ವಿಡಿಯೋ : 'ಬಟರ್ ಪ್ಲೈ'ಗಾಗಿ ಕಾಯ್ಕಿಣಿ ಬರೆದ ಹಾಡು ಬಿಡುಗಡೆ
ಜಯಂತ ಕಾಯ್ಕಿಣಿ ಬರೆದಿರುವ ಹೊಸ ಹೊಸ ಹಾಡುಗಳನ್ನು ಕೇಳುವ ಹಂಬಲ ಅನೇಕರಿಗೆ ಇರುತ್ತದೆ. ಈಗ ಕಾಯ್ಕಿಣಿ ಕುಂಚದ ಒಂದು ಹೊಸ ಹಾಡು ಬಂದಿದೆ. ಇದು 'ಬಟರ್ ಫ್ಲೈ' ಸಿನಿಮಾದ ಎರಡನೇ ಹಾಡಾಗಿದೆ.
ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಪ್ಲೈ' ಚಿತ್ರದ ಹೊಸ ಹಾಡು ಇದೀಗ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. 'ಮೆಲ್ಲ ಕೈ ಹಿಡಿದು ನೀ ತಲುಪಿಸು ಬಾ.. ನನ್ನ ಮನೆ ತನಕ..'' ಎನ್ನುವ ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. 'ಕ್ವೀನ್' ಸಿನಿಮಾಗೆ ಮ್ಯೂಸಿಕ್ ನೀಡಿದ್ದ ಅಮಿತ್ ತ್ರಿವೇದಿ ಅವರ ಸಂಗೀತ ಇಲ್ಲಿದೆ.

ಚಿತ್ರದ ಮೊದಲ ಹಾಡನ್ನು ಯೋಗರಾಜ್ ಭಟ್ ಬರೆದಿದ್ದರು. ಆ ಹಾಡು ಟಪ್ಪಾಂಗುಚಿಯಾಗಿತ್ತು. ಆದರೆ, ಈಗ ಬಂದಿರುವ ಈ ಹಾಡು ತುಂಬ ಭಾವುಕತೆಯಿಂದ ಕೂಡಿದೆ. ಸುಪ್ರಿಯಾ ಜೋಷಿ ಹಾಗೂ ಸತ್ಯ ಪ್ರಕಾಶ್ ಹಾಡಿಗೆ ಧ್ವನಿ ನೀಡಿದ್ದಾರೆ.
ಮನು ಕುಮಾರನ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಪಾರೂಲ್ ಕೋ ಪ್ರೊಡ್ಯೂಸರ್ ಆಗಿದ್ದಾರೆ. ಸೌತ್ ಚಿತ್ರರಂಗದ ನಾಲ್ಕು ಭಾಷೆಗಳಲ್ಲಿ 'ಕ್ವೀನ್' ಸಿನಿಮಾ ರಿಮೇಕ್ ಆಗುತ್ತಿದೆ. ಹಾಡುಗಳು ಹಾಗೂ ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ 'ಬಟರ್ ಫ್ಲೈ' ಸದ್ಯದಲ್ಲಿಯೇ ಹಾರಾಟ ಶುರು ಮಾಡಲಿದೆ.


Click it and Unblock the Notifications