For Quick Alerts
  ALLOW NOTIFICATIONS  
  For Daily Alerts

  'ಅಂಜನಿಪುತ್ರ' ದಾಖಲೆ: 100 ಮಿಲಿಯನ್ ದಾಟಿದ 4ನೇ ಹಾಡು

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆ 'ಅಂಜನಿಪುತ್ರ' ಸಿನಿಮಾ ಹೊಸ ದಾಖಲೆ ಬರೆದಿದೆ. 2017ರಲ್ಲಿ ತೆರೆಕಂಡಿದ್ದ ಈ ಚಿತ್ರದ ಹಾಡು ಯೂಟ್ಯೂಬ್‌ನಲ್ಲಿ 100 ಮಿಲಿಯನ್ ವೀಕ್ಷಣೆ ಕಂಡ ಪಟ್ಟಿ ಸೇರಿದೆ. ಇದುವರೆಗೂ ಕನ್ನಡದಲ್ಲಿ ಕೆಲವೇ ಕೆಲವು ಹಾಡುಗಳು ಮಾತ್ರ 100 ಮಿಲಿಯನ್ ವೀವ್ಸ್ ಕಂಡಿದೆ. ಈ ಪಟ್ಟಿಗೆ ಪವರ್ ಸ್ಟಾರ್ ಸಿನಿಮಾದ ಹಾಡು ಹೊಸದಾಗಿ ಸೇರ್ಪಡೆಗೊಂಡಿದೆ.

  'ಅಂಜನಿಪುತ್ರ' ಸಿನಿಮಾದ 'ಚೆಂದ ಚೆಂದ ನನ್ ಹೆಂಡ್ತಿ.....' ಹಾಡು ಈ ಸಾಧನೆ ಮಾಡಿದೆ. ಉತ್ತರ ಕನ್ನಡ ಶೈಲಿಯ ಸಾಹಿತ್ಯದಲ್ಲಿ ಮೂಡಿ ಬಂದಿದ್ದ ಹಾಡಿನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಸಖತ್ ಆಗಿ ಸ್ಟೆಪ್ ಹಾಕಿದ್ದರು. ಪ್ರಮೋದ್ ಮರವಂತೆ ಬರೆದಿದ್ದ ಸಾಹಿತ್ಯಕ್ಕೆ ರವಿ ಬಸ್ರೂರ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ರವಿ ಬಸ್ರೂರ್ ಮತ್ತು ಅನುರಾಧ ಭಟ್ ಈ ಹಾಡಿಗೆ ಧ್ವನಿಯಾಗಿದ್ದರು.

  'ಟಿಣಿಂಗಾ ಮಿಣಿಂಗಾ' ಕೇಳಿ ವಾಹ್ ಎಂದ ಫೈಟ್ ಮಾಸ್ಟರ್ಸ್ ರಾಮ್-ಲಕ್ಷ್ಮಣ್'ಟಿಣಿಂಗಾ ಮಿಣಿಂಗಾ' ಕೇಳಿ ವಾಹ್ ಎಂದ ಫೈಟ್ ಮಾಸ್ಟರ್ಸ್ ರಾಮ್-ಲಕ್ಷ್ಮಣ್

  ಈ ಮೂಲಕ ಕನ್ನಡ ಚಿತ್ರರಂಗದಲ್ಲಿ 100 ಮಿಲಿಯನ್ ವೀಕ್ಷಣೆ ಕಂಡ 4ನೇ ವಿಡಿಯೋ ಹಾಡು ಇದಾಗಿದೆ. ಪುನೀತ್ ರಾಜ್ ಕುಮಾರ್ ನಟನೆಯ ಮೊದಲ ಹಾಡು 100 ಮಿಲಿಯನ್ ಕ್ಲಬ್ ಸೇರಿದೆ. ಪಿಆರ್‌ಕೆ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ಮೊದಲ ಹಾಡು ಈ ಸಾಧನೆ ಮಾಡಿದೆ. ಇದರ ಜೊತೆಗೆ ಲಿರಿಕಲ್ ವಿಡಿಯೋ ಮತ್ತು ವಿಡಿಯೋ ಸಾಂಗ್ ಸೇರಿ 100 ಮಿಲಿಯನ್ ವೀಕ್ಷಣೆ ಕಂಡಿರುವ ಕೆಲವು ಹಾಡುಗಳ ಸಹ ಇದೆ. ಮುಂದೆ ಓದಿ....

  2 ವರ್ಷದಲ್ಲಿ 100 ಮಿಲಿಯನ್

  2 ವರ್ಷದಲ್ಲಿ 100 ಮಿಲಿಯನ್

  ಹರ್ಷ ನಿರ್ದೇಶಿಸಿದ್ದ 'ಅಂಜನಿಪುತ್ರ' 2017ರಲ್ಲಿ ತೆರೆಕಂಡಿತ್ತು. ಆದರೆ, 'ಚೆಂದ ಚೆಂದ ನನ್ ಹೆಂಡ್ತಿ....' ವಿಡಿಯೋ ಹಾಡು 2018ರ ಜನವರಿ ತಿಂಗಳಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ಇದುವರೆಗೂ 1 (100,039,535) ಮಿಲಿಯನ್ ವೀಕ್ಷಣೆ ಕಂಡಿದೆ. 217K ಲೈಕ್ಸ್ ಬಂದಿದೆ. 59K ಡಿಸ್‌ಲೈಕ್ಸ್ ಬಂದಿದೆ.

  'ಭಜರಂಗಿ-2' ಕೈಲಾಶ್ ಕೇರ್ ಹಾಡಿಗೆ ಅಭಿಮಾನಿಗಳು ಫಿದಾ: ಟಾಪ್ ಟ್ರೆಂಡಿಂಗ್ ನಲ್ಲಿ ಶಿವಣ್ಣನ ಸಾಂಗ್'ಭಜರಂಗಿ-2' ಕೈಲಾಶ್ ಕೇರ್ ಹಾಡಿಗೆ ಅಭಿಮಾನಿಗಳು ಫಿದಾ: ಟಾಪ್ ಟ್ರೆಂಡಿಂಗ್ ನಲ್ಲಿ ಶಿವಣ್ಣನ ಸಾಂಗ್

  ಬೆಳಗೆದ್ದು ಯಾರ ಮುಖವಾ ನಾನು ನೋಡಲಿ

  ಬೆಳಗೆದ್ದು ಯಾರ ಮುಖವಾ ನಾನು ನೋಡಲಿ

  'ಕಿರಿಕ್ ಪಾರ್ಟಿ' ಸಿನಿಮಾದ 'ಬೆಳಗೆದ್ದು ಯಾರ ಮುಖವಾ ನಾನು ನೋಡಲಿ.....' ಹಾಡು ಮೊದಲ ಸಲ 100 ಮಿಲಿಯನ್ ವೀಕ್ಷಣೆ ಕಂಡಿತ್ತು. 2021ರ ನವೆಂಬರ್ ತಿಂಗಳಿಗೆ ಈ ಹಾಡು ಬಂದು ಐದು ವರ್ಷ ಆಗಲಿದೆ. ಇದುವರೆಗೂ ಈ ಹಾಡಿನ ವೀಕ್ಷಣೆ ಈಗ 105 ಮಿಲಿಯನ್ (105,092,338) ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು.

  ಚುಟು ಚುಟು ಅಂತೈತೆ..

  ಚುಟು ಚುಟು ಅಂತೈತೆ..

  ಶರಣ್-ಆಶಿಕಾ ರಂಗನಾಥ್ ನಟನೆಯಲ್ಲಿ ಮೂಡಿ ಬಂದಿದ್ದ Rambo 2 ಚಿತ್ರದ 'ಚುಟು ಚುಟು...' ಹಾಡು 100 ಮಿಲಿಯನ್ ವೀಕ್ಷಣೆ ಕಂಡಿದೆ. 2018ರಲ್ಲಿ ಈ ವಿಡಿಯೋ ಸಾಂಗ್ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದೆ. ಇದುವರೆಗೂ 146 ಮಿಲಿಯನ್ (146,369,261) ವೀಕ್ಷಣೆ ಪಡೆದಿದೆ. ಈ ಹಾಡಿಗೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದರು.

  ಖರಾಬು ಹಾಡು 200 ಮಿಲಿಯನ್

  ಖರಾಬು ಹಾಡು 200 ಮಿಲಿಯನ್

  ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ಖರಾಬು ಹಾಡು 261 ಮಿಲಿಯನ್ ವೀಕ್ಷಣೆ ಕಂಡಿದೆ. ಕನ್ನಡದಲ್ಲಿ ಅತಿ ಹೆಚ್ಚು ವೀವ್ಸ್ ಕಂಡಿರುವ ಹಾಡು ಇದಾಗಿದೆ. ನಂದಕಿಶೋರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಚಂದನ್ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಖರಾಬು ಹಾಡನ್ನು ಸ್ವತಃ ಚಂದನ್ ಶೆಟ್ಟಿ ಹಾಡಿದ್ದರು.

  ಯಾಕಮ್ಮಿ ಯಾಕಮ್ಮಿ

  ಯಾಕಮ್ಮಿ ಯಾಕಮ್ಮಿ

  ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟನೆಯ ಅಯೋಗ್ಯ ಸಿನಿಮಾದ 'ಯಾಕಮ್ಮಿ ಯಾಕಮ್ಮಿ.....' ವಿಡಿಯೋ ಹಾಡು ಮತ್ತು ಲಿರಿಕಲ್ ವಿಡಿಯೋ ಸಾಂಗ್ ಸೇರಿ 100 ಮಿಲಿಯನ್ ವೀಕ್ಷಣೆ ಕಂಡಿದೆ. ವಿಡಿಯೋ ಸಾಂಗ್ 96 (96,650,753) ಮಿಲಿಯನ್ ಮತ್ತು ಲಿರಿಕಲ್ ವಿಡಿಯೀ 48 (48,557,596) ಮಿಲಿಯನ್ ವೀಕ್ಷಣೆ ಕಂಡಿದೆ. ಈ ಹಾಡಿಗೂ ಅರ್ಜುನ್ ಜನ್ಯ ಸಂಗೀತ ಒದಗಿಸಿದ್ದರು.

  'ರಾಬರ್ಟ್' 100 ಮಿಲಿಯನ್

  'ರಾಬರ್ಟ್' 100 ಮಿಲಿಯನ್

  ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ 'ಕಣ್ಣು ಹೊಡಿಯಾಕ...' ಹಾಡು 100 ಮಿಲಿಯನ್ ವೀಕ್ಷಣೆ ಕಂಡಿದೆ. ವಿಡಿಯೋ ಸಾಂಗ್ 82 (82,776,757) ಮಿಲಿಯನ್ ಮತ್ತು ಲಿರಿಕಲ್ ವಿಡಿಯೋ 39 (39,940,396) ಮಿಲಿಯನ್ ವೀಕ್ಷಣೆ ಕಂಡಿದ್ದು, ಎರಡು ಸೇರಿ 100 ಮಿಲಿಯನ್ ಆಗಿದೆ.

  English summary
  Chanda Chanda song from Puneeth rajkumar starrer Anjaniputra Reaches 100 Million views In Youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X