ತುಪ್ಪದ ಹುಡುಗಿ ರಾಗಿಣಿ ಫ್ರಾಕು, ಜುಮ್ಕಿ ಕೇಳಿದ್ರೆ, ನೈಂಟಿ ತಂದು ಕೊಡ್ತೀನಿ ಎಂದ ಚಂದನ್ ಶೆಟ್ಟಿ!
ರಾಗಿಣಿ- ಚಂದನ್ ಶೆಟ್ಟಿ ಹೆಜ್ಜೆ ಹಾಕಿರುವ 'ಟುನ್ ಟುನ್' ಸ್ಪೆಷಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದ ಪ್ರಮೋಷನ್‌ಗಾಗಿ ಈ ಸಾಂಗ್ ಮಾಡಲಾಗಿದೆ. ಚಂದನ್ ಶೆಟ್ಟಿ ಟ್ಯೂನ್ ಹಾಕಿ, ಲಿರಿಕ್ಸ್ ಬರೆದು, ಹಾಡಿ ಕುಣಿದಿದ್ದಾರೆ. ತುಪ್ಪದ ಹುಡುಗಿ ರಾಗಿಣಿ ಸಾಥ್ ಕೊಟ್ಟಿದ್ದಾರೆ.
ಕಲರ್‌ಫುಲ್ ಸೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಈ ಸಾಂಗ್ ಕಟ್ಟಿಕೊಡಲಾಗಿದೆ. ವೆರೈಟಿ ವೆರೈಟಿ ಕಾಸ್ಟ್ಯೂಮ್‌ಗಳಲ್ಲಿ ರಾಗಿಣಿ ಹಾಗೂ ಚಂದನ್ ಬಿಂದಾಸ್ ಹೆಜ್ಜೆ ಹಾಕಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ಇಬ್ಬರ ಹೆಜ್ಜೆಗೆ ಹೆಜ್ಜೆ ಸೇರಿಸಿದ್ದಾರೆ. ಮುರಳಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಮೂಡಿ ಬಂದಿದೆ. ಚಂದನ್ ಶೆಟ್ಟಿ ಜೊತೆಗೆ ತೆಲುಗು ಗಾಯಕಿ ಮಂಗ್ಲಿ ಹಾಡು ಹಾಡಿರೋದು ವಿಶೇಷ.

ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬಹಳ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಲಾಗಿದೆ. ಚಂದನ್ ತಮ್ಮ ಕಲೋಕಿಯಲ್ ಲಿರಿಕ್ಸ್‌ನಿಂದ ಜಾದೂ ಮಾಡುವ ಪ್ರಯತ್ನ ಮಾಡಿದ್ದಾರೆ. 'ಟುನ್ ಟುನ್' ಸಾಂಗ್ ಕೇಳುಗರ ಗಮನ ಸೆಳೆದಿದೆ. ಆದರೂ ಚಂದನ್ ಶೆಟ್ಟಿ ಮ್ಯಾಜಿಕ್ ಅಷ್ಟಾಗಿ ವರ್ಕ್ ಆಗಿಲ್ಲ.
ಇನ್ನು ಬಹಳ ದಿನಗಳ ನಂತರ ರಾಗಿಣಿ ಈ ರೀತಿ ಸ್ಪೆಷಲ್ ಸಾಂಗ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದಲ್ಲಿ ಸ್ವತಃ ಚಂದನ್ ಶೆಟ್ಟಿ ಹೀರೊ ಆಗಿ ನಟಿಸುತ್ತಿದ್ದಾರೆ. ಆಲ್ಬಮ್ ಸಾಂಗ್ಸ್, ಸಿನಿಮಾ ಮ್ಯೂಸಿಕ್‌ನಿಂದ ಗಮನ ಸೆಳೆದಿದ್ದ ರ್ಯಾಪರ್ ಚಂದನ್ ಶೆಟ್ಟಿ ಹೀರೊ ಆಗಿ ಅದೃಷ್ಟ ಪರೀಕ್ಷೆಗೆ ಇಳಿತ್ತಿದ್ದಾರೆ.
ಈ ಹಿಂದೆ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸಿನಿಮಾ ಕಟ್ಟಿಕೊಟ್ಟಿದ್ದ ನಟ, ನಿರ್ದೇಶಕ ಸುಜಯ್ ಶಾಸ್ತ್ರಿ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿರುವಂತೆ ಕಾಣುತ್ತಿದೆ. ಜಗದೀಶ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಗೋಕುಲ ಎಂಟರ್‌ಪ್ರೈಸಸರ್ ಬ್ಯಾನರ್‌ನಲ್ಲಿ ಉಷಾ ಗೋವಿಂದರಾಜು ನಿರ್ಮಾಣ ಮಾಡುತ್ತಿದ್ದಾರೆ.

'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರಕ್ಕೆ ರಾಜ್ಗುರು ಹೊಸಕೋಟೆ ಕತೆ, ಚಿತ್ರಕತೆ, ಸಂಭಾಷಣೆಯನ್ನು ರಚಿಸಿದ್ದಾರೆ. ಪ್ರವೀಣ್- ಪ್ರದೀಪ್ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣ, ಚಿತ್ರಕ್ಕಿದೆ. ಸದ್ಯ ಈ ಪ್ರಮೋಷನಲ್ ಸಾಂಗ್‌ನಿಂದ ಸಿನಿಮಾ ಬಗ್ಗೆ ಬಝ್ ಕ್ರಿಯೇಟ್ ಮಾಡುವ ಪ್ರಯತ್ನ ನಡೀತಿದೆ. ಅರ್ಚನಾ ಕೊಟ್ಟಿಗೆ, ತಾರಾ, ಮಂಡ್ಯ ರಮೇಶ್, ಮಂಜು ಪಾವಗಡ, ದತ್ತಣ್ಣ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.


Click it and Unblock the Notifications











