'ಕೆಜಿಎಫ್ 2' ಹಾಡಿನಲ್ಲಿ ರಾಹುಲ್ ಗಾಂಧಿ! ಬೆಂಗಳೂರು ಪೊಲೀಸರಿಂದ ಪ್ರಕರಣ ದಾಖಲು

ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅದಕ್ಕೆ ಕಾರಣ ಕನ್ನಡದ ಸೂಪರ್ ಹಿಟ್ ಸಿನಿಮಾ 'ಕೆಜಿಎಫ್'!

'ಕೆಜಿಎಫ್ 2' ಸಿನಿಮಾದ ಹಾಡೊಂದನ್ನು 'ಭಾರತ್ ಜೋಡೋ ಯಾತ್ರೆ'ಯ ವಿಡಿಯೋ ಒಂದಕ್ಕೆ ಬಳಸಿಕೊಳ್ಳಲಾಗಿದೆ. ಇದು ಆ ಸಂಗೀತದ ಹಕ್ಕು ಪಡೆದಿರುವ ಸಂಸ್ಥೆಯ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ಮೂಲದ ಎಂಆರ್‌ಟಿ ಸಂಸ್ಥೆಯು 'ಕೆಜಿಎಫ್ 2' ಸಿನಿಮಾದ ಹಿಂದಿ ಆಡಿಯೋ ಹಕ್ಕುಗಳನ್ನು ಹೊಂದಿದ್ದು, ಸಿನಿಮಾದ ಹಿಂದಿ ಹಾಡೊಂದನ್ನು 'ಭಾರತ್ ಜೋಡೋ ಯಾತ್ರೆ'ಯ ವಿಡಿಯೋಗೆ ಬಳಸಿರುವ ಕಾರಣ ಇದೀಗ ಎಂಆರ್‌ಟಿ ಸಂಸ್ಥೆ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ವಿಡಿಯೋ ಮಾಡಿರುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗವು ಹಾಡಿನ ಹಕ್ಕು ಹೊಂದಿರುವ ಎಂಆರ್‌ಟಿ ಅವರ ಬಳಿ ಅನುಮತಿ ಪಡೆಯದೇ ಹಾಡನ್ನು ತಮ್ಮ ವಿಡಿಯೋದಲ್ಲಿ ಬಳಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಯಶವಂತಪುರ ಪೊಲೀಸರು ಕಾಂಗ್ರೆಸ್ ಪಕ್ಷ ಸೇರಿದಂತೆ ಪಕ್ಷದ ಪ್ರಮುಖರಾದ ಜೈ ರಾಮ್‌ರಮೇಶ್, ಸುಪ್ರಿಯಾ ಶ್ರೀನಾಥ್ ಹಾಗೂ ರಾಹುಲ್ ಗಾಂಧಿ ಅವರುಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ

ರಾಹುಲ್ ಗಾಂಧಿ ಸ್ಲೋ ಮೋಷನ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋಗೆ ಹಿನ್ನೆಲೆಯಾಗಿ 'ಕೆಜಿಎಫ್ 2' ಸಿನಿಮಾದ ಹಿಂದಿ ಹಾಡನ್ನು ಬಳಸಿಕೊಳ್ಳಲಾಗಿದೆ. ವಿಡಿಯೋದಲ್ಲಿ 'ಭಾರತ್ ಜೋಡೋ ಯಾತ್ರ' ಎಂದು ಬರೆಯಲಾಗಿದೆ. ಇದೇ ವಿಡಿಯೋವನ್ನು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಈಗಾಗಲೇ ಹಲವಾರು ಮಂದಿ ನೋಡಿದ್ದಾರೆ. ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಂಡು ವಾಟ್ಸ್‌ಆಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮಾದರಿಯಾಗಬೇಕಿತ್ತು ಕಾಂಗ್ರೆಸ್: ಎಂಆರ್‌ಟಿ

ಮಾದರಿಯಾಗಬೇಕಿತ್ತು ಕಾಂಗ್ರೆಸ್: ಎಂಆರ್‌ಟಿ

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಂಆರ್‌ಟಿ ಸಂಸ್ಥೆಯ ನವೀನ್‌ ಕುಮಾರ್, ''ಕಾಂಗ್ರೆಸ್‌ನಂಥಹ ಪಕ್ಷವು ಭಾರತೀಯ ನಾಗರಿಕರಿಗೆ ಮಾದರಿಯಾಗಿ ಇರಬೇಕಿತ್ತು, ಆದರೆ ಈ ಸನ್ನಿವೇಶದಲ್ಲಿ, ಅದು ಸ್ವತಃ ಈ ನೆಲದ ಕಾನೂನುಗಳನ್ನು ಉಲ್ಲಂಘಿಸಿದೆ. ನಮ್ಮ ಹಕ್ಕುಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿದೆ. ನಾವು ಆ ಹಾಡಿನ ಹಕ್ಕನ್ನು ದೊಡ್ಡ ಹೂಡಿಕೆ ಮಾಡಿ ಪಡೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷ ಈಗ ಮಾಡಿರುವ ಕಾನೂನು ಉಲ್ಲಂಘನೆಯು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ. ಮತ್ತು ಹಕ್ಕುಸ್ವಾಮ್ಯ ರಕ್ಷಣೆ ಕಾನೂನಿಗೆ ವಿರುದ್ಧವಾಗಿದೆ ಎಂದಿದ್ದಾರೆ.

ಹಲವು ಹಾಡುಗಳ ಹಕ್ಕು ಹೊಂದಿರುವ ಎಂಆರ್‌ಟಿ

ಹಲವು ಹಾಡುಗಳ ಹಕ್ಕು ಹೊಂದಿರುವ ಎಂಆರ್‌ಟಿ

ಎಂಆರ್‌ಟಿ ಸಂಸ್ಥೆಯು ಬೆಂಗಳೂರು ಮೂಲದ ಸಂಸ್ಥೆಯಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ಹಲವು ಆಡಿಯೋಗಳ ಹಕ್ಕುಗಳನ್ನು ಹೊಂದಿದೆ. 'ಕೆಜಿಎಫ್' ಸಿನಿಮಾದ ಕನ್ನಡ ಹಾಡುಗಳು ಹಾಗೂ ಸಂಗೀತದ ಹಕ್ಕು ಲಹರಿ ಖರೀದಿಸಿದ್ದರೆ ಹಿಂದಿಯ ಹಕ್ಕುಗಳನ್ನು ಎಂಆರ್‌ಟಿ ಖರೀದಿಸಿದೆ.

More from Filmibeat

English summary
Case registered in Bengaluru against Rahul Gandhi and Congress for using KGF 2 movie song in a video featuring Rahul Gandhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X