆಕೆಯ ನೃತ್ಯ ಮಾಡಿದ ಶೈಲಿ ಆಕರ್ಷಿಸಿತು. ಹಾಡು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಈ ಹಾಡು ನೋಡಿದವರೆಲ್ಲ ಮೂಲ ಹಾಡು ನೋಡಲು ಕೂಡ ಮುಗಿದು ಬಿದ್ದರು. ಈಗಂತೂ ಆಂಧ್ರ ಮತ್ತು ತೆಲಂಗಾಣ ದಲ್ಲಿ ಯಾವುದೇ ಮದುವೆ ನಡೆದರೂ ಈ ಹಾಡಿಗೆ ನವವಧು-ವರರು ಕುಣಿಯುವುದು ಟ್ರೆಂಡ್ ಆಗಿದೆ.

  ಶ್ರೇಯಗೆ ಬಂಪರ್ ಆಫರ್

  ಶ್ರೇಯಗೆ ಬಂಪರ್ ಆಫರ್

  ಮೂಲ ವಿಡಿಯೋ ಆಲ್ಬಂಗೆ ಸಿಕ್ಕಷ್ಟೇ ಜನಪ್ರಿಯತೆ ಅಥವಾ ಅದಕ್ಕಿಂತ ಹೆಚ್ಚಿನ ಪಾಪ್ಯುಲಾರಿಟಿ ಸಾಯಿ ಶ್ರೇಯ ಆಡಿಯೋ ಆಲ್ಬಂಗೆ ಸಿಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಸಾಯಿ ಶ್ರೇಯ ಒಂದು ಹಲ್ಚಲ್. ಈಕೆಯ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗಿರುವ ಬುಲೆಟ್ ಬಂಡಿ ವಿಡಿಯೋ ಆಲ್ಬಮ್ ಸಾಂಗ್ ನಿರ್ಮಾಣ ಮಾಡಿದ ಬ್ಲೂ ರ್ಯಾಬಿಟ್, ತನ್ನ ನಿರ್ಮಾಣದ ಮುಂದಿನ ಆಲ್ಬಂ ಸಾಂಗಲ್ಲಿ ಭರ್ಜರಿ ಸ್ಟೆಪ್ಸ್ ಹಾಕುವಂತೆ ಆಫರ್ ಮಾಡಿದೆ. ರಾತ್ರೋರಾತ್ರಿ ಸ್ಟಾರ್ ಆಗಿರುವ ಶ್ರೀಯ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ.

  ರಾಜಕಾರಣಿಗಳು ಆಸ್ಪತ್ರೆಗಳನ್ನು ಬಿಡದ ಬುಲೆಟ್ ಹಾಡು

  ರಾಜಕಾರಣಿಗಳು ಆಸ್ಪತ್ರೆಗಳನ್ನು ಬಿಡದ ಬುಲೆಟ್ ಹಾಡು

  ಈ ಬುಲೆಟ್ ಬಂಡಿ ಈಗ ಎಷ್ಟು ಜನಪ್ರಿಯವಾಗಿದೆ ಎಂದರೆ, ಸಂಸತ್ ಸದಸ್ಯರನ್ನು ಕೂಡ ತನ್ನ ಮೋಡಿಗೆ ಒಳಗಾಗಿಸಿ ಕೊಂಡಿದೆ. ತೆಲಂಗಾಣದ ಮಹಬುಬ್ನಗರ್ ಎಂಪಿ ಕವಿತಾ ಕೂಡ ಮದುವೆ ಒಂದರಲ್ಲಿ ಈ ಹಾಡಿಗೆ ಸಕ್ಕತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ. ಇನ್ನು ಆಸ್ಪತ್ರೆಗಳಲ್ಲಿ ಕೂಡ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದ್ದು. ಕೆಲವು ದಿನಗಳ ಹಿಂದೆ ನರ್ಸುಗಳು ಸಾಮೂಹಿಕವಾಗಿ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು ಈಗ ಎರಡು ದಿನಗಳ ಹಿಂದೆ ನರ್ಸ್ ಒಬ್ಬರು ಪ್ಯಾರಾಲಿಸಿಸ್ ಪೇಷಂಟ್ ಬೆಡ್ ಮುಂದೆ ಕುಣಿದು ಅವರನ್ನ ಸಂತೋಷಪಡಿಸಿದ ಘಟನೆ ಕೂಡ ಈಗ ಯೂಟ್ಯೂಬ್ನಲ್ಲಿ ಹಲ್ಚಲ್ ಮಾಡುತ್ತಿದೆ. ದಿನಕಳೆದಂತೆ ಬುಲೆಟ್ ಬಂಡಿ ವೇಗ ಹೆಚ್ಚಿಸಿಕೊಳ್ಳುತ್ತಲೇ ಇದೆ. ಇನ್ನು ಯಾರು ಯಾರು ಇದರ ಮೋಹಕ್ಕೆ ಒಳಗಾಗುತ್ತಾರೆ ಅಂತ ಕಾದುನೋಡಬೇಕಿದೆ. ತೆಲುಗು ಜಾನಪದ ಆಲ್ಬಮ್ ಹಾಡುಗಳಲ್ಲಿ ಮಂಗ್ಲಿ ಹೆಚ್ಚು ಸದ್ದು ಮಾಡ್ತಿದ್ದಾರೆ.

  English summary
  Bullet Bandi Telugu album song goes Viral on social media. sung by Mohana Bhogaraju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X