ವಿಡಿಯೋ : ಚಂದನ್ ಶೆಟ್ಟಿ ಹೊಸ ರಾಪ್ ಹಾಡು 'ಟಕಿಲ' ರಿಲೀಸ್
ಕನ್ನಡ ರಾಪರ್ ಚಂದನ್ ಶೆಟ್ಟಿ ಸದ್ಯ 'ಬಿಗ್ ಬಾಸ್' ನಲ್ಲಿದ್ದಾರೆ. ಆದರೆ ಈಗ ಅವರ ಹೊಸ ರಾಪ್ ಹಾಡು ರಿಲೀಸ್ ಆಗಿದೆ. 'ಬಿಗ್ ಬಾಸ್' ವೇದಿಕೆಯಲ್ಲಿಯೇ ಈ ಹಾಡನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.
ಚಂದನ್ ಶೆಟ್ಟಿ ಹೊಸ ರಾಪ್ ಹಾಡು 'ಟಕಿಲ' ಹಾಡು ಈಗ ಯೂ ಟ್ಯೂಬ್ ನಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಂಡಿದೆ. ಹಾಡು ರಿಲೀಸ್ ಆದ 24 ಗಂಟೆಯ ಒಳಗೆ 57 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಬಾರಿ ಎಣ್ಣೆ ಹಾಡು ಹೇಳಿರುವ ಚಂದನ್ ಮತ್ತೆ ಕೇಳುಗರಿಗೆ ಕಿಕ್ ನೀಡಿದ್ದಾರೆ.

ಈ ಹಾಡಿಗೆ ಸಂಗೀತ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರೇ ನೀಡಿದ್ದಾರೆ. ಹಾಡಿನಲ್ಲಿ ಅವರ ಜೊತೆಗೆ ಶಾಲಿನಿ ಗೌಡ ಹೆಜ್ಜೆ ಹಾಕಿದ್ದಾರೆ. ಇಂದು ಪಕ್ಕಾ ಕನ್ನಡ ಪಾರ್ಟಿ ಸಾಂಗ್ ಆಗಿದೆ. ಈ ಹಿಂದಿನಂತೆ ಇಲ್ಲಿಯೂ ಚಂದನ್ ಮ್ಯೂಸಿಕ್ ಮತ್ತು ಲಿರಿಕ್ಸ್ ಗಮನ ಸೆಳೆಯುತ್ತದೆ. 'ಪಕ್ಕಾ ಚಾಕ್ಲೇಟ್ ಗರ್ಲ್..' ಹಾಡಿನ ಬಳಿಕ ಚಂದನ್ 'ಟಕಿಲ' ಹಾಡನ್ನು ಮಾಡಿದ್ದಾರೆ.
More from Filmibeat
English summary
Watch Video : Kannada rapper and Bigg Boss Kannada 5 contestants Chandan Shetty's 'Tequila' kannada rap song released.
chandan shetty bigg boss kannada 5 bigg boss kannada 5 contestants song ಚಂದನ್ ಶೆಟ್ಟಿ ಬಿಗ್ ಬಾಸ್ ಕನ್ನಡ 5 ಬಿಗ್ ಬಾಸ್


Click it and Unblock the Notifications











