'ಪಾರ್ಟಿ ಫ್ರೀಕ್' ನಲ್ಲಿ ಚಂದನ್ ಶೆಟ್ಟಿ ಜೊತೆ ನಿಶ್ವಿಕಾ ನಾಯ್ಡು ಮಸ್ತ್ ಡ್ಯಾನ್ಸ್

ಗಾಯಕ ಚಂದನ್ ಶೆಟ್ಟಿ ಹೊಸ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಪಾರ್ಟಿ ಸಾಂಗ್ ಗಳ ಮೂಲಕ ಅಭಿಮಾಗಳನ್ನು ಹೆಚ್ಚು ಸೆಳೆದಿರುವ ಚಂದನ್ ಶೆಟ್ಟಿ ಇದೀಗ ಹೊಸ ವರ್ಷಕ್ಕೆ ಮತ್ತೊಂದು ಪಾರ್ಟಿ ಸಾಂಗ್ ಮಾಡಲು ಸಜ್ಜಾಗಿದ್ದಾರೆ. 'ಮೂರೇ ಮೂರು ಪೆಗ್ಗಿಗೆ', 'ಟಕೀಲಾ..' ಪಾರ್ಟಿ ಸಾಂಗ್ ಗಳ ಬಳಿಕ ಬೇರೆ ಹಾಡುಗಳನ್ನು ಮಾಡಿದರೇ ಹೊರತು, ಪಾರ್ಟಿ ಹಾಡುಗಳನ್ನು ಮಾಡಿರಲಿಲ್ಲ.

ಹೊಸ ವರ್ಷದ ಪ್ರಯುಕ್ತ ಕಿಕ್ಕೇರಿಸಲು ಚಂದನ್ ಶೆಟ್ಟಿ ಪಾರ್ಟಿ ಸಾಂಗ್ ಮೂಲಕ ಆಗಮಿಸುತ್ತಿದ್ದಾರೆ. ಈ ಸಲ ಒಂದಷ್ಟು ವಿಶೇಷಗಳ ಜತೆಗೆ ಚಂದನ್ ಶೆಟ್ಟಿ ಎಂಟ್ರಿಯಾಗುತ್ತಿದೆ. ಕನ್ನಡದ ಜತೆಗೆ ತೆಲುಗಿನಲ್ಲಿಯೂ ಈ ಹಾಡು ಮೂಡಿಬರಲಿದ್ದು, ಅದ್ಧೂರಿ ವೆಚ್ಚದಲ್ಲಿ, ಕಲರ್ ಫುಲ್ ಸೆಟ್ ನಲ್ಲಿ ಎರಡು ದಿನ ಹಾಡಿನ ಶೂಟಿಂಗ್ ನಡೆಯಲಿದೆ.

ಬೆಂಗಳೂರಿನ ದೊಡ್ಡ ದೊಡ್ಡ ಹೋಟೆಲ್ ಮತ್ತು ಪಬ್ ಗಳಲ್ಲಿ ಈ ಹಾಡಿನ ಚಿತ್ರೀಕರಣವಾಗಲಿದೆ. ಈ ಹಾಡಿಗೆ 'ಪಾರ್ಟಿ ಫ್ರೀಕ್' ಎಂದು ಟೈಟಲ್ ಇಡಲಾಗಿದೆ. ಈ ಹಾಡಿನಲ್ಲಿ ಚಂದನ್ ಶೆಟ್ಟಿ ಸಂಗೀತ ನೀಡಿ, ಸಾಹಿತ್ಯ ಬರೆದು ಧ್ವನಿ ನೀಡಿ ಹಾಡಿನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ನಟಿ ನಿಶ್ವಿಕಾ ನಾಯ್ಡು ಈ ಕಲರ್ ಫುಲ್ ಹಾಡಿನಲ್ಲಿ ಮಸ್ತ್ ಡಾನ್ಸ್ ಮಾಡಲಿದ್ದಾರೆ.

 Chandan Shetty and Nishvika naidu starrer party song will release on new year

ಅಷ್ಟೇ ಅಲ್ಲ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಸಹ ಈ ಹಾಡಿನಲ್ಲಿರಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಧರ್ಮ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಮೋಹನ್ ಮಾಸ್ಟರ್ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಈ ವರ್ಷದ ನ್ಯೂ ಇಯರ್ ಪಾರ್ಟಿ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಮನೆಯಲ್ಲಿಯೇ ಕುಟುಂಬದವರೊಂದಿಗೆ ಆಚರಿಸುವಂತೆ ಹೇಳಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಈ ಹಾಡನ್ನು ಚಿತ್ರೀಕರಿಲು ಚಂದನ್ ಶೆಟ್ಟಿ ಪ್ಲಾನ್ ಮಾಡಿದ್ದಾರೆ. ಈ ಹಾಡು ಯುನೈಟ್ ಆಡಿಯೋಸ್ ನಲ್ಲಿ ಡಿ.26ರಂದು ಬಿಡುಗಡೆ ಮಾಡಲಿದೆ.

Recommended Video

ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada

More from Filmibeat

English summary
Kannada Rapper Chandan Shetty and Nishvika naidu starrer party song will release on new year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X